ಮನೆ ಅಪರಾಧ ಅಪಾರ ಪ್ರಮಾಣದ ಪದಾರ್ಥಗಳನ್ನು ದೋಚಿದ್ದ ಆರೋಪಿಗಳ ಬಂಧನ

ಅಪಾರ ಪ್ರಮಾಣದ ಪದಾರ್ಥಗಳನ್ನು ದೋಚಿದ್ದ ಆರೋಪಿಗಳ ಬಂಧನ

0

ಮದ್ದೂರು: ಮನೆ ಬಾಗಿಲು ಮುರಿದು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಪದಾರ್ಥಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮದ್ದೂರು ಪೋಲೀಸರು ಯಶಸ್ವಿಯಾಗಿದ್ದಾರೆ.

Join Our Whatsapp Group


ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಳೆಕೋಟೆ ಗ್ರಾಮದ ಎಚ್.ಹನುಮಂತುರಾಜು ಬಂಧಿತ ಆರೋಪಿಯಾಗಿದ್ದು ಈತನ ಬಳಿ ಇದ್ದ ೧೪೨ ಗ್ರಾಂ ತೂಕದ ೧೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ೧.೩೦೦ ಗ್ರಾಂನ ೧.೪ ಲಕ್ಷ ರೂ. ಮೌಲ್ಯದ ಬೆಳ್ಳಿ ಪದಾರ್ಥಗಳು ಒಟ್ಟು ೧೧ ಲಕ್ಷ ೪ ಸಾವಿರ ರೂ. ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಆರೋಪಿಯಿಂದ ಪೋಲೀಸರು ವಶ ಪಡಿಸಿಕೊಂಡಿದ್ದಾರೆ.


ಪಟ್ಟಣದ ಹೊಳೆಬೀದಿ ನಿವಾಸಿ ಎಂ.ಆರ್.ಕೆಂಪಶೆಟ್ಟಿ ಮತ್ತು ರಂಗಸ್ವಾಮಿ ಸೇರಿದಂತೆ ಕೆ.ಎಚ್.ನಗರ ಬಡಾವಣೆಯ ಡಾ||ಶಿವರಾಮು ರವರ ಮನೆಯಲ್ಲಿ ಡಿ.೧೯ ಮತ್ತು ೨೨ ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬಾಗಿಲು ಮುರಿದು ಚಿನ್ನಾಭರಣಗಳು, ಬೆಳ್ಳಿ ಕಳವು ಮಾಡಿ ಪರಾರಿಯಾಗಿರುವ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣ ದಾಖಲಾದ ಸಂಬಂಧ ಮಂಡ್ಯ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ, ಬಾಲದಂಡಿ ಉಪಅಧೀಕ್ಷಕರಾದ ಸಿ.ವಿ.ತಿಮ್ಮಯ್ಯ, ಎಸ್.ಇ. ಗಂಗಾಧರಸ್ವಾಮಿ, ಮಳವಳ್ಳಿ ಡಿ.ವೈ.ಎಸ್.ಪಿ ಕೃಷ್ಣಪ್ಪ ಹಾಗೂ ಸಿ.ಪಿ.ಐ ಗಳಾದ ಶಿವಕುಮಾರ್ ಹಾಗೂ ವೆಂಕಟೇಗೌಡ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.


ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವೇಳೆ ಸ್ಥಳೀಯ ಪೋಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಸದರಿ ಆರೋಪಿಯು ರಾತ್ರಿ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಆಯುಧಗಳಿಂದ ಮನೆಯ ಬಾಗಿಲು ಮುರಿದು ಚಿನ್ನಾಭರಣಗಳನ್ನು ಮತ್ತು ಬೆಳ್ಳಿ ಸಾಮಾನುಗಳನ್ನು ಕಳವು ಮಾಡುತ್ತಿದ್ದು ಈ ಸಂಬಂಧ ಈ ಹಿಂದೆ ರಾಮನಗರ ಜಿಲ್ಲೆಯ ಹಾರೋಹಳ್ಳಿ, ಕನಕಪುರ, ಮಾದನಾಯಕನಹಳ್ಳಿ, ತಾವರೆಕೆರೆ ಮತ್ತು ಮಳವಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ.


ಮದ್ದೂರು ಠಾಣೆಯ ಸಿ.ಪಿ.ಐ ಗಳಾದ ಶಿವಕುಮಾರ್ ಹಾಗೂ ಗ್ರಾಮಾಂತರ ಸಿ.ಪಿ.ಐ ವೆಂಕಟೇಗೌಡ, ಪಿ.ಎಸ್.ಐ ಮಂಜುನಾಥ್, ರವಿ ಮತ್ತು ಸಿಬ್ಬಂಧಿಯವರಾದ ಚಿರಂಜೀವಿಪೂಜಾರ್, ಪ್ರಸನ್ನ, ವಿಷ್ಣುವರ್ಧನ, ಓಂಕಾರಪ್ಪ, ಗಿರೀಶ್, ರವಿಕಿರಣ್, ಲೋಕೇಶ್, ರಂಜಿತ್, ಚಲುವರಾಜ್ ರವರ ತಂಡವನ್ನು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಭಿನಂದಿಸಿದ್ದಾರೆ.