ಮನೆ ಆರೋಗ್ಯ ಮಕ್ಕಳಲ್ಲಿ ಮೂತ್ರಪಿಂಡ ವೈಫಲ್ಯದ ಲಕ್ಷಣ

ಮಕ್ಕಳಲ್ಲಿ ಮೂತ್ರಪಿಂಡ ವೈಫಲ್ಯದ ಲಕ್ಷಣ

0

     ಈ ಮೂತ್ರಪಿಂಡವ್ಯಾಧಿಯು ಈಗ ಸಣ್ಣ ವಯಸ್ಸಿನಲ್ಲೂ ಕಾಣಿಸಿಕೊಳ್ಳುತ್ತದೆ.ಮಕ್ಕಳಲ್ಲಿ ಬರುವ ಮೂತ್ರ ಸಂಬಂಧವಾದ ವ್ಯಾಧಿ ಸರಿಯಾಗಿ ಗುರ್ತಿಸದೇ ಹೋಗುವುದು, ಇಲ್ಲವೇ ಸರಿಯಾದ ಚಿಕಿತ್ಸೆ ಮಾಡಿಸದೆ ಇರುವುದು. ದೊಡ್ಡವರಾದ ಮೇಲೆ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮಕ್ಕಳಲ್ಲಿ ಬರುವ ವ್ಯಾಧಿಗಳಿಗೆ ಆಹಾರ, ಪಥ್ಯದಲ್ಲಿ ಲೋಪಗಳು, ಹಿರಿಯರಾದಾಗ ದೀರ್ಘಾವ್ಯಾಧಿಗೆ ಕಾರಣವಾಗುತ್ತದೆ. ಯುರೇಟರ್ ಕಿಡ್ನಿಗಳಿಂದ ಮೂತ್ರವನ್ನು ತೆಗೆದುಕೊಂಡು  ಮೂತ್ರಾಶಯದೊಳಗೆ ಬಿಡುವ ಸ್ಥಳ ಇಲ್ಲಿ ಬಾಗಿಲಿನಂತೆ ಇರುತ್ತದೆ.

Join Our Whatsapp Group

        ಅದು ಮೂತ್ರವನ್ನು ಬ್ಲಾಡರ್ ಗೆ ಬಿಟ್ಟ ನಂತರ ಮತ್ತೆ ಹಿಂದಕ್ಕೆ ಮೂತ್ರ ಹೋಗಲು ಬಿಡುವುದಿಲ್ಲ.ಒಂದೊಂದು ಸರಿ ಅದು ಕೆಟ್ಟ ಸ್ವಲ್ಪ ಮೂತ್ರ ಹಿಂದಕ್ಕೆ ಬರುವ ಸಾಧ್ಯತೆ ಇರುತ್ತದೆ. ಇದನ್ನು ವಿಯು ಆರ್ ಎಂದು ಕರೆಯುತ್ತಾರೆ. ಆಗ ಬಿ.ಪಿ. ಏರು ಮುಖವಾಗುತ್ತದೆ.ಈ ರೀತಿ ಬಹಳ ಕಾಲ ಜರುಗೈದರೆ ಜ್ವರ ವಿಕಾರ, ಭೇದಿ, ವಾಂತಿಯಂತಹವು ಉಂಟಾಗುತ್ತದೆ.ಆರಂಭದಲ್ಲಿ ಈ ಕಿಡ್ನಿಗಳ ಪರಿಸ್ಥಿತಿಯನ್ನು ಗುರುತಿಸಿ ನಡೆದರೆ ಉತ್ತಮ.

       ಈ ಮೂತ್ರಪಿಂದ ಸಮಸ್ಯೆಯಿಂದೆಯಾದರೆ ಮೊದಲು ಕಣ್ಣಿನ ಕೆಳಗೆ ನಿತ್ಯವೂ ಊತ  ಕಣಿಸಿಕೊಳ್ಳುತ್ತದೆ.ನಿಮ್ಮ ಮಕ್ಕಳಲ್ಲಿ ಬೆಳಗಾಗುತ್ತಾ ಮುಖವೆಲ್ಲಾ ಊದಿಕೊಂಡಿರುತ್ತದೆ. ಇದನ್ನು ‘ನೆಪ್ರೋಟಕ್ ಸಿಂಡ್ರೋಮ್’  ಎನ್ನುತ್ತಾರೆ.

         ಆರಂಭದಲ್ಲಿ ಈ ವ್ಯಾದಿಯನ್ನು ಸ್ಟೆರಾಯಿಡ್ ನೀಡಿ ಉಪಶಮನ ಮಾಡುತ್ತಾರೆ. ಬಹಳ ಕಾಲದ ನಂತರ ಈ ಔಷಧಿ ಕೆಲಸ ಮಾಡದೆ ಇರುವುದರಿಂದ ಮೂತ್ರಪಿಂಡಗಳು ಕೊಳೆತು ಹೋಗಿ ಪೂರ್ಣವಾಗಿ ನಿಷ್ಕ್ರಿಯ ವಾಗುತ್ತದೆ. ಶಾಲೆಗೆ ಹೋಗುವಾಗ ಮಕ್ಕಳಲ್ಲಿ ಆಗಾಗ ಬರುವ ಗಂಟಲು ನೋವು, ಚರ್ಮ ವ್ಯಾಧಿಗಳು ಸಹ ಈ ವ್ಯಾಧಿಯನ್ನು ಹೆಚ್ಚಿಸಬಹುದು. ಮೂತ್ರವು ಕಡಿಮೆಯಾಗಿ ಬರುವುದು, ಮೈಯೆಲ್ಲಾ ಊದಿಕೊಳ್ಳುವುದು ಕಿಡ್ನಿಗಳ ಸಮಸ್ಯೆಗಳು.

 ಸುಸ್ತು ಆಯಾಸ,ನಿತ್ರಾಣ ವಾಗುವುದು.

 ಕಷ್ಟಕರವಾಗಿ ನೋವಿನಿಂದ ಮೂತ್ರ ಹೋಗುವುದು.

 ಮೂತ್ರದಲ್ಲಿ ಬುರುಗು ಹೋಗುವುದು.

 ಚಹಾ ಬಣ್ಣದ ರೀತಿ ಮೂತ್ರ ಅಥವಾ ಮೂತ್ರದಲ್ಲಿ ರಕ್ತ ಹೋಗುವುದು.

 ಅತಿಯಾದ ಮೂತ್ರ, ಅದರಲ್ಲೂ ರಾತ್ರಿ ಹೆಚ್ಚು ಹೋಗುವುದು.

 ಕಣ್ಣುಗಳು ಊದಿಕೊಳ್ಳುವುದು

 ಕಾರಣ ತಿಳಿಯದೇ ಹಸಿವು ಕಡಿಮೆಯಾಗುವುದು ತೂಕ ಕಡಿಮೆಯಾಗುವುದು.

 ತೀವ್ರವಾದ ಕಾಲುನೋವು, ಕಾಲುಗಳು ಊದಿಕೊಳ್ಳುವುದು.

 ಕಾರಣ ತಿಳಿಯದೆ ಗಂಟು ಗಡ್ಡೆಗಳು ಕಾಣಿಸಿಕೊಳ್ಳುವುದು.

 ಮಾತು ಮಾತಿಗೂ ವಾಂತಿಯಾಗುವುದು.

 ಸಣ್ಣ ಸಣ್ಣ ಕೆಲಸಗಳಿಗೂ ತೀವ್ರವಾದ ನೋವು.

 ಮೂತ್ರ ವಿಸರ್ಜನೆ ಕಷ್ಟವೆನಿಸುವುದು ಮತ್ತು ಮೂತ್ರ ಪ್ರಮಾಣ ತಗ್ಗುವುದು.

 ಆಕಸ್ಮಿಕ ರಕ್ತದ ಒತ್ತಡ ಹೆಚ್ಚಾಗುವುದು ಅಥವಾ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವುದು.

 ಇದರ ವ್ಯಾದಿಗಳಿಗೂ ಸಹ ಈ ಲಕ್ಷಣಗಳು ಬರುತ್ತದೆ.ಆದ್ದರಿಂದ ರೋಗಿ ಆತುರ,ಭಯಪಡದೇ ವೈದ್ಯರ ಹತ್ತಿರ ಪರಿಶೀಲಿಸುವುದು.

 ಮೂತ್ರಪಿಂಡ ಪರೀಕ್ಷೆ

 ರಕ್ತದೊತ್ತಡ,ರಕ್ತದಲ್ಲಿ ಸಕ್ಕರೆಯ ಪ್ರಮಾಣ.

 ಮೂತ್ರದಲ್ಲಿ ಪ್ರೋಟೀನ್ ಮತ್ತು ರಕ್ತದಲ್ಲಿ ಕ್ರಿಯೋಟಿನ್ ಮಟ್ಟ ಜಿ.ಎಫ್. ಆರ್. (ಮೂತ್ರಪಿಂಡ ಕೆಲಸವನ್ನು ಕರಾರುವಕ್ಕಾಗಿ ಅಳೆಯುವ ಪರೀಕ್ಷೆ.)

     ಮೂತ್ರಪಿಂಡವು ದೇಹದ ಒಂದು ಪ್ರಮುಖವಾದ ಅಂಗ, ಇದು ಇಡೀ ದೇಹದ ಕಾರ್ಯವನ್ನು ನಿಯಂತ್ರಿಸುತ್ತದೆ.ಆದ್ದರಿಂದ ಮೂತ್ರಪಿಂಡದ ಕಡೆ ವಿಶೇಷ ಗಮನವನ್ನು ನೀಡಬೇಕು. ಆಹಾರದ ಜೊತೆಗೆ ಹೆಚ್ಚು ನೀರನ್ನು ಕುಡಿಯಬೇಕು.ನೀರನ್ನು ಕುಡಿದಷ್ಟೂ ಆರೋಗ್ಯ ಉತ್ತಮವಾಗುತ್ತದೆ.

 ಡಯಾಲಿಸಿಸ್ :

      ಮೂತ್ರಪಿಂಡ ವೈಫಲ್ಯವಾದರೆ ದೇಹವು ಅನಾವಶ್ಯಕವಾದ ನೀರನ್ನು ಹೊರಹಾಕುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ರಕ್ತ ಶುದ್ಧಿಕರಣದ ಕ್ರಿಯೆಯೂ ಸಹ ನಿಂತು ಹೋಗುತ್ತದೆ. ಇದನ್ನು ಸರಿ ಮಾಡಲು ಡಯಾಲಿಸಿಸ್ ಅನಿವಾರ್ಯ. ಇದರಿಂದ ದೇಹದ ಹೊರಗೆ ಯಂತ್ರದಲ್ಲಿ ರಕ್ತ ಶುದ್ಧೀಕರಣ ಮಾಡಿ ದೇಹದ ಒಳಗೆ ಕಳಿಸುತ್ತದೆ.ಅಲ್ಲದೆ, ನೀರಿನ ಸಮತೋಲನವನ್ನು ಕಾಪಾಡುತ್ತದೆ. ಇದನ್ನು ವಾರಕ್ಕೆ ಮೂರು ಸಲವಾದರೂ ಮಾಡಿಸಿಕೊಳ್ಳಬೇಕಾಗುತ್ತದೆ. ಇದನ್ನು ಮಾಡಿಸಿಕೊಳ್ಳುವುದರಿಂದ ರಕ್ತದೊತ್ತಡ ಮತ್ತು ಮಧುಮೇಹ ಚಿಕಿತ್ಸೆಯು ಮಾಡಿಸಿಕೊಳ್ಳಬೇಕಾಗುತ್ತದೆ.ಅಲ್ಲದೆ ಅನಿವಾರ್ಯವಾಗಿ ಇನ್ಸುಲಿನ್ ತೆಗೆದುಕೊಳ್ಳಬೇಕಾಗುತ್ತದೆ.ಮೂತ್ರಪಿಂಡ ವೈಫಲ್ಯವಾದರೆ ದೇಹದಲ್ಲಿ ನೀರು ಸೇರಿಕೊಂಡು ಆರೋಗ್ಯವನ್ನು ಹಾಳು ಮಾಡುತ್ತದೆ.ಇದನ್ನು‘ಇಂಟರ್ನಲ್ ಡ್ರೌನಿಂಗ್ ’ಎಂದು ಕರೆಯುತ್ತಾರೆ.

     ನೀರಿನಲ್ಲಿ ಮುಳುಗಿದಾಗ ನಾವು ಹೇಗೆ ಉಸಿರಾಟಕ್ಕೆ ಕಷ್ಟ ಪಡಬೇಕಾಗುತ್ತದೋ ಹಾಗೇ ಅನುಭವವಾಗುತ್ತದೆ.ಇದನ್ನು ತಪ್ಪಿಸಲು ಮತ್ತು ರಕ್ತ ಶುದ್ಧೀಕರಣಕ್ಕಾಗಿ ನಾವು ‘ಡಯಾಲಿಸಿಸ್ ‘ಗೆ ಮೊರೆ ಹೋಗಬೇಕಾಗುತ್ತದೆ.