ಮನೆ ಆರೋಗ್ಯ ಶರೀರವನ್ನು ತಂಪಾಗಿಡಲು

ಶರೀರವನ್ನು ತಂಪಾಗಿಡಲು

0

1. ಸೀತಾಫಲದ ಹಣ್ಣನ್ನು ತಿನ್ನುವುದರಿಂದ ಶರೀರದ ಉಷ್ಣ ಕಡಿಮೆಯಾಗಿ ತಂಪಾಗುವುದು.

Join Our Whatsapp Group

2. ಬಿಸಿನೀರಿಗೆ ನಿಂಬೆಹಣ್ಣಿನ ರಸ ಸೇರಿಸಿ ಕುಡಿದರೆ ಶೀತದ ರೋಗ ನಿವಾರಣೆ ಆಗುವುದು.

ಹಸಿವು ಹೆಚ್ಚಿಸಲು :

1. ನೇರಳೆಹಣ್ಣನ್ನು ದಿನವೂ ತಿನ್ನುತ್ತಿದ್ದರೆ ಹಸಿವು ಹೆಚ್ಚುವುದು.

2. ಸೌತೆಕಾಯಿ, ಮೂಲಂಗಿಯನ್ನು ಹಸಿಯ ದನ್ನೇ ತಿನ್ನುತ್ತಿದ್ದರೆ ಹಸಿವು ಹೆಚ್ಚುವುದು.

3. ಕಬ್ಬಿನ ಹಾಲಿಗೆ ಜೇನುತುಪ್ಪ ನಿಂಬೆರಸವನ್ನು ಒಂದೆರಡು ಲವಂಗದ ಪುಡಿಯೊಂದಿಗೆ ಬೆರೆಸಿ ಕುಡಿಯುವುದರಿಂದ ಹಸಿವು ಹೆಚ್ಚುವುದು.

4. ಬಿಳಿ ಈರುಳ್ಳಿಯನ್ನು ದಿನವೂ  ಹಸಿಯದನ್ನೇ ತಿನ್ನುತ್ತಿದ್ದರೆ ಹಸಿವು ಹೆಚ್ಚುವುದು.

5. ಅಡಿಗೆಯಲ್ಲಿ ಬೆಳ್ಳುಳ್ಳಿ, ಕರಿಬೇವಿನ ಸೊಪ್ಪನ್ನು ಬಳಸುವುದರಿಂದ ಅಡಿಗೆ ಸೋಡಾ ಅನ್ನು ಉಪಯೋಗಿಸುವುದರಿಂದಲೂ ಹಸಿವು ಹೆಚ್ಚುವುದು.

ಹೊಟ್ಟೆ ಹುಣ್ಣು :

1. ಮಾಗಿದ ಬಾಳೆಹಣ್ಣನ್ನು ಸುಲಿದು, ಹಾಲಿನಲ್ಲಿ ಗೊಟಾಯಿಸಿ, ದಿನಕೊಮ್ಮೆ ಎರಡು ಮೂರು ದಿನ ಸೇವಿಸುತ್ತಿದರೆ ಹೊಟ್ಟೆ ಹುಣ್ಣು ಆರುವುದು.

2. ಹುಣುಸೆ ಚಿಗುರನ್ನು ಬಳಸಿ, ಬಿಸಿದ ಸಾರು ಮಾಡಿ ಸೇವಿಸಿದರಿಂದಲೂ ಹೊಟ್ಟೆ ಹುಣ್ಣು ಆರುವುದು.

ಹಾವು ಕಡಿದಾಗ :

  1. ಒಂದು ಹರಳೆಲೆಯನ್ನು ಹತ್ತು ಕರಿಮೆಣಸು ಕಾಳುಗಳೊಂದಿಗೆ ನುಣ್ಣಗೆ ಅರಿದು, ಹಾವು ಕಡಿದಿರುವ ರೋಗಿಗೆ ನುಂಗಿಸುವುದು.ಆಗ ವಾಂತಿ ಆಗಿ, ವಿಷದ ತೀವ್ರತೆ ಕಡಿಮೆ ಆಗುವುದು.