ಮನೆ ಅಪರಾಧ ಸಿಸಿಬಿ ಕಾರ್ಯಾಚರಣೆ: ವಿದೇಶಿ ಪೆಡ್ಲರ್ಸ್ ಬಂಧನ, 9 ಲಕ್ಷ ಡ್ರಗ್ಸ್​ ವಶಕ್ಕೆ

ಸಿಸಿಬಿ ಕಾರ್ಯಾಚರಣೆ: ವಿದೇಶಿ ಪೆಡ್ಲರ್ಸ್ ಬಂಧನ, 9 ಲಕ್ಷ ಡ್ರಗ್ಸ್​ ವಶಕ್ಕೆ

0

ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ ಮಾದಕದ್ರವ್ಯ ನಿಗ್ರಹ ದಳ ಅಧಿಕಾರಿಗಳು ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡ್ತಿದ್ದ ವಿದೇಶಿ ಪೆಡ್ಲರ್ಸ್​​ಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 9 ಲಕ್ಷ ಮೌಲ್ಯದ 82 ಗ್ರಾಂ ಎಂಡಿಎಮ್​ಎ ಕ್ರಿಸ್ಟಲ್ ವಶಕ್ಕೆ ಪಡೆದಿದ್ದಾರೆ. ಬಂಧಿತರು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಒಂದು ಗ್ರಾಂ ಎಂಡಿಎಂಎ ಕ್ರಿಸ್ಟಲ್​​ ಅನ್ನು 8 ರಿಂದ 10 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಟೂರಿಸ್ಟ್ ವೀಸಾದಡಿ ಬೆಂಗಳೂರಿಗೆ ಬಂದಿದ್ದಾರೆ. ಬಂಧಿತರ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 ಕೋಟಿ ಮೌಲ್ಯದ ಡ್ರಗ್ಸ್​ ಪತ್ತೆ

ಸಿಸಿಬಿ ಅಧಿಕಾರಿಗಳು ಶ್ವಾನದಳದ ಸಹಾಯದಿಂದ ಕಳೆದ ವಾರ ಚಾರಾಜಪೇಟೆ ಬಳಿಯ ಅಂಚೆ ಕಚೇರಿಯಲ್ಲಿ ಸುಮಾರು 3500 ಪೋಸ್ಟ್​​ಗಳನ್ನ ಪರಿಶೀಲನೆ ನಡೆಸಿದರು. ಈ ವೇಳೆ ಯುಸ್, ಯುಕೆ, ಬೆಲ್ಜಿಯಂ, ಥೈಲ್ಯಾಂಡ್, ನೆದರಲ್ಯಾಂಡ್ ಹಾಗೂ ಇತರೆ ದೇಶಗಳಿಂದ ಬಂದಿರುವ 606 ಪೋಸ್ಟ್​ಗಳಲ್ಲಿ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಐಷಾರಾಮಿ ಡ್ರಗ್ಸ್​ಗಳು ಪತ್ತೆಯಾಗಿದ್ದವು.

ಈ ಸಂಬಂಧ ಸಿಸಿಬಿ ಅಧಿಕಾರಿಗಳು ಒಟ್ಟು 12 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ತಂಡ ಕೆಲ ಪೆಡ್ಲರ್​ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪೆಡ್ಲರ್​ಗಳ ವಿಚಾರಣೆ ವೇಳೆ ಹಾಂಕಾಂಗ್, ಥೈಲ್ಯಾಂಡ್, ಅಮೆರಿಕಗೆ ಲಿಂಕ್ ಇರುವುದು ಪತ್ತೆಯಾಗಿದೆ. ಸಿಸಿಬಿ ವಿಶೇಷ ತಂಡ ಸದ್ಯ ಅಂತಾರಾಷ್ಟ್ರೀಯ ಡ್ರಗ್ ನೆಟ್​ವರ್ಕ್​ ಬಗ್ಗೆ ತನಿಖೆ ನಡೆಸುತ್ತಿದೆ.

ಬೆಂಗಳೂರಿಗೆ ಕೇವಲ ದೇಶದ ವಿವಿಧ ರಾಜ್ಯಗಳಿಂದ ಮಾತ್ರ ಡ್ರಗ್ಸ್ ಬರುತ್ತಿಲ್ಲ, ಬದಲಿಗೆ ವಿದೇಶಗಳಿಂದಲೂ ಬರುತ್ತಿದೆ ಎಂಬ ಮಾಹಿತಿ ಅಂಚೆ ಕಚೇರಿ ಮೇಲೆ ದಾಳಿ ಮಾಡಿದ ಮೇಲೆ ಗೊತ್ತಾಗಿದೆ. ಅದರಿಂದ ಸಿಸಿಬಿ ಪೊಲೀಸರು ವಿದೇಶಿ ಪಾರ್ಸೆಲ್​ಗಳ ಮೇಲೆ ನಿಗಾ ಇಟ್ಟಿದ್ದು, ಮಾದಕ ವಸ್ತುಗಳ ಜಾಲ ಮಟ್ಟ ಹಾಕಲು ಶತಪ್ರಯತ್ನ ನಡೆಸಿದ್ದಾರೆ.