ಮನೆ ಜ್ಯೋತಿಷ್ಯ ಶುಭ ವಾರ ಮತ್ತು ತಿಥಿಗಳು

ಶುಭ ವಾರ ಮತ್ತು ತಿಥಿಗಳು

0

 ವಾರಗಳು :

 ಶ್ಲೋಕ :

Join Our Whatsapp Group

 ಭಾನುವಾರೇ ಕೃತಂ ವೇಶ್ಮಂ ವಹ್ಮಿನಾದಹ್ಯತೆ ಚಿರಾತ್ |

 ಚಂದ್ರೇಚ ವರ್ಧತೆ ಶುಕ್ಲೆೇಕ್ಷೀಯತೆ ಕೃಷ್ಣ ಪಕ್ಷತೇ||

 ಭೌಮವಾರೆ ತಂದಂ ಸೇವಾತಲ್ಲಗ್ನೇ ಸಪ್ತಮೇಪಿವಾ|

 ದೈಯತೆ ತತ್ಸಹಂ ಶೂನ್ಯಂ ಕರ್ತೃರ್ಮರಣ ಮೇವಚ ||  

 ಬುಧವಾರವೇ ಧನೈಶ್ವರ್ಯಂ ಪುತ್ರ ಸಂಪತ್ಸುಖಾವಹಂ |

 ಗುರುವಾರೇಚಿರಂ ತೀಷ್ಟೇತ್ಕರ್ತಾಚ ಸುಖ ಸಂಪದಾಂ ||

ಚಿರಂ ತಿಷ್ಟೇಸ್ಮಂದವಾರೇ ತಷ್ಕರೇಭ್ಯೋ ಮಹಾಭಯಂ   

 ಅರ್ಥ: ರವಿವಾರ ದಿನ ಮನೆಯನ್ನು ಕಟ್ಟಿಸಲು ಆರಂಭಿಸಿದರೆ ಅಗ್ನಿ ಭಯ ಕಟ್ಟಿಟ್ಟದ್ದು.ಶುಕ್ಲ ಪಕ್ಷದ ಸೋಮವಾರದಲ್ಲಿ ಮನೆಯನ್ನು ಕಟ್ಟಿದರೆ ಸರ್ವ ಸೌಖ್ಯವು ಭಾಗ್ಯದಲ್ಲಿ ವೃದ್ಧಿಯುಂಟಾಗುವುದು. ಅದರೆ ಕೃಷ್ಣಪಕ್ಷ ಸೋಮವಾರ ಮಾತ್ರ ಮನೆಯನ್ನು ಕಟ್ಟಿಸಲು ಪ್ರಾರಂಭಿಸುವುದು. ಮಂಗಳವಾರದಲ್ಲಿ ಅಶುಭ, ಅಗ್ನಿ ಭಯ ಮನೆ ಕಟ್ಟಿಸುವ ಯಜಮಾನನಿಗೆ ಮೃತ್ಯುಭಯ ಉಂಟಾಗುವುದು ಬುಧವಾರದಲ್ಲಿ ಕಟ್ಟಿಸಿದರೆ ಧನ,ಐಶ್ವರ್ಯ, ಪುತ್ರ ಸಂಪತ್ತು ಮುಂತಾದ ಸುಖ ಸೌಖ್ಯಗಳು ಲಭಿಸುತ್ತವೆ. ಗುರುವಾರದಲ್ಲಿ ಮನೆ ಕಟ್ಟಿಸಿದರೆ ಆ ಮನೆಯು ಬಹುಕಾಲದವರೆಗೆ ಬಾಳುವುದಲ್ಲದೆ ಆ ಮನೆಯ ಯಜಮಾನನೂ, ಆತರ ಮಕ್ಕಳೂ ಸಕಲ ಐಶ್ವರ್ಯದಿಂದ ಬದುಕಿ ಬಾಳುವರು. ಶುಕ್ರವಾರದಲ್ಲಿ ಕಟ್ಟಿದ ಮನೆಯ ವಾಸದಿಂದ ಯಜಮಾನನಿಗೆ ಸುಖ ಸಂತೋಷಗಳು ಲಭಿಸುವುದಲ್ಲದೆ ಆ ಮನೆಯಲ್ಲಿ ಮೇಲಿಂದ ಮೇಲೆ ಮಂಗಳ ಕಾರ್ಯಗಳು ನೆರೆವೇರುವವು ಶನಿವಾರ ದಿನ ಮನೆ ಕಟ್ಟಿಸಿದರೆ ಮನೆಯ ಆಯುಷ್ಯವು ಹೆಚ್ಚಾಗಿದ್ದರೂ ಆ ಮನೆಯ ನಿತ್ಯದಾರಿದ್ರ್ಯ ದುಃಖ, ಸೋಮಾರಿತನ ಮುಂತಾದ ಅಶುಭ ಫಲಗಳಿಂದ ನರಳುತ್ತಿರುತ್ತದೆ.

 ಸಾರಾಂಶ :

     ಆದ್ದರಿಂದ,ಶುಭ ವಾರಗಳಾದ ಸೋಮ, ಬುಧ,ಗುರು, ಶುಕ್ರವಾರ ಗಳೇ ಮನೆಯನ್ನು ಕಟ್ಟಿಸಲು ಆರಂಭಿಸಲು ಶುಭವಾರವಾಗಿವೆ. ಈ ಶುಭ ವಾರಗಳಲ್ಲಿಯೇ ಥರ ಹಾಕುವದು. ಬಾಗಿಲು ಇಡುವದು ಮುಂತಾದ ಮನೆ ಕೆಲಸಗಳ ಪ್ರಾರಂಭ ಕಾರ್ಯಗಳನ್ನು ಪ್ರಾರಂಭಿಸಬೇಕು .