ಮನೆ ಮನೆ ಮದ್ದು ವಾಯು ಚಿಕಿತ್ಸೆ

ವಾಯು ಚಿಕಿತ್ಸೆ

0

     ನಮ್ಮ ದೇಹವು ಆರೋಗ್ಯ ಸ್ಥಿತಿಯಲ್ಲಿಡಲು ಪ್ರಾಣವಾಯುವಿನ ಅಗತ್ಯವಿದೆ. ಪ್ರಾಣವಾಯುವು ಗಾಳಿಯಲ್ಲಿ ಯಥೇಚ್ಛವಾಗಿರುತ್ತದೆ. ಆದರೆ ಅದರ 30 ಭಾಗ ಮಾತ್ರ ಸೇವಿಸಿ, ಉಳಿದಿದ್ದನ್ನು ವಿಸರ್ಜಿಸುತ್ತವೆ. ಈ ಪ್ರಾಣವಾಯುವನ್ನು ಆಮ್ಲಜನಕವೆನ್ನುತ್ತಾರೆ.

Join Our Whatsapp Group

ಆಮ್ಲಜನಕ  ಕೊರತೆ ಉಂಟಾದಾಗ ಮೆದುಳಿಗೆ ಧಕ್ಕೆ ಆಗುತ್ತದೆ.ಹೀಗಾದಾಗ ಪ್ರಜ್ಞಾಶೂನ್ಯ ವಾಗಬಹುದು.ಅಥವಾ ನ್ಯಾಯಾ ನ್ಯಾಯ,ವಿಮರ್ಶಜ್ಞಾನ,ಸಂಕಲ್ಪ ವಿಕಲ್ಪಗಳ ಸಾಮರ್ಥ್ಯ ಕುಗ್ಗುತ್ತದೆ. ಆ ಮನುಷ್ಯನು ತೀವ್ರ ಜಗಳ ಗಂಟೆಯೂ ಆಗಬಹುದು ಶಾಂತಿ ಸಹನೆ ಕಳೆದುಕೊಳ್ಳುತ್ತಾನೆ. ಸದಾ ಕೋಪತಾಪಗಳಿಂದಲೇ ಇರುತ್ತಾನೆ. ಇದರ ನಿವಾರಣೆಗೆ ಒಂದು ನಿರ್ಜನ ಪ್ರದೇಶದಲ್ಲಿ ಉತ್ತ ಆಸನದಲ್ಲಿ ಕುಳಿತು ಪದ್ಮಾಸನ ಹಾಕಿಕೊಂಡು ಕಣ್ಣನ್ನು ಮುಚ್ಚಿ ಬಲಭಾಗದ ಮೂಗಿನ ಹೊಳ್ಳೆಯಯಿಂದ ಗಾಳಿಯನ್ನು ಶ್ವಾಸಕೋಶಕ್ಕೆ ಎಳೆದುಕೊಳ್ಳಬೇಕು.ಎಳೆದ ಗಾಳಿಯನ್ನು ಎರಡು ಸೆಕೆಂಡುಗಳ ಕಾಲ ಬಂಧಿಸಿ ಅನಂತರ ವಿಸರ್ಜಿಸಬೇಕು.  ಹೀಗೆ ಒಂದೆರಡು ಗಂಟೆಗಳ ಕಾಲ ಮಾಡುತ್ತಿದ್ದರೆ ದೇಹಕ್ಕೆ ಬೇಕಾದ ಆಮ್ಲಜನಕವು ಪೂರೈಸದಂತೆ ಆಗುವುದು ಇದನ್ನು ಪ್ರಾಣಯಾಮವೆನ್ನುತ್ತಾರೆ.

     ಅನೇಕರು ಬೆಳಗಿನ ವೇಳೆ ಶೀತಲಗಾಳಿಯಲ್ಲಿ ಚಲಿಸುವುದು ನೆಗಡಿಗೆ ಆಹ್ವಾನ ಕೊಟ್ಟಂತೆ ಎಂದು ಭಾವಿಸುತ್ತಾರೆ. ಪಾತ್ರಕಾಲದ ಗಾಳಿಯಲ್ಲಿ ಓಝೋನ್ ಅಂಶ ಜಾಸ್ತಿಯಾಗಿದ್ದು ಆಮ್ಲಜನಕ  ಪ್ರಮಾಣ ಹೆಚ್ಚಾಗಿರುತ್ತದೆ. ರಾತ್ರಿಯ ವೇಳೆ ಗಾಳಿಯು ಬೀಸುವುದರಿಂದ ಇಂಗಾಲಾಮ್ಲವನ್ನು  ಗಿಡಗಳು ಸೇವಿಸಿ ಆಮ್ಲಜನಕವನ್ನು ಬಿಟ್ಟಿರುತ್ತದೆ. ಆಮ್ಲಜನಕವನ್ನು ನಾವು ಸೇವಿಸುವುದರಿಂದ ನಮ್ಮ ರಕ್ತಶುದ್ದಿಯಾಗಿ ನಾವು ಆರೋಗ್ಯವಾಗಿರಲು ಸಹಾಯಕವಾಗುತ್ತದೆ.ಶುದ್ಧವಾದ ವಾಯು ಸೇವನೆಯಿಂದ ಶ್ವಾಸಕೋಶಗಳಿಗೆ ಮತ್ತು ಮೂತ್ರಪಿಂಡಗಳಿಗೆ ಸಂಬಂಧಿಸಿದ ರೋಗಗಳು ಗುಣವಾಗುತ್ತದೆ.