ಮನೆ ಮಕ್ಕಳ ಶಿಕ್ಷಣ ಆತ್ಮಹತ್ಯೆ ಪತ್ರಗಳು

ಆತ್ಮಹತ್ಯೆ ಪತ್ರಗಳು

0

ಮಕ್ಕಳ ಪೈಕಿ ಕೆಲವರು ತಮ್ಮನ್ನು ಯಾರೂ ಗುರ್ತಿಸುತ್ತಿಲ್ಲವೆಂದು ತಮ್ಮ ಬಗ್ಗೆ ತಲೆಕೆಡಿಸಿಕೊಳ್ಳುವವರು, ಅನುಕಂಪ ತೋರಿಸುವವರು ಯಾರು ಇಲ್ಲವೆಂದು ತಿಳಿದು ನೋವು ಅನುಭವಿಸುವವರು ತಮ್ಮ ಪ್ರಯತ್ನಗಳಲ್ಲಿ ಈ ಆತ್ಮಹತ್ಯೆ ಪತ್ರಗಳನ್ನು ಬರೆದಿಡುವುದು ಮುಖ್ಯವಾದದ್ದು ಇವರು ನಿಜವಾಗಿಯೂ ಸಾಯಬೇಕೆಂದುಕೊಳ್ಳುವುದಿಲ್ಲ ಅವರಲ್ಲಿ ಅಂತಹ ಧೈರ್ಯ ಕೂಡಾ ಇರುವುದಿಲ್ಲ.

Join Our Whatsapp Group

ಆದರೆ, ಕುಟುಂಬ ಸಂಧ್ಯಕ್ಷರನ್ನು ಭಯಪಡಿಸಬೇಕೆಂದು ಪತ್ರಗಳನ್ನು ಬರೆದು, ಅವು ಅವರ ಕಣ್ಣಿಗೆ ಬೀಳುವಂತೆ ಮಾಡುತ್ತಾರೆ.ಇನ್ನೂ ಕೆಲವು ಮುಂದಿ “ಬೆಂಕಿ ಹಚ್ಚಿಕೊಂಡು ಸತ್ತು ಹೋಗುತ್ತೇನೆ ”ಎಂದು ಬೆದರಿಸಿ ಮೈ ಮೇಲೆ ಸೀಮೆಎಣ್ಣೆಯನ್ನು ಸುರಿದುಕೊಳ್ಳುತ್ತಾರೆ.ಒಂದು ಬಾರಿ ಒಂದು ಮನೆಯಲ್ಲಿ ಇದೇ ರೀತಿ ಬೆದರಿಸಿದಾಗ, ಗಂಡನಾದವನು ಓಹೋ ಹೌದೇನು ಹಾಗಾದ್ರೆ ಸಾಯಿ…. ”ಎನ್ನುತ್ತಾ ಬೆಂಕಿಕಡ್ಡಿ ಗೀಚಿ ತಾನೇ ಸ್ವಂತ ಅವಳ ಮನೆ ಮೇಲೆ ಎಸೆಯಲು ಮುಂತಾದ ಆಕೆ ಲಬೋಲಬೋ ಎಂದು ಬಾಯಿ ಬಡಿದುಕೊಳ್ಳುತ್ತಾ ಹೊರಗೆ ಹೋಗಿ ಪ್ರಾಣ ಕಾಪಾಡಿಕೊಂಡಳು. ಆಕೆಗೆ ಈ ರೀತಿ ಬೆದರಿಕೆಗಳನ್ನು ಒಡ್ಡುವುದೇ ಒಂದು ಸಾಮಾನ್ಯ ಕೆಲಸ ಎಂದು ತಿಳಿದ ಅಕ್ಕ ಪಕ್ಕದವರು ಒಬ್ಬೊಬ್ಬರು ಕೂಡಾ ಸಪೋರ್ಟ್ ಮಾಡಲಿಲ್ಲ.

           ಮನೆಯಲ್ಲಿ ತಾಯಿ ತಂದೆಯರು ತನ್ನನ್ನು ಕೇರ್ ಮಾಡುತ್ತಿಲ್ಲವೆಂದು ಪಕ್ಕದ ಮನೆಯ ಹುಡುಗಿಯನ್ನೂ, ಎದುರು ಮನೆಯ ಹುಡುಗನನ್ನೂ ಪ್ರೀತಿಸಿ, ಅವರ ಮೂಲಕ ಮನಸ್ ಶಾಂತಿಯನ್ನು ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗುತ್ತದೆ ಆ ಸಮಯದಲ್ಲಿ ತಾಯಿ ತಂದೆಯರು ಗಟ್ಟಿಯಾಗಿ ಪ್ರಶ್ನಿಸಿದಾಗ “ನನ್ನಿಷ್ಟ ನಾನು ಏನು ಬೇಕಾದರೂ ಮಾಡಿಕೊಳ್ತೀನಿ ನನ್ನ ಸಮಸ್ಯೆಯನ್ನು ನೀವು ಕೇರ್ ಮಾಡಿಕೊಳ್ಳದಿದ್ದಾಗ ಯಾರಾದರೂಬ್ಬರು ಬೇಕೆ ಬೇಕಲ್ಲಾ” ಎಂದು ಧೈರ್ಯವಾಗಿ ಹೇಳುತ್ತಿದ್ದಾರೆ. ಅಗತ್ಯ ಬಿದ್ದರೆ ಮೈನರ್ ವಯಸ್ಸು ಕಳೆದ ನಂತರ ತಾಯಿ ತಂದೆಯ ವಿರುದ್ಧ ತಿರುಗಿ ಬೀಳುತ್ತಿದ್ದಾರೆ.

 ಪ್ರತಿ ಸಮಸ್ಯೆಗೂ ಪರಿಹಾರವಿದೆ :

       “ನನ್ನನ್ನು ಯಾರೂ ಕೇರ್ ಮಾಡುತ್ತಿಲ್ಲ,ನನ್ನನ್ನು ಗುರುತಿಸುವವರೇ ಇಲ್ಲ…. “ಎಂದು ಭಾದೆಪಟ್ಟುಕೊಂಡು ವಿಚಿತ್ರ ವಿನ್ಯಾಸಗಳನ್ನು ಮಾಡುತ್ತಾ ತಮ್ಮನ್ನು ತಾವು ಹಿಂಸಿಸಿಕೊಳ್ಳುವುದು ಅವಿವೇಕದ ಪರಮಾವಧಿ.ಭಾರತದೇಶ ವಿದೇಶಿಯರ ಕೈಯಲ್ಲಿ ಸಿಲುಕಿ ಒದ್ದಾಡುತ್ತಿರ ಬೇಕಾದರೆ ಆ ಸಮಯದಲ್ಲಿ ಮಹಾತ್ವಗಾಂಧಿ ಅಹಿಂಸೆಯಿಂದ ಸ್ವತಂತ್ರ ತಂದು ಕೊಡಲಿಲ್ಲವೇ ಒಂದೇ ಒಂದು ಬಾಂಬ್ ಸ್ಫೋಸಲಿಲ್ಲ. ಮಾರಕಸ್ತ್ರಗಳಿಂದ ಹಲ್ಲೆ ಮಾಡಲಿಲ್ಲ ಆತ್ಮಹತ್ಯೆಗಳನ್ನು ಮಾಡಿಕೊಳ್ಳಲಿಲ್ಲ.

        ಪ್ರಸ್ತುತ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಗೆ ಸೂಕ್ತ ಐಡೆಂಟಿಟಿ ಲಭಿಸದಿದ್ದರೆ ಬಿದರಿಸಬೇಕಾದ ಅಗತ್ಯವಿಲ್ಲ ಸತ್ತು ಹೋಗುತ್ತೀಯೆನೆಂದು ಭಯಪಡಿಸಬೇಕಾದ ಅಗತ್ಯವಿಲ್ಲ.ಅಮರಣ ಉಪವಾಸ ಸತ್ಯಾಗ್ರಹಗಳನ್ನು ಮಾಡಬೇಕಾಗಿಲ್ಲ ತನ್ನ ಸಮಸ್ಯೆಯನ್ನು ನೇರವಾಗಿ, ಸೂಕ್ತ ಪದತಿಯಲ್ಲಿ ತಿಳಿಯಪಡಿಸಬಹುದು. ಅದು ಸಾಧ್ಯವಾಗದಿದ್ದರೆ ನಾಲ್ಕುರು ಮಂದಿಯ ಸಹಾಯ ಪಡೆದು ಅಥವಾ ತಮ್ಮ ಸಾಮರ್ಥ್ಯವನ್ನು ನಿರೂಪಿಸಿಕೊಂಡು ಗುರುತಿಸಿಕೊಳ್ಳಬೇಕು. ಅಮೆರಿಕದಲ್ಲಿ ಬಿಳಿಯರು ಮತ್ತು ಕಪ್ಪುವರ್ಣಿಯರ ಮಧ್ಯೆ ವೈಮನಸ್ಯಗಳು ಬೆಳೆದು, ಕಪ್ಪು ಜನಾಂಗದವರನ್ನು ಬಗ್ಗುಬಡಿದಾಗ ಅವರು ಬೆದರದೆ, ಬೆದರಿಸದೆ,ಕ್ರೀಡೆಗಳಲ್ಲಿ ಸಂಗೀತಗಳಲ್ಲಿ ಹಾಗೂ ಇತರೆ ಕಲೆಗಳಲ್ಲಿ ನೈಪುಣ್ಯತೆ ಸಾಧಿಸಿ ದೇಶಕ್ಕೆ ಕೀರ್ತಿ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ಕೊನೆಗೆ ಸಮಾನವಾದ ಸ್ಥಾನಮಾನಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

 ಎಲ್ಲರೂ ಎಲ್ಲವನ್ನೂ ಕಲಿಸಿಕೊಳ್ಳಬಲ್ಲರು :

     ನಾನು ಕಾಲೇಜಿನಲ್ಲಿ ಕೌನ್ಸಿಲಿಂಗ್ ಮಾಡಿದಾಗ ಬಹುತೇಕ ವಿದ್ಯಾರ್ಥಿಗಳು ತಾವು ಶಾಲೆಯ ಇಡಿ ಶಿಕ್ಷಣವನ್ನು ಕನ್ನಡದಲ್ಲೇ ಓದಿದೆವೆಂದು, ತೀರಾ ಪಿ.ಯು.ಸಿ ಡಿಗ್ರಿಗಳಲ್ಲಿ  ಎಲ್ಲವೂ ಇಂಗ್ಲಿಷ್ ನಲ್ಲೇ ಇದೆಯೆಂದು ಲೆಕ್ಚರರ್ ಕೂಡಾ ಇಂಗ್ಲಿಷ್ ನಲ್ಲೇ ಪಾಠಗಳನ್ನು ಮಾಡುತ್ತಿದ್ದಾರೆಂದು, ಅದನ್ನೇ ಸ್ವಲ್ಪ ಕನ್ನಡದಲ್ಲಿ ಮಾಡಿರೆಂದು ಕೇಳಿದರೂ ಅಂಗೀಕರಿಸಲಿಲ್ಲವೆಂದು ಬಾಧೆಪಟ್ಟುಕೊಂಡು ಹೇಳುತ್ತಿರುತ್ತಾರೆ.

      ಇದು ಕೇವಲ ಕನ್ನಡಿಗರೇ ಅಲ್ಲ. ಎಲ್ಲಾ ರಾಜ್ಯಗಳ ಭಾಷೆಗಳವರೂ ತಮ್ಮ ಮಾತೃ ಭಾಷೆಯನ್ನು ಓದಿಕೊಂಡು. ಆಮೇಲೆ ಇಂಗ್ಲಿಷಿನಲ್ಲಿ ಓದಲಾಗುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಿರುತ್ತಾರೆ. ಇದೊಂದು ಭ್ರಮೆ ಮಾತ್ರ ನಾನು ಕೂಡಾ ಎಸ್ ಎಲ್ ಸಿ ವರಿಗೆ ಕನ್ನಡದಲ್ಲೇ ಓದಿಕೊಂಡು,ಆಮೇಲೆ ಪಿ.ಯು. ಸಿ. ಡಿಗ್ರಿಗೆ ಸೇರಿದಾಗ ಹೀಗೆಯೇ ಭಾಧೆಪಟ್ಟೆ.ಆದರೆ ಕೆಲವು ಮಂದಿ ಲೆಕ್ಚರರ್ ನೀಡಿದ ಕೆಲವು ಉಪಾಯಗಳಿಂದ ಆ ಭಯ, ಭಾಧೆಗಳು ಮಾಯವಾದವು.

     20ನೇ ಶತಮಾನದ ಅದ್ಭುತವಾದ ಅವಿಷ್ಕಾರ ಅಂದರೆ ಇದೇ.ಇಬ್ಬರು ಒಬ್ಬರು ಮಾಡಿದ ಕೆಲಸವನ್ನು ಮತ್ತೊಬ್ಬರು ಕೂಡಾ ಮಾಡಬಲ್ಲರು ಇದಕ್ಕೆ ಜಾತಿ, ಕುಲ, ಧರ್ಮಗಳೊಂದಿಗೆ ಸಂಬಂಧವಿಲ್ಲ. 1900 ವರ್ಷಗಳ ಕಾಲ ಮೀನುಗಳನ್ನು ಹಿಡಿಯುವುದು, ಸಾಕುವುದನ್ನು ಮೀನುಗಾರರು ಮಾತ್ರ ಮಾಡುತ್ತಿದ್ದರು ಪ್ರಸ್ತುತ ಮೀನು ಸಾಗಾಣಿಕೆ, ಸಿಗಡಿ ಸಾಕಾಣಿಕೆ ವ್ಯಾಪಾರದಲ್ಲಿ ಎಲ್ಲಾ ಜಾತಿ,ಧರ್ಮದವರೂ ಇದ್ದಾರೆ. ಹಾಗೆಯೇ ಹೆಂಡ ಇಳಿಸುವುದು,ಮಾರಾಟ  ಮಾಡುವುದನ್ನು ಕೇವಲ ಈಡಿಗ ಜಾತಿಯವರು ಮಾತ್ರ ಮಾಡುತ್ತಿದ್ದರು. ಆದರೀಗ ಮಧ್ಯ ಮಾರಾಟ ವ್ಯಾಪಾರಗಳಲ್ಲಿ ಯಾವ ಜಾತಿಯವರಿಲ್ಲ ಹೇಳಿ ನೋಡೋಣ ? ಓದಿನ ವಿಷಯದಲ್ಲೂ ಅದೇ ನಡೆಯುತ್ತದೆ.

     ಬೆಂಗಳೂರಿನಿಂದ 40 ಕಿಲೋಮೀಟರ್ ದೂರದಲ್ಲಿರುವ ತಮಿಳುನಾಡಿಗೆ ಸೇರಿದ ಹೊಸೂರಿನಲ್ಲಿ ಒಂದು ಶಾಲಾ ಮಕ್ಕಳೊಂದಿಗೆ ಮಾತನಾಡಿದಾಗ ನನಗೆ ಒಂದು ಆಶ್ಚರ್ಯಕರವಾದ ವಿಷಯ ಹೊರ ಬಿತ್ತು.ಅಲ್ಲಿನ ಮಕ್ಕಳು 5 ಭಾಷೆಗಳನ್ನು ಅರ್ಥ ಮಾಡಿಕೊಳ್ಳಬಲ್ಲರು. ಕನಿಷ್ಠ ನಾಲ್ಕು ಭಾಷೆಗಳಲ್ಲಾದರೂ ಮಾತನಾಡಬಲ್ಲರು. ಆ ವಿಷಯಕ್ಕೆ ಬಂದರೆ ಅಲ್ಲಿರುವ ನಮ್ಮ ಕನ್ನಡ ಗೃಹಿಣಿಯರು ಕೂಡಾ ಮೂರು ಭಾಷೆಗಳನ್ನು ಅನಾಯಾಸವಾಗಿ ಮಾತನಾಡಬಲ್ಲರು.ಅದು ಹೇಗೆಂದರೆ ಮಾತೃಭಾಷೆ ಕನ್ನಡವನ್ನು ಮನೆಯಲ್ಲಿ ಮಾತನಾಡುತ್ತಾರೆ. ಪಕ್ಕದಲ್ಲೇ ಇರುವ ಕೃಷ್ಣಗಿರಿ,ಸುಳ್ಳಗಿರಿ, ಧರ್ಮಪುರಿಗಳಂತಹ  ವ್ಯಾಪಾರಿ ಸ್ಥಳಗಳಿಗೆ ಆಗಾಗ್ಗೆ  ಹೋಗಬೇಕಾದ್ದರಿಂದ ಕಡ್ಡಾಯವಾಗಿ ತಮಿಳು ಮಾತನಾಡಲೇಬೇಕು.ಶಾಲಾ ಮಕ್ಕಳು ಇಂಗ್ಲಿಷ ಹಿಂದಿ ಕಲಿತುಕೊಳ್ಳುತ್ತಾರೆ. ಇವು ಹೇಗೆ ಸಾಧ್ಯವಾಯಿತೆಂದರೆ ಅನಿವಾರ್ಯವಾದ್ದರಿಂದ. ನಮ್ಮ ರಾಜ್ಯದಲ್ಲಿರುವವರು ಮುಖ್ಯವಾಗಿ ವಿದ್ಯಾವಂತರು ಕನ್ನಡದ ಜೊತೆಗೆ ಇಂಗ್ಲೀಷನ್ನೂ ಕಲಿತುಕೊಳ್ಳಬೇಕೆಂಬ ದೃಢವಾದ ಆಸೆಯನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ಇಂಗ್ಲಿಷ್ ವ್ಯಹಾರ ಭಾಷೆಯಾಗಿ ಬಂದು ಕುಳಿತಿದೆ. ನಮಗೆ ಬರುವುದಿಲ್ಲ ಎಂಬ ಸಜೇಷನ್  ಅನ್ನು ಪದೇ ಪದೇ ಅಂದುಕೊಳ್ಳಬಾರದು. ಅದು ನಿಜವಾಗಿ ನೆಲೆಗೊಳ್ಳುವುದರಿಂದ ಬರುವುದಿಲ್ಲ ಎಂಬ ಭಾವನೆ ಮನಸ್ಸಿನಲ್ಲಿ ಮೇಲೆ ಬಲವಾಗಿ ಬೇರೂರಿಬಿಡುತ್ತದೆ.