ಮನೆ ರಾಜ್ಯ ʻನಮ್ಮ ಮೆಟ್ರೋʼ ಬಗ್ಗೆ ದೂರುಗಳಿದ್ದರೆ ತಿಳಿಸಲು ಹೊಸ ವೆಬ್‌ ಸೈಟ್‌

ʻನಮ್ಮ ಮೆಟ್ರೋʼ ಬಗ್ಗೆ ದೂರುಗಳಿದ್ದರೆ ತಿಳಿಸಲು ಹೊಸ ವೆಬ್‌ ಸೈಟ್‌

0

ಬೆಂಗಳೂರು (Bengaluru)-ʻನಮ್ಮ ಮೆಟ್ರೋʼ ಬಗ್ಗೆ ದೂರುಗಳಿದ್ದರೆ ತಿಳಿಸಲು ಹೊಸ ವೆಬ್‌ ಸೈಟ್‌ ಪ್ರಾರಂಭಿಸಲಾಗಿದೆ.

ಬಿಎಂಆರ್ ಸಿಎಲ್ ಇಂಥಹದ್ದೊಂದು ಸೌಲಭ್ಯವನ್ನು ಕಲ್ಪಿಸಿದ್ದು ಮಂಗಳವಾರ ಲೋಕಾರ್ಪಣೆಗೊಂಡ ವೆಬ್ ಸೈಟ್ ನಲ್ಲಿ ಪ್ರಯಾಣಿಕರ ದೂರುಗಳಿಗಾಗಿಯೇ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ. 

ಐಟಿ, ಸಾಮಾಜಿಕ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ದಿವ್ಯ ಹೊಸೂರ್ ಈ ಬಗ್ಗೆ ಮಾಹಿತಿ ನೀಡಿದ್ದು, ವೆಬ್ ಸೈಟ್ ಗೆ ಚಾಲನೆ ನೀಡಲಾಗಿದೆ. ಇದರಲ್ಲಿ ಹಲವು ಪ್ರಯಾಣಿಕ ಸ್ನೇಹಿ ವೈಶಿಷ್ಟ್ಯಗಳಿವೆ. ಇದು ಮೊದಲ ಹಂತವಾಗಿದ್ದು, ಇನ್ನೂ ಹಲವು ಸುಧಾರಣೆಗಳಾಗಲಿವೆ. ಪ್ರತಿ ನಿಲ್ದಾಣದಿಂದ ಮೊದಲ ರೈಲು ಹಾಗೂ ಕೊನೆಯ ರೈಲುಗಳ ಬಗ್ಗೆ, ನಿಲ್ದಾಣಗಳ ನಡುವಿನ ಪ್ರಯಾಣ ದರವನ್ನೂ ಈ ವೆಬ್ ಸೈಟ್ ಮೂಲಕ ತಿಳಿಯಬಹುದಾಗಿದೆ.

ಪ್ರಯಾಣಿಕರು ಬಳಕೆ ಮಾಡಬಹುದಾದ  www.bmrc.co.in ವೆಬ್ ಸೈಟ್ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಲಭ್ಯವಿದೆ. 

ಪ್ರಯಾಣಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ರೈಲ್ವೆಯಲ್ಲಿ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ಮಾದರಿಯಲ್ಲಿ ಮೆಟ್ರೋ ಪ್ರಯಾಣಿಕರೂ ಸಂಘ ಸ್ಥಾಪಿಸಬೇಕೆಂಬ ಸಲಹೆಯನ್ನು ಮಾಜಿ ನಗರ ಆಯುಕ್ತ ಭಾಸ್ಕರ್ ರಾವ್ ಅವರು ಇತ್ತೀಚೆಗೆ ನೀಡಿದ್ದರು. ಇದೀಗ ವೆಬ್‌ ಸೈಟ್‌ ಲೋಕಾರ್ಪಣೆಗೊಂಡಿದೆ.