ಮನೆ ಯೋಗಾಸನ ವೃಶ್ಚಿಕಾಸನ

ವೃಶ್ಚಿಕಾಸನ

0

         ವೃಶ್ಚಿಕ ವೆಂದರೆ ಚೇಳು. ಯಾರನ್ನಾದರೂ ಕುಟಕಿ ಕುಂಡಿಯಿಂದ ಕುಟುಕಬೇಕಾದರೆ, ಅದು ತನ್ನ ಬಾಲವನ್ನು ಬೆನ್ನಿನ ಮೇಲೆ ಬಿಲ್ಲಿನಂತೆ ಬಗ್ಗಿಸಿ,ಆ ಬಳಿಕ ತಲೆಯ ಮೇಲೆ ಅದನ್ನು ತಂದು ಕುಟುಕುತ್ತದೆ. ಈ ಆಸನದ ಭಂಗಿಯು ಕುಟುಕಲಿರುವ  ಚೇಳಿನ ಸ್ಥಿತಿಯನ್ನು ಹೋಲುವ ಕಾರಣ ಇದಕ್ಕೆ ಈ ಹೆಸರು.

Join Our Whatsapp Group

 ಅಭ್ಯಾಸ ಕ್ರಮ  :

1. ಮೊದಲು ನೆಲದಮೇಲೆ ಮಂಡಿಯೂರಿ ಕುಳಿತು, ಮುಂಭಾಗಿ ಮೊಣಕೈ ಮುಂದೋಳು ಮತ್ತು ಅಂಗೈಗಳನ್ನು ಒಂದಕ್ಕೊಂದು ಸಮಾಂತರವಾಗುವಂತೆ ನೆಲದಮೇಲೆ ಊರಬೇಕು. ಮುಂದೋಳುಗಳ ನಡುವಣಂತರ ಭುಜಗಡ ಭುಜಗಳ ನಡುವಣಂತರಕ್ಕಿಂತ ಹೆಚ್ಚಿರಬಾರದು.

2. ಬಳಿಕ ಕತ್ತನ್ನು ಇಗಿಸಿ ತಲೆಯನ್ನು ನೆಲದಿಂದ ಆದಷ್ಟು ಮೇಲೆತ್ತಬೇಕು.

3. ಬಳಿಕ, ಉಸಿರನ್ನು ಹೊರ ಬಿಟ್ಟು ಕಾಲುಗಳನ್ನು ಮುಂಡವನ್ನೂ ಮೇಲಕ್ಕೆ ತೂಗಿಟ್ಟು ಕಾಲುಗಳು ತಲೆಯಿಂದಾಚೆ ನೆಲಕ್ಕೆ ಜಾರಿ ಬೀಳದಂತೆ ಅವನ್ನು ಸಮತೋಲನಮಾಡಿ ನಿಲ್ಲಿಸಬೇಕು. ಆಮೇಲೆ ಎದೆಯ ಭಾಗವನ್ನು ನೇರವಾಗಿ ಮೇಲ್ಭಾಗಕ್ಕೆ ಹಿಗ್ಗಿಸಿ ಮೊಣಕೈಗಳ ಮೇಲ್ಗಡೆಯಿಂದ ಭುಜದ ವರೆಗಿರುವ ಮೇಲ್ದೋಳುಗಳನ್ನು ನೆಲಕ್ಕೆ ಲಂಬವಾಗುವಂತಿರಿಸಿ ಕಾಲುಗಳನ್ನು ಮೇಲ್ಗಡೆಗೆ ಹಿಗ್ಗಿಸಿ ನಿಲ್ಲಿಸಿ ಸಮತೋಲಿಸಬೇಕು ಇದೇ ಪಿಂಛಮಯೂರಸನದ ಭಂಗಿ.

4. ಮುಂದೋಳುಗಳ ಮೇಲೆ ಸಮತೋಲಿಸಿದ ಬಳಿಕ,ಉಸಿರನ್ನು ಹೊರ ಬಿಟ್ಟು, ಮಂಡಿಗಳನ್ನು ಬಾಗಿಸಿ, ತಲೆ ಮತ್ತು ಕತ್ತುಗಳನ್ನು ನೆಲದಿಂದ ಸಾಧ್ಯವಾದಷ್ಟೂ ಮೇಲೆತ್ತಿ ಬೆನ್ನೆಲುಬನ್ನು ಭುಜದಿಂದ ಮೇಲಕ್ಕೆ ಹಿಗ್ಗಿಸಿ, ಪಾದಗಳನ್ನು ಕೆಳಕ್ಕಿಳಿಸಿ, ಹಿಮ್ಮಡಿಗಳನ್ನು ತಲೆಯ ಮೇಲೆ ಬಂದೊರಗುವಂತೆ ಅವನ್ನು ಅಳವಡಿಸಬೇಕು. ಇದರ ಅಭ್ಯಾಸದಿಂದ ಪರಿಣತಿ ಹೊಂದಿದಮೇಲೆ ಮಂಡಿ ಮತ್ತು ಕಾಲ್ಗಿ ಣ್ಣುಗಳನ್ನು ಜೊತೆಗೂಡಿಸಲು ಯತ್ತಿಸಿ ಬೆರಳುಗಳನ್ನು ತುದಿ ಮಾಡಬೇಕು ಹೀಗಿರುವಾಗ,ಹಿಮ್ಮಡಿಗಳಿಂದ ಮಂಡಿಗಾಲವರೆಗೂ ಇರುವ ಕಾಲಿನ ಭಾಗ ತಲೆಗೆ ಲಂಭವಾಗಿರಬೇಕು.ಅಲ್ಲದೆ ಕಣಕಾಲುಗಳೂ ಮತ್ತು ಮೇಲ್ದೊಳುಗಳೂ ಒಂದಕ್ಕೊಂದು ಸಮಾಂತರವಾಗಿರಬೇಕು.

5. ಈ ಭಂಗಿಯಲ್ಲಿ ಕತ್ತು, ಹೆಗಲು, ಎದೆ ಬೆನ್ನೆಲುಬು ಮತ್ತು ಕಿಬ್ಬೊಟ್ಟೆಗಳು ಹೀಗ್ಗುವುದರಿಂದ ಉಸಿರಾಟ ಶೀಘ್ರವಾಗಿಯು ಶ್ರಮದಿಂದ ಕೂಡಿ ಭಾರವಾಗಿಯೂ ಪರಿಣಮಿಸುತ್ತದೆ. ಈ ಭಂಗಿಯಲ್ಲಿ  ಸಾಮಾನ್ಯ ರೀತಿಯಿಂದ ಉಸಿರಾಟ ನಡೆಸಲು ಯತ್ನಿಸಿ ಸಾಧ್ಯವಾದಷ್ಟು ಕಾಲ, ಅಂದರೆ ಸುಮಾರು 30 ಸೆಕೆಂಡುಗಳವರೆಗೂ ನೆಲೆಸಬೇಕು.

6. ಈ ಭಂಗಿಯಲ್ಲಿ ಆಭ್ಯಾಸಿಗೆ ಸಾಧ್ಯವಾಗದಷ್ಟು ಕಾಲ ನೆಲೆಸಿದಮೇಲೆ ಕಾಲುಗಳನ್ನು ತಲೆಯಿಂದಚೆಗೆ ನೆಲದ ಮೇಲೆ ಇಳಿಸಿಟ್ಟು, ಮೊಣ ಕೈಗಳನ್ನು ನೆಲದಿಂದ ಮೇಲೆತ್ತಿ ತೋಳುಗಳನ್ನು ನೆಟ್ಟಗೆ ನಿಲ್ಲಿಸಿ, ‘ಊರ್ಧ್ವ ಧನುರಾಸನ’ ಭಂಗಿಗೆ ಬರಬೇಕು.

7. ಆಮೇಲೆ ‘ತಾಂಡಾಸನ’ದಲ್ಲಿ ಬಂದು ನಿಲ್ಲಬೇಕು. ಇಲ್ಲವೇ ವಿಪರೀತ ಚಸನವನ್ನುಕ್ರಾನವನ್ನು ಮಾಡಬೇಕು.

8. ಕೊನೆಯಲ್ಲಿ, ‘ವೃಶ್ಚಿಕಾಸನ’ದಿಂದ ಶ್ರಮವನ್ನು ಕಳೆಯಲು ಮುಂಭಾಗಿ ಮಂಡಿಗಳನ್ನು ಬಾಗಿಸದಂತೆ ಅಂಗೈಗಳನ್ನು ನೆಲಕ್ಕೆ ಮುಟ್ಟಿಸಬೇಕು.