ಮನೆ ಅಪರಾಧ ಧಾರವಾಡ: ಕಾರಿಗೆ ಗುಂಡು ಹಾರಿಸಿದ ಪ್ರಕರಣ: ದ್ವಿಚಕ್ರ ವಾಹನ ಸವಾರನ ಬಂಧನ

ಧಾರವಾಡ: ಕಾರಿಗೆ ಗುಂಡು ಹಾರಿಸಿದ ಪ್ರಕರಣ: ದ್ವಿಚಕ್ರ ವಾಹನ ಸವಾರನ ಬಂಧನ

0

ಧಾರವಾಡ: ನಗರದ ಆರ್‌.ಎನ್‌.ಶೆಟ್ಟಿ ಜಿಲ್ಲಾ ಕ್ರೀಡಾಂಗಣ ಸಮೀಪ ಬುಧವಾರ ರಾತ್ರಿ ದ್ವಿಚಕ್ರ ವಾಹನ ಸವಾರ ಮತ್ತು ಕಾರಿನಲ್ಲಿದ್ದವರ ನಡುವೆ ವಾಗ್ವಾದ ನಡೆದು ಸವಾರ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು ಕಾರಿನ ಗಾಜಿಗೆ ಹಾನಿಯಾಗಿದೆ.

Join Our Whatsapp Group

ರಾತ್ರಿ 12.30ರ ಹೊತ್ತಿನಲ್ಲಿ ಘಟನೆ ನಡೆದಿದೆ. ದ್ವಿಚಕ್ರ ವಾಹನ ಸವಾರ ಅಭಿಷೇಕ್‌ ಬಡ್ಡಿಮನೆ (31) ಅವರನ್ನು ಬಂಧಿಸಲಾಗಿದೆ. ಪ್ರಜ್ವಲ್‌, ದಿನೇಶ್‌ ಮತ್ತು ಗಣೇಶ್‌ ಅವರನ್ನು ವಶಕ್ಕೆ ಪಡೆಯಲಾಗಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

;ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಸುದ್ದಿಗಾರರೊಂದಿಗೆ ಮಾತನಾಡಿ, ‘ಘಟನೆ ಸಂಬಂಧಿಸಿದಂತೆ ಎರಡು ದೂರುಗಳು ದಾಖಲಾಗಿವೆ. ದ್ವಿಚಕ್ರವಾಹನದಲ್ಲಿ ತಾನು ಸಾಗುವಾಗ ಕಾರು ಗುದ್ದಿಸಿ, ಪಿಸ್ತೂಲು ಕಸಿದುಕೊಳ್ಳಲು ಯತ್ನಿಸಿ, ಕಾರಿನಲ್ಲಿ ಹೊತ್ತೊಯ್ಯಲು ಮತ್ತು ಕೊಲೆ ಮಾಡಲು ಯತ್ನಿಸಿದ್ಧಾರೆ ಎಂದು ಅಭಿಷೇಕ್‌ ದೂರು ನೀಡಿದ್ದಾರೆ. 

ಅಭಿಷೇಕ್‌ ಅವರು ದ್ವಿಚಕ್ರ ವಾಹನವನ್ನು ಅಡ್ಡಾದಿಡ್ಡಿಯಾಗಿ ವೇಗವಾಗಿ ಚಲಾಯಿಸಿ ನಮ್ಮ ಕಾರಿಗೆ ಗುದ್ದಿಸಿದ್ದಾರೆ. ಕಾರಿನಿಂದ ನಾವು ಇಳಿಯುವಷ್ಟರಲ್ಲಿ ಪಿಸ್ತೂಲಿನಿಂದ ಗುಂಡು ಹಾರಿಸಿದ್ಧಾರೆ’ ಎಂದು ಪ್ರಜ್ವಲ್‌ ದೂರು ನೀಡಿದ್ಧಾರೆ ಎಂದು ತಿಳಿಸಿದರು.

ಎರಡು ಗುಂಡು ಹಾರಿಸಲಾಗಿದೆ. ಕಾರಿನ ಮುಂಭಾಗ ಮತ್ತು ಗಾಜಿಗೆ ತಗುಲಿವೆ. ಯಾರಿಗೂ ಅಪಾಯವಾಗಿಲ್ಲ. ಅಭಿಷೇಕ್‌ ಮದ್ಯಸೇವಿಸಿ ವಾಹನ ಚಲಾಯಿಸಿರುವುದು ಕಂಡುಬಂದಿದೆ. ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆಯಡಿ ಅವರನ್ನು ಬಂಧಿಸಲಾಗಿದೆ. ಅಲ್ಲದೇ, ಅವರು ದಾಖಲಿಸಿರುವ ದೂರಿಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆಗೆ ಕಾರಣ ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.