ಮನೆ ಜ್ಯೋತಿಷ್ಯ ಉತ್ತರ ಫಾಲ್ಗುಣಿ ಜಾತಕಾನ ಉದ್ಯೋಗ

ಉತ್ತರ ಫಾಲ್ಗುಣಿ ಜಾತಕಾನ ಉದ್ಯೋಗ

0

      ಸಂಘಟನಕಾರ ಖಗೋಳಜ್ಞ, ಜ್ಯೋತಿಷ್ಯಿ, ಸಂಚಾರವಿಭಾಗ, ಶಿಕ್ಷಣ ವಿಭಾಗ, ಹಸ್ತರೇಖಾ ವಿಶೇಷಜ್ಞ, ರಾಜ್ಯಪಾಲ, ಪರ್ಯಟನೆ ಕೇಂದ್ರ, ಪರ್ಯಟನೆ ವಿಭಾಗ,ಇಂಜಿನಿಯರಿಂಗ್ ವಿಭಾಗ, ರಾಜ್ಯ ವ್ಯಾಪಾರ ನಿಗಮ, ಗುತ್ತಿಗೆದಾರ, ಪ್ರತಿಕಾರಂಗ, ಉಪನ್ಯಾಸಕ, ಪತ್ರವ್ಯವಹಾರಕರ್ತ, ಪ್ರತಿಕಾ ಪ್ರತಿನಿಧಿ, ಪ್ರಕಾಶನ,ಲೋಕ ಸಂಪರ್ಕ ಅಧಿಕಾರಿ, ಧ್ವನಿ ಮುದ್ರಣ ಧ್ವನಿ ವರ್ಧಕ ಯಂತ್ರಗಳ ಉತ್ಪಾದಕ, ಸ್ಥಿರ ಕಾರ್ಯ ಮಾಡುವವ, ದೂರವಾಣಿ,ಗಣಿ ಅಭಿಯಂತ, ರಾಸಾಯನಿಕ ಅಭಿಯಂತ, ದೈಹಿಕ ತಜ್ಞ ಸಾರ್ವಜನಿಕ ಆರೋಗ್ಯ ವಿಭಾಗ, ಆಸ್ಪತ್ರೆ, ಸುದ್ದಿಪತ್ರಿಕೆಗಳ ನೋಂದಣಿದಾರ, ಜನನ ಮರಣ ನೋಂದಾಣಿಗಾರ,ರಾಜದೂತ,ಅಂಚೆ ತಂತಿ, ಲೇಖಕ, ಗಣಿತಜ್ಞ, ಲಿಪಿಕ,ಗುಮಾಸ್ತ, ಅಳೆಯುವ ತೂಕ ಮಾಡುವ ವೃತ್ತಿಯವ.

Join Our Whatsapp Group

 ಉತ್ತರ ಪಾಲ್ಗುಣಿ ಜಾತಕನ ರೋಗ  :

      ಶರೀರದ ಮೇಲೆ ಗುಳ್ಳೆ,ಉದರ ವಿಚಾರ ಕಂಠದಲ್ಲಿ ಹುಳಿ, ಕಂಠ ಬಾಬು ಝಂಝಾಟ,

  *ವಿಶೇಷ :

     ಬುಧನ ರಾಶಿ ಮತ್ತು ಸೂರ್ಯನ ನಕ್ಷತ್ರದಲ್ಲಿ ಜನಿಸಿದ ಇಂತಹ ಜಾತಕರು ವಿದ್ಯಾಯಧ್ಯಯನದ ಕಾಲದಿಂದಲೇ ಪ್ರಖರ ಪ್ರತಿಭಾವಂತರೆಂದು ಸಾಬೀತಾಗುತ್ತಾರೆ. ಗಣಿತ, ಸಾಹಿತ್ಯ ಮತ್ತು ಭಾಷಾದಿ ಕ್ಷೇತ್ರಗಳಲ್ಲಿ ವಿಶೇಷ ಪ್ರವೀಣತೆಯನ್ನು  ಹೊಂದುತ್ತಾರೆ ಪ್ರಿಯಭಾಷಿಗಳು, ಕಾರ್ಯಕುಶಲರು, ಅಲ್ಪ  ದ್ರವ್ಯದವರು, ಅಧಿಕ ವ್ಯಯಿಗಳು, ಉತ್ತಮ ಬುದ್ಧಿವಂತರು, ಉನ್ನತ ಮದಟ್ಟ ಜನರೊಡನೆ ಸ್ನೇಹ ಹೊಂದುವ ಅಭಿಲಾಷಿಗಳಾಗುತ್ತಾರೆ. ಇಂಥ ಜಾತಕರು ಅಲ್ಪ ಜವಾಬ್ದಾರಿಯನ್ನು ಹೊಂದುವವರು, ಪಶುಗಳ ಕುರಿತು ಶ್ರದ್ಧೆ ಹೊಂದಿರುವವರು ಅಥವಾ ಪಶುಪಾಲಕರಾಗುತ್ತಾರೆ. ಇಂಥ ಜಾತಕರು ಚೆನ್ನಾಗಿ ತಾಯ್ತಂದೆಯ ಸುಖದಿಂದ ವಂಚಿತರಾಗುತ್ತಾರೆ ಅಥವಾ ಇವರಿಗೆ ತಾಯ್ತಂದೆಯರ ವಿಶೇಷ ಸ್ನೇಹ ಮತ್ತು ಸಹಕಾರ ವ್ಯಾಪ್ತಿಯಾಗುವುದಿಲ್ಲ.ಇವರು ಸ್ವಾಲಂಬಿಗಳಾಗಿ, ಸ್ವಯಂ ಪುರುಷಾರ್ಥದಿಂದ  ಧನಸಂಪಾದನೆ ಮಾಡಲು ಸಫಲರಾಗುತ್ತಾರೆ. ಸ್ಮರಣಶಕ್ತಿ ತೀವ್ರವಾಗಿರುತ್ತದೆ. ಯಾವುದಾದರೂ ಕಲೆಯಲ್ಲಿ ಪ್ರವೀಣರಾಗುತ್ತಾರೆ. ಸಂಬಂಧಿಗಳೊಡನೆ ವಿಶೇಷ ಪ್ರೇಮ ವ್ಯವಹಾರ ಹೊಂದುತ್ತಾರೆ.ಸಮಾಜದಲ್ಲಿ ಕೀರ್ತಿವಂತರಾಗುತ್ತಾರೆ.

 ಉತ್ತರಾ ಪಾಲ್ಗುಣಿ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :

     ಈ ನಕ್ಷತ್ರದಲ್ಲಿ ಜ್ವರ ಬಂದರೆ ಏಳು ದಿನ ಕ್ರೂರ,ಆರ್ಯಮಾ ದೇವತೆಗೆ ಶಾಂತಿ ಮಾಡಿಸಿದರೆ ಆರೋಗ್ಯ ಒಂದನೇ ಚರಣದಲ್ಲಿ ಜನಿಸಿದ ಶಿಶು ಒಂದು ತಿಂಗಳು ತಂದೆಗೆ ಕ್ರೂರ, ನಂತರ ಶಾಂತಿ ಮಾಡಿಸಿದರೆ ದೋಷ ದೂರವಾಗುತ್ತದೆ..ಈ ನಕ್ಷತ್ರದಲ್ಲಿ ಋತುಮತಿಯಾದ ಕನ್ಯೆ ಸೌಭಾಗ್ಯವತಿ, ಉತ್ತರವತಿಯಾಗಿ ಜೀವಿಸುತ್ತಾಳೆ. ಇದರಲ್ಲಿ ಕಳೆದ ಆಭರಣ ಮೂರೂ ತಿಂಗಳಲ್ಲಿ ಶೀಘ್ರವಾಗಿ ಪುನಃ ಪ್ರಾಪ್ತಿಯಾಗುತ್ತದೆ.ಇದರಲ್ಲಿ ನೆರವೇರಿಸಿದ ಕಾರ್ಯಗಳು ಸ್ಥಿರವಾಗುತ್ತವೆ.ಇದರಲ್ಲಿ ಜನಿಸಿದ ಜಾತಕನ್ನು ಪ್ರಬಲನಾಗುತ್ತಾನೆ.

    ಈ ನಕ್ಷತ್ರದಲ್ಲಿ ಕ್ಷೌರ,  ಪ್ರಯಾಣ ಅ ಭ್ಯಂಜನ, ನವೀನ ಅಲಂಕಾರ, ಹೊಸಮನೆ ರಾಜನದರ್ಶನ ನವೀನ ಕಾರ್ಯರಂಭ, ಮುಂಜಿ, ವಿವಾಹ,ಶೋಭನ,ಶ್ರೀಮಂತ, ಚೌಲ, ಅಪ್ರಶಾಣನ, ಹಲಕ್ರಿಯೆ, ಕಬ್ಬಿನ ಗಾಣ,ಬೀಜ ಬಿತ್ತುವುದು, ವಾಹನ, ಸಿಂಹಾಸನಾರೋಹಣ, ಶಂಕುಸ್ಥಾಪನೆ, ವಾಸ್ತುಶಿಲ್ಪ ಇತ್ಯಾದಿ ಕಾರ್ಯಗಳು ಸಿದ್ಧಿಸುತ್ತವೆ. ಜಾತಕನಿಗೆ 8ನೇ ವರ್ಷದಲ್ಲಿ  ಗಂಡ ಕಳೆದರೆ ಪೂರ್ಣಯಸ್ಸು 84 ವರ್ಷಗಳು.