ಈ ಕ್ಷೇತ್ರದ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳು
2021 ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ನೂತನ ಬಂಗಾರದ ಕವಚ ಹಾಗೂ ಅಲಂಕರಖಣದ ಶ್ರೀ ಸಿದ್ಧ ಗಣಪತಿ ಸ್ವಾಮಿಗೆ ರಜತಾ ಕವಚಗಳನ್ನು ಸಮರ್ಪಿಸಲಾಗಿದೆ.
2003 ದೇವಸ್ಥಾನದ ಮುಂಭಾಗದಲ್ಲಿ ಪ್ರವೇಶ ದ್ವಾರ ಹಾಗೂ ಮುಖ ಮಂಟಪವನ್ನು ನಿರ್ಮಿಸಲಾಗಿದೆ.
2006 1998ರಲ್ಲಿ ಪ್ರಾರಂಭವಾದ ವಸತಿ ಗೃಹ ಹಾಗೂ ಭೋಜನ ಶಾಲೆಯ ಕಟ್ಟಡ ಸಂಕೀರ್ಣದ ನಿರ್ಮಾಣ ಕಾರ್ಯ ಪೂರ್ವಗೊಂಡಿದ್ದು ಯಥಾಥಿಗಳಿಗೆ ಕೊಠಡಿಗಳನ್ನು ನೀಡಲಾಗಿದೆ.
2008 ಈ ಕ್ಷೇತ್ರದ ದೇವಸ್ಥಾನದ ಎಡಭಾಗದಲ್ಲಿ ಲಲಿತ ಕಲಾ ಮಂಟಪ ಮತ್ತು 12 ಕೊಠಡಿಗಳ ಹಾಗೂ ದೇವಸ್ಥಾನದ ಹಿಂಭಾಗದಲ್ಲಿ 23 ಕೊಠಡಿಗಳ ವಸತಿ ಗೃಹ ನಿರ್ಮಾಣ ಈ ಶ್ರೀ ಆಂಜನೇಯ ಸ್ವಾಮಿ ದೇವರ ದೇವಸ್ಥಾನ ಹಾಗೂ ಮಂಜಿನಕಟ್ಟೆ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.
2009 ಕ್ಷೇತ್ರದ ಹೊರನಾಡಿನ ನೌಕರ ವೃಂದದವರಿಗೆ ಮಳಲಮಕ್ಕಿಯಲ್ಲಿ ಎರಡು ಸಂತಸ್ತಿನ 39 ವಾಸದ ಮನೆ ಮತ್ತು ಭಕ್ತ ನಿವಾಸದ ಪಕ್ಕದಲ್ಲಿ ಐದು ಅಂತಸ್ತಿನ ಹದಿನೆಂಟು ವಾಸದ ಮನೆಯ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.
2010 ದಿನಾಂಕ : 25 ನವೆಂಬರ್ 2010 ರಂದು ಶ್ರೀ ಆಂಜನೇಯ ಸ್ವಾಮಿಗೆ ರಜತ ಕವಚ ಸಮರ್ಪಿಸಲಾಗಿದೆ.ಕುಡಿಯುವ ನೀರು ಸುಧೀಕರಣ ಘಟಕವನ್ನು ನಿರ್ಮಿಸಲಾಗಿದೆ.
2011 ದಕ್ಷಿಣಾಯಮ್ನಯ ಶ್ರೀ ಶಾರದ ಪೀಠಾದೀಶ್ವರರಾದ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ದಿವ್ಯಹಸ್ತದಿಂದ ಈ ಶ್ರೀ ಆದಿತ್ಯಾದಿ ನವಗ್ರಹ ದೇವರುಗಳ ಪುನಃ ಪ್ರತಿಷ್ಠಾಪನೆ ನೆರವೇರಿದೆ.
2012 ಶ್ರೀ ಕ್ಷೇತ್ರದಲ್ಲಿ ಶ್ರೀ ಮಾತಾ ಪುಷ್ಕರಣಿಯನ್ನು ನಿರ್ಮಿಸಿ 2012ರ ಡಿಸೆಂಬರ್ 3ರಂದು ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಚಾರ್ಯ ಶ್ರೀ ಗೋಕರ್ಣ ಮಂಡಲಾಧೀಶ ಶ್ರೀಮದ್ ರಾಮಚಂದ್ರಪುರ ಮಠಾಧೀಶರಾದ ಶ್ರೀ ಶ್ರೀ ರಾಘವೇದ್ರಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಹಸ್ತದಿಂದ ಲೋಕಾರ್ಪಣೆ ಮಾಡಲಾಗಿದೆ.
2013 ಶ್ರೀ ಕ್ಷೇತ್ರದಲ್ಲಿ ಬಹು ಮಂಡಿ ಕಾರ್ಯಾಲಯದ ನಾಲ್ಕು ಮನೆಗಳು ಮತ್ತು ಜನರೇಟರ್ ಕೊಠಡಿಗಳನ್ನು ನಿರ್ಮಿಸಲಾಯಿತು.
2014 ದಿನಾಂಕ 19.01.2014 ರಂದು ನೂತನವಾಗಿ ನಿರ್ಮಿಸಲಾದ ಭದ್ರಾನಿವಾಸ ವಸತಿಗೃಹದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಾಯಿತು.
2015 ಶುದ್ದೀಕರಣ ಘಟಕ ಎಸ್. ಟಿ. ಪಿ. ಪ್ಲಾಟ್ ಅನ್ನು ನಿರ್ಮಿಸಲಾಯಿತು
2016 ಭಕ್ತಾದಿಗಳ ಅನುಕೂಲಕ್ಕಾಗಿ ಕಬ್ಬಿಣದ ಶೀಟುಗಳನ್ನೂಳಗೊಂಡ ಮೇಲ್ಚಾವಣಿಯನ್ನು ಹೊಂದಿರುವ ನೂತನ ಊಟದ ಸಾಲು,ಪ್ರಸಾದ ಭೋಜನವನ್ನು ಸ್ವೀಕರಿಸಿ ಹೊರ ಹೋಗುವ ವ್ಯವಸ್ಥೆಗಾಗಿ ಕಬ್ಬಿಣದ ಮೆಟ್ಟಿಲುಗಳನ್ನು ಹಾಗೂ ಬಿಟ್ಟಿರುವ ಶ್ರೀಕ್ಷೇತ್ರದ ವಾಹನಗಳ ನಿಲುಗಡೆಯ ಸ್ಥಳಕ್ಕೆ ಕಬ್ಬಿಣದ ಶೀಟುಗಳನ್ನೂಳಗೊಂಡ ಮೇಲ್ಚಾವಣಿಯನ್ನು ನಿರ್ಮಿಸಲಾಯಿತು.
2017 ದೇವಸ್ಥಾನದ ರಥ ಬೀದಿಯಿಂದ ಹಿಡಿದು ದೇವಸ್ಥಾನದ ಒಳ ಹಾಗೂ ಹೊರಗಿನ ಎಲ್ಲಾ ದಿಕ್ಕುಗಳಲ್ಲೂ ಸಿ. ಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. 2018 ಶ್ರೀ ಕ್ಷೇತ್ರದ ಒಳ ಆವರಣದಲ್ಲಿ ಸೇವಾ ಪ್ರಸಾದ ವಿತರಣೆಯ ಕೌಂಟರ್ ತೆರೆಯಲಾಗಿದೆ. 2021 ಶ್ರೀ ಕ್ಷೇತ್ರದ ಬೆಳಕಿನ ವ್ಯವಸ್ಥೆಗಾಗಿ ಸುಸಜ್ಞಿತ ಜನರೇಟರ್ ನಿರ್ವಹಣೆ ಕೊಠಡಿ ನಿರ್ಮಾಣ ಮಾಡಲಾಗಿದೆ.