ಮನೆ ಅಪರಾಧ ಗೃಹಲಕ್ಷ್ಮಿ ಯೋಜನೆ ನೋಂದಣಿ ಮಾಡಿಸುವುದಾಗಿ ನಂಬಿಸಿ ವೃದ್ಧೆಯಿಂದ 40 ಗ್ರಾಂ ಚಿನ್ನದ ಸರ ಕಳವು

ಗೃಹಲಕ್ಷ್ಮಿ ಯೋಜನೆ ನೋಂದಣಿ ಮಾಡಿಸುವುದಾಗಿ ನಂಬಿಸಿ ವೃದ್ಧೆಯಿಂದ 40 ಗ್ರಾಂ ಚಿನ್ನದ ಸರ ಕಳವು

0

ರಾಮನಗರ: ಗೃಹಲಕ್ಷ್ಮೀ ಯೋಜನೆ ನೊಂದಣಿ ಮಾಡಿಸಿಕೊಡುವುದಾಗಿ ವೃದ್ದೆಯನ್ನು ನಂಬಿಸಿದ ಆಗಂತುಕ‌ನೋರ್ವ 40 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ತಾಲೂಕಿನ ಚನ್ನಪಟ್ಟಣ ನಗರದ ಅಂಚೇಕಚೇರಿ ಸಮೀಪ ನಡೆದಿದೆ.

Join Our Whatsapp Group

ಚನ್ನಪಟ್ಟಣ ತಾಲ್ಲೂಕಿನ ಹಾರೋಕೊಪ್ಪ ಗ್ರಾಮದ ಸಾವಿತ್ರಮ್ಮ (62) ಎಂಬ ಮಹಿಳೆ ಆಸ್ಪತ್ರೆ ಯಲ್ಲಿ ದಾಖಲಾಗಿದ್ದ ತಮ್ಮ ಮಗನನ್ನು ನೋಡಲು ಮಂಡ್ಯ ಆಸ್ಪತ್ರೆ ಗೆ ಹೋಗಿದ್ದವರು ಸ್ವಗ್ರಾಮಕ್ಕೆ ಹಿಂದಿರುಗಲು ಚನ್ನಪಟ್ಟಣಕ್ಕೆ ಬಂದಿದ್ದಾಗ ಕಳ್ಳತನ ನಡೆದಿದೆ.

ಒಂಟಿಯಾಗಿದ್ದ ಈಕೆಯ ಬಳಿ ಬಂದ ಆಗಂತುಕ ವ್ಯಕ್ತಿ ನಿಮಗೆ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ವೈದ್ಯರ ಸಹಿ ಬೇಕು ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಸ್ಪತ್ರೆ ಬಳಿ ವೈದ್ಯರು ನಿನ್ನ ಕುತ್ತಿಗೆಯಲ್ಲಿರುವ ಸರ ನೋಡಿದರೆ ಸಹಿ ಮಾಡುವುದಿಲ್ಲ ಎಂದು ನಂಬಿಸಿ ಒಡವೆ ತೆಗೆಸಿ ಪರ್ಸ್ ನಲ್ಲಿ ಹಾಕುವಂತೆ ಹೇಳಿದ್ದಾನೆ. ಅವನು ಹೇಳಿದಂತೆ ಕೇಳಿದ ವೃದ್ಧ ಪರ್ಸ್ ಗೆ ಹಾಕಿದ್ದಾಳೆ. ಈ ಸಮಯದಲ್ಲಿ ಆಕೆಗೆ ಕಾಣದಂತೆ 40 ಗ್ರಾಂ ಚಿನ್ನದ ಸರವನ್ನು ತೆಗೆದುಕೊಂಡು, ಅಂಚೇ ಕಚೇರಿ ಬಳಿ ಕರೆತಂದು ಕೂರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಿಂದಿನ ಲೇಖನಕ್ಯಾನ್ಸರ್ ಹಲವು ಆರೋಗ್ಯ ಸಮಸ್ಯೆಗಳಿಗೆ ಅಶ್ವಗಂಧ ರಾಮಬಾಣ
ಮುಂದಿನ ಲೇಖನಆಗಸ್ಟ್‌ 4ಕ್ಕೆ ನಮೋ ಭೂತಾತ್ಮ-2 ಚಿತ್ರ ತೆರೆಗೆ