ಮನೆ ಸ್ಥಳೀಯ ಏ.01 ರಿಂದ ಏ.30ರ ಒಳಗೆ ಪಾವತಿಸಿದಲ್ಲಿ ಶೇ.5 ರಷ್ಟು ಆಸ್ತಿ ತೆರಿಗೆ ರಿಯಾಯಿತಿ

ಏ.01 ರಿಂದ ಏ.30ರ ಒಳಗೆ ಪಾವತಿಸಿದಲ್ಲಿ ಶೇ.5 ರಷ್ಟು ಆಸ್ತಿ ತೆರಿಗೆ ರಿಯಾಯಿತಿ

0

 ಮೈಸೂರು: ವಿವಿಧ ವರ್ಗಗಳ ಸ್ವತ್ತುಗಳ ಮಾರುಕಟ್ಟೆ ಬೆಲೆಗಳಿಗೆ ಅನುಗುಣವಾಗಿ ಪ್ರಸಕ್ತ ಸಾಲಿನಲ್ಲಿ ಚಾಲ್ತಿ ಇರುವ ಪರಿಷ್ಕೃತ ಮಾರ್ಗಸೂಚಿ ಬೆಲೆಗಳನ್ನು ಅಳವಡಿಸಿಕೊಳ್ಳಲಾಗಿದ್ದು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಆಸ್ತಿಗಳಿಗೆ ಏ.01 ರಿಂದ ಅನ್ವಯವಾಗುವಂತೆ ವಿಧಿಸಿ ಜಾರಿಗೊಳಿಸಲಾಗಿರುವ ವಿಷಯವನ್ನು ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಬಯಸಿದೆ.

 2024-25 ನೇ ಸಾಲಿನ ಆಸ್ತಿ ತೆರಿಗೆಯನ್ನು ಏ. 01 ರಿಂದ ಏ.30 ಒಳಗೆ ಪಾವತಿಸಿದಲ್ಲಿ ಶೇ.5 ರಷ್ಟು ಆಸ್ತಿ ತೆರಿಗೆ ರಿಯಾಯಿತಿ ಸೌಲಭ್ಯವಿರುತ್ತದೆ. ಆದುದ್ದರಿಂದ, ಏಪ್ರಿಲ್ ಮಾಹೆಯಲ್ಲಿ 2024-25 ನೇ ಸಾಲಿನ ಆಸ್ತಿ ತೆರಿಗೆಯನ್ನು ಆಯಾ ವಲಯ ಕಛೇರಿಗಳಲ್ಲಿ ಪಾವತಿಸುವ ಮೂಲಕ ಶೇಕಡ 5 ರಷ್ಟು ತೆರಿಗೆ ರಿಯಾಯಿತಿ ಪಡೆದುಕೊಳ್ಳಬಹುದು ಎಂದು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಮಸ್ತ ಆಸ್ತಿ ಮಾಲೀಕರಿಗೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.