ಮೈಸೂರು: ಲಂಚ ಪಡೆಯುವಾಗ ಬಿಲ್ ಕಲೆಕ್ಟರ್ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಹೂಟಗಳ್ಳಿ ನಗರಸಭೆಯ ಬಿಲ್ ಕಲೆಕ್ಟರ್ ದಿನೇಶ್ ಲೋಕಾಯುಕ್ತ ಬಲೆಗೆ ಬಿದ್ದವರು.
ಮಧ್ಯವರ್ತಿ ಕಡೆಯಿಂದ ಜಮೀನನ್ನು ಲೇಔಟ್ ಆಗಿ ಪರಿವರ್ತಿಸಲು ಬಿಲ್ ಕಲೆಕ್ಟರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಭೈರಪ್ಪ ಎನ್ನುವವರಿಂದ ನಗರಸಭೆಯ ಹೊರಗಡೆ ಲಂಚ ಪಡೆಯುವ ವೇಳೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.
ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.