ಮನೆ ಯೋಗಾಸನ ಪತಂಜಲಿ ಯೋಗದ ಸಂಕ್ಷಿಪ್ತ ವಿವರಣೆ: ಭಾಗ -3

ಪತಂಜಲಿ ಯೋಗದ ಸಂಕ್ಷಿಪ್ತ ವಿವರಣೆ: ಭಾಗ -3

0

 ಕರ್ಮಯೋಗದ ಮುಖ್ಯ ಭಾಗಗಳು :- ಯಮ, ನಿಯಮ, ಆಸನ ಮತ್ತು ಪ್ರಾಣಾಯಾಮ           ಜ್ಞಾನ ಯೋಗದ ಮುಖ್ಯ ಭಾಗಗಳು :-ಪ್ರಾಣಾಯಾಮ, ಪ್ರತ್ಯಹರಾದಾರಣ ಮತ್ತು ಧ್ಯಾನ  ಪ್ರೇಮತೋ ಭಕ್ತಿ ಯೋಗದ ಮುಖ್ಯ ಭಾಗಗಳು :- ಧ್ಯಾನ ಮತ್ತು ಸಮಾಧಿ…          

Join Our Whatsapp Group

ಇವು ದೇಹ, ಮನಸ್ಸು ,ಬುದ್ಧಿಗಳನ್ನು ಆತ್ಮವೆಂಬ ಸಾಗರದಲ್ಲಿ ರಮಿಸಲು ಸಾಧಕನಿಗೆ ಸಹಾಯಕ. ಜ್ಞಾನ ,ಕರ್ಮ, ಭಕ್ತಿಗಳೆಂಬ ಅಲೆಗಳು ಯೋಗವೆಂಬ ನದಿಯಲ್ಲಿ ಮಿಂದು ಮುಳುಗಿದ ಮೇಲೆ ಅವು ತಮ್ಮ ನಿಜ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ ಅರ್ಥತ್ ಒಂದಾಗುತ್ತದೆ. ಹೀಗೆ ಯೋಗ ಮಾರ್ಗವು ಮೂಢ ಅಥವಾ ಅಚೇತನ ಸ್ಥಿತಿಯಿಂದ, ಚೇತನ ಸ್ಥಿತಿಯವರೆಗಿನ ಎಲ್ಲಾ ಸಾಧಕರನ್ನು ಮುಕ್ತಿ ಹಾಗೂ ಸೌಂದರ್ಯ ಸಾಮ್ರಾಜ್ಯಗಳತ್ತ ಕರೆದೊಯ್ಯುತ್ತದೆ. ಅದುವೇ “ಸ್ಥಿರಸುಖಮಾಸನಂ”. ಮುಂದೆ, ನಾವು ನಮ್ಮ ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗಿ ಯೋಗಾಸನಗಳು ಮತ್ತು ಪ್ರಾಣಾಯಾಮಗಳು ಕುರಿತು ವಿವರವಾಗಿ ತಿಳಿಯೋಣ.  

ಆಸನಗಳ ಮತ್ತು ಪ್ರಾಣಾಯಾಮಗಳ ಹೆಸರುಗಳ ಕುರಿತು ಓದುಗರಗಮನಕ್ಕೆ: ಇಲ್ಲಿ ಗಮನಿಸಬೇಕಾದ ಒಂದು ವಿಷಯವಿದೆ ಅದು ಕೇವಲ ಯೋಗಾಸನ ಮತ್ತು ಪ್ರಾಣಾಯಾಮಗಳ ಹೆಸರುಗಳನ್ನು ಕುರಿತು ಮತ್ತು ಅವುಗಳಿಂದ ಯೋಗ ಅಭ್ಯಾಸಗೆ ಉಂಟಾಗುವ ಗೊಂದಲಗಳನ್ನು ಕುರಿತು. ಉದಾಹರಣೆಗೆ ಆಸನಗಳಲ್ಲಿ “ಗೋಮುಖಾಸನ” ವನ್ನು ಕೆಲವರು ʼಕಾಮುದೇನಾಸನʼ ಎನ್ನುತ್ತಾರೆ. ಅದು ಬಹುಶಃ ಗೋವು ಬದಲಿಗೆ ಕಾಮಧೇನು ಎಂದುಕೊಂಡು ʼಕಾಮಧೇನಾಸನʼ ಅಪಭ್ರಂಶವಾಗಿ, ʼಕಾಮುದೇನಾಸನʼ ಆಗಿರಬಹುದು. ಅದೇ ರೀತಿಯಲ್ಲಿ, “ಅರ್ಧ ಚಕ್ರಸನ”ವನ್ನು ಕೆಲವು ಕಡೆ ʼಉರ್ಧ್ವಾಸನʼ ಅಥವಾ ʼಅರ್ಧಚಂದ್ರಸಾನʼ ಅಂತನು ಹೇಳುತ್ತಾರೆ. ಮತ್ತು “ಜಾನು ಶಿರಾಸನ”ವನ್ನು ಬಹಳಷ್ಟು ಕಡೆ, “ಜಾನುಶೀರ್ಷಾಸನ” ಎಂದು ಹೇಳಲಾಗುತ್ತಿದೆ.

ಇನ್ನು, ಪ್ರಾಣಾಯಾಮಗಳಲ್ಲೂ ಅಷ್ಟೇ, ಉದಾರಣೆಗೆ ,ಅನುಲೋಮ-ವಿಲೋಮ ಮತ್ತು ನಾಡಿಶೋಧನಾ ಪ್ರಾಣಾಯಾಮಗಳು ಬೇರೆ ಬೇರೆಯಾಗಿದ್ದು, ಅವು ಒಂದೇ ಎಂದು ಕೆಲವರು, ಬೇರೆ ಬೇರೆ ಎಂದು ಮತ್ತೆ ಕೆಲವರು ಹೇಳುತ್ತಾರೆ. (ಅರ್ಥಶಃ ನೋಡಿದರೆ, ʼಅನುಲೋಮʼ ಶಬ್ದವನ್ನೇ ತೆಗೆದುಕೊಳ್ಳಿ, ಲೋಮ ಅಂದರೆ ಕೂದಲು ಎಂದರ್ಥ. ಅನುಲೋಮ ಎಂದರೆ ಕೂದಲಿನ ಜೊತೆಗೆ ಎಂದು. ವಿಲೋಮ ಎಂದರೆ, ಕೂದಲು ಇಲ್ಲದೆ ಎಂದು. ಪ್ರತಿ ಲೋಮ ಎಂದರೆ, ಕೂದಲಿಗೆ ವಿರುದ್ಧವಾಗಿ ಎಂದು ಮತ್ತು ಬಿಟ್ಟು ಬಿಟ್ಟು ಮಾಡುವ ಈ ಪ್ರಾಣಾಯಾಮಗಳ ವಿಧಾನಗಳನ್ನು ಉನ್ನತ ಮಟ್ಟದ ಸಾಧಕರಿಗಾಗಿ ಇದ್ದು, ಇದಕ್ಕೆ ಅಂತರರಾಷ್ಟ್ರೀಯ ಯೋಗಪಟು, ದಿ ಬಿ.ಕೆ.ಎಸ್ ಅಯ್ಯಂಗಾರ್ಯರ “ಪ್ರಾಣಯಾಮ ದೀಪಿಕಾ” ಅಭ್ಯಾಸ ಅನುಸರಿಸಬಹುದು. ಇನ್ನು ʼಅನುಲೋಮ – ವಿಲೋಮʼ ಮತ್ತು ʼನಾಡಿಶೋಧನʼ ಪ್ರಾಣಾಯಾಮಗಳು ಒಂದೇ ಎಂದರ್ಥ ವಿವರಗಳು ಚಾಲ್ತಿಯಲ್ಲಿದ್ದು, ಇನ್ನೊಂದು ಕಡೆ, ʼಅನುಲೋಮ-ವಿಲೋಮʼ ಪ್ರಾಣಾಯಾಮದ ಮುಂದುವರಿದ ಭಾಗವೇ, ಅಂದರೆ, ಅದನ್ನು “ಮೂಲಬಂಧ” ಮತ್ತು “ಜಾಲಂಧರ” ಬಂಧಗಳೊಂದಿಗೆ, ದೀರ್ಘವಾಗಿ ಮಾಡಿದರೆ ,ಅದುವೇ ʼನಾಡಿಶೋಧನʼ ಪ್ರಾಣಾಯಾಮವೆಂಬ ಅರ್ಥದಲ್ಲಿಯೂ ಹೇಳಲಾಗಿದೆ. ಅದೇ ರೀತಿಯಲ್ಲಿ ಒಬ್ಬರು ಸಹಜವಾದ ಆದರೆ ದೀರ್ಘವಾದ ಪೂರಕ ರೇಚಕಗಳೊಂದಿಗೆ ಮಾಡುವ ʼಸಾಮಾನ್ಯ ಪ್ರಾಣಾಯಾಮʼವನ್ನು ʼಉಜಾಯೀಪ್ರಾಣಾಯಾಮʼ ಎನ್ನುವರು. ಇನ್ನೊಬ್ಬರು, ಉಸಿರು ಹೊರ ಬಿಟ್ಟು ಸ್ಥಿತಿಯಲ್ಲಿ, ಗಂಟಲಿನ ಮೂಲಕ ಶಬ್ದವಾಗಿ ದೀರ್ಘ ಪೂರಕ ಮಾಡುವುದೇ “ಉಜಾಯೀ ಪ್ರಾಣಾಯಾಮ” ಎನ್ನುವರು.    

ತಾತ್ಪರ್ಯವಿಷ್ಟೆ, ಯಾವುದೇ ಯೋಗಾಸನ ಅಥವಾ ಪ್ರಾಣಯಾಮಗಳಿರಲಿ ಹೆಸರು ಮುಖ್ಯವಲ್ಲ, ಬದಲಿಗೆ ಅವುಗಳ ಮಾಡುವ ವಿಧಾನ ಮುಖ್ಯವಾಗಿರಬೇಕು ಮತ್ತು ನಮಗೆ ಅವುಗಳಿಂದ ಪ್ರಯೋಜನಗಳನ್ನು ತಿಳಿದು ನಾವು ಎಚ್ಚರಿಕೆಯಿಂದ ನಡೆದರೆ ಅಷ್ಟು ಸಾಕು.  

ಮುಂದುವರೆಯುತ್ತದೆ……..