ಮುದ್ದೇಬಿಹಾಳ: ಕಾರೊಂದು ನಿಂತಿದ್ದ ಕ್ಯಾಂಟರಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಮುದ್ದೇಬಿಹಾಳ ತಾಲೂಕು ಬಿದರಕುಂದಿ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಸೇರಿ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಹುನಗುಂದ-ತಾಳಿಕೋಟೆ ರಾಜ್ಯ ಹೆದ್ದಾರಿಯ ಧನ್ನೂರ ಟೋಲ್ ಬಳಿ ಸೆ.26ರ ಗುರುವಾರ ಬೆಳಗಿನ ಜಾವ ನಡೆದಿದೆ.
ಮೃತರನ್ನು ಬಿದರಕುಂದಿಯ ಗುತ್ತಿಗೆದಾರ ಲಕ್ಷ್ಮಣ ವಡ್ಡರ, ಬೈಲಪ್ಪ ಬಿರಾದಾರ, ಮುದ್ದೇಬಿಹಾಳದ ರಾಮಣ್ಣ ನಾಯಕ ಮಕ್ಕಳು ಮತ್ತು ಕಾರ್ ಚಾಲಕ ಗುಡ್ನಾಳದ ಮಹ್ಮದ್ ರಫೀಕ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳ ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದು, ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ.
ಇವರೆಲ್ಲರೂ ಹೊಸಪೇಟೆ ಬಳಿಯಿರುವ ದೇವಸ್ಥಾನವೊಂದಕ್ಕೆ ಹೋಗಿ ಮರಳಿ ಬರುವಾಗ ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
Saval TV on YouTube