ಮನೆ ರಾಷ್ಟ್ರೀಯ ಕೈಲಾಸ ದೇವರ ದರ್ಶನ ಮುಗಿಸಿ ವಾಪಾಸ್‌ ಆಗುವ ವೇಳೆ ನದಿಗೆ ಬಿದ್ದ ಕಾರು: ರಾಜ್ಯದ 6...

ಕೈಲಾಸ ದೇವರ ದರ್ಶನ ಮುಗಿಸಿ ವಾಪಾಸ್‌ ಆಗುವ ವೇಳೆ ನದಿಗೆ ಬಿದ್ದ ಕಾರು: ರಾಜ್ಯದ 6 ಮಂದಿ ಸಾವು

0

ಉತ್ತರಾಖಂಡ್: ಕಾರು ನದಿಗೆ ಬಿದ್ದ ಪರಿಣಾಮ ಕರ್ನಾಟಕದ ಇಬ್ಬರು ಸೇರಿದಂತೆ 6 ಮಂದಿ ಮೃತಪಟ್ಟಿರುವ ಘಟನೆ ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಮಂಗಳವಾರ(ಅ.24 ರಂದು) ನಡೆದಿದೆ.

ಕೈಲಾಸ ದೇವರ ದರ್ಶನ ಮುಗಿಸಿ ವಾಪಾಸ್‌ ಆಗುವ ವೇಳೆ ಈ ದುರಂತ  ಘಟನೆ ನಡೆದಿದೆ.

ಮಂಗಳವಾರ ಸಂಜೆ ಧಾರ್ಚುಲಾ-ಲಿಪುಲೇಖ್ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಕಾರು ಕಾಳಿ ನದಿಗೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ 6 ಮಂದಿ ಮೃತಪಟ್ಟಿದ್ದಾರೆ. ಇವರು ಕೈಲಾಸ ದರ್ಶನವನ್ನು ಮಾಡಿ ವಾಪಾಸಾಗುತ್ತಿದ್ದರು. ಮೃತರಲ್ಲಿ ಇಬ್ಬರು ಬೆಂಗಳೂರಿನವರು, ಇಬ್ಬರು ತೆಲಂಗಾಣದವರು ಮತ್ತು ಇಬ್ಬರು ಉತ್ತರಾಖಂಡದವರು ಎಂದು ಪಿಥೋರಗಢ್ ಪೊಲೀಸ್ ಅಧೀಕ್ಷಕ (ಎಸ್‌ ಪಿ) ಲೋಕೇಶ್ವರ್ ಸಿಂಗ್ ಹೇಳಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಬುಧವಾರ ಮುಂಜಾನೆ ಮೃತದೇಹಗಳ ಶೋಧ ಕಾರ್ಯವನ್ನು ಆರಂಭಿಸಲಾಗುದೆಂದು ಪೊಲೀಸರು ಹೇಳಿದ್ದಾರೆ.