ಮನೆ ರಾಜ್ಯ ಮೈಸೂರಿಂದ ಮಡಿಕೇರಿಗೆ ಹೊರಟ ಬಸ್‌ನಲ್ಲಿ ಬೆಕ್ಕಿನ ಮರಿಗೂ ಟಿಕೆಟ್‌

ಮೈಸೂರಿಂದ ಮಡಿಕೇರಿಗೆ ಹೊರಟ ಬಸ್‌ನಲ್ಲಿ ಬೆಕ್ಕಿನ ಮರಿಗೂ ಟಿಕೆಟ್‌

0

ಮಡಿಕೇರಿ : ಸಾಮಾನ್ಯವಾಗಿ ಯಾವುದೇ ಬಸ್‌ಗಳಲ್ಲಿ ವಯಸ್ಕರಿಗೆ ಪೂರ್ಣ ದರದ ಟಿಕೆಟ್‌, ವೃದ್ಧರಿಗೆ ಹಿರಿಯ ನಾಗರಿಕರ ಪಾಸ್‌ ಆಧರಿಸಿ ಹಾಗೂ ರಾಜ್ಯದ ಮಹಿಳೆಯರಿಗೆ ಉಚಿತ ಟಿಕೆಟ್‌ ನೀಡಲಾಗುತ್ತದೆ. ಮಕ್ಕಳಿಗೆ ಇದರಲ್ಲಿ ಶುಲ್ಕ ಕಡಿಮೆ ಇರುತ್ತದೆ. ಆದರೆ ಮೈಸೂರಿನಿಂದ ಮಡಿಕೇರಿಗೆ ಹೊರಟ ಬಸ್‌ನಲ್ಲಿ ಬೆಕ್ಕಿನ ಮರಿಗೂ ಶೇ.50 ರಷ್ಟು ಟಿಕೆಟ್‌ ಶುಲ್ಕ ತೆಗೆದುಕೊಂಡ ಘಟನೆ ನಡೆದಿದೆ.

ಮೈಸೂರು-ಮಡಿಕೇರಿ ಮಾರ್ಗದ ಕೆಎಸ್‌ಆರ್‌ಸಿ ಬಸ್‌ನಲ್ಲಿ ಕಂಡಕ್ಟರ್ ಬೆಕ್ಕಿನ ಮರಿಗೆ ಸೀಟ್‌ ರಹಿತ ಶೇ.50 ಬಸ್‌ ಟಿಕೆಟ್‌ ಶುಲ್ಕ ತೆಗೆದುಕೊಂಡ ವಿಚಿತ್ರ ಘಟನೆ ನಡೆದಿದೆ. ಈ ಟಿಕೇಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಧಾರ್ ಅಥವಾ ಐಡಿ ಕಾರ್ಡ್‌ ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.

ಆದರೀಗ ಮೈಸೂರು – ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬೆಕ್ಕಿನ ಮರಿಗೂ ಟಿಕೆಟ್‌ ಕೊಡಲಾಗಿದೆ. ಟಿಕೆಟ್‌ ತೆಗೆದುಕೊಂಡರೂ ಸಹ ಆ ಬೆಕ್ಕಿನ ಮರಿಗೆ ಸೀಟ್‌ ನೀಡಿಲ್ಲ ಎನ್ನುವ ವಿಚಾರ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಲಾಗಿದೆ.