ಮನೆ ವ್ಯಕ್ತಿತ್ವ ವಿಕಸನ ಸ್ವಭಾವಗಳ ವೈಶಿಷ್ಟ್ಯ

ಸ್ವಭಾವಗಳ ವೈಶಿಷ್ಟ್ಯ

0

   ಮನುಷ್ಯರ ಗುಣ ಸ್ವಭಾವಗಳು ಹೇಗೆ ನಿರ್ಧಾರವಾಗುತ್ತವೇ? ಕುಟುಂಬ, ಪರಿಸರ, ಅನುಭವ,ಲಿಂಗ, ಪ್ರದೇಶ….ಹೀಗೆ ಅನೇಕ ಉತ್ತರಗಳಿವೆ. ವಿಕಾಸದ ತತ್ವಗಳನ್ನು ಅರ್ಥ ಮಾಡಿಕೊಂಡರೆ ಸ್ವಭಾವದ ನಿರ್ಧಾರದಲ್ಲಿ ಒಂದು ಸೂತ್ರ ಇರುವುದನ್ನು ಕಾಣಬಹುದು. ಎಲ್ಲ ಮನುಷ್ಯರ ಸ್ವಭಾವಗಳೂ ಒಂದೇ ರೀತಿ ಇರುತ್ತದೆ ಎನ್ನುವುದರ ಒಳಗೆಯೇ ಗಂಡಸರ ಸ್ವಭಾವಗಳು ಹೆಂಗಸರ ಸ್ವಭಾವಗಳಿಗಿಂತ ಭಿನ್ನ ರೀತಿಯದ್ದಾಗಿರುತ್ತದೆ.

Join Our Whatsapp Group

ಆದರ ಒಳಗೆಯೇ ಅಮೆರಿಕದ ಗಂಡು ಮತ್ತು ಹೆಣ್ಣಿನ ಸ್ವಭಾವವೂ ಭಾರತೀಯ ಗಂಡು ಮತ್ತು ಹೆಣ್ಣಿನ ಸ್ವಭಾವಗಳೂ ಬೇರೆ ಬೇರೆಯಾಗಿರುತ್ತದೆ ಎನ್ನುವುದು ಸೇರಿಕೊಳ್ಳುತ್ತದೆ. ಹೀಗೆ ಇದು ಬೆಳೆಯುತ್ತಾ.ಬೆಳೆಯುತ್ತಾ ಸಾಗಿ ಸಂಕುಚಿತಗೊಂಡು ಒಂದು ಕುಟುಂಬದವರಲ್ಲಿ ಸಾಮಾನ್ಯ ಸ್ವಭಾವಗಳಿರುತ್ತವೆ ಎಂಬ ಅಂಶದ ಬಗೆಯೇ ಒಬ್ಬ ವ್ಯಕ್ತಿಯ ಸ್ವಭಾವ ಬೇರೆಯಾಗಿರುತ್ತದೆ ಎಂಬಲ್ಲಿಗೆ ಒಂದು ಬಂದು ನಿಲ್ಲುತ್ತದೆ. ಸ್ವಭಾವದ ವಿಕಾಸದಲ್ಲಿ ಇರುವ ತತ್ವವೇನೆಂದರೆ ಒಬ್ಬ ವ್ಯಕ್ತಿಯು ಜಗತ್ತಿನ ಎಲ್ಲ ಜನರ ಸ್ವಾಭಾವಿಕ್ಕಿಂತ ಬೇರೆಯಾದಾದ ಸ್ವಭಾವವನ್ನು ಹೊಂದಿರುತ್ತಾನೆ ಎನ್ನುವುದು ಒಬ್ಬ ವ್ಯಕ್ತಿಯು ಜಗತ್ತಿನ ಎಲ್ಲ ಜನರ  ಸ್ವಭಾವವನ್ನು  ಹೊಂದಿರುತ್ತಾನೆ ಎನ್ನುವುದು ಎರಡೂ ಒಟ್ಟೊಟ್ಟಿಗೆ ಇರುತ್ತದೆ.ಒಬ್ಬ ವ್ಯಕ್ತಿಯು ಜಗತ್ತಿನ ಎಲ್ಲ ಜನರ ಸ್ವಭಾವಕ್ಕಿಂತ ಬೇರೆಯದೇ ಸ್ವಭಾವವನ್ನು ಹೊಂದಿರುತ್ತಾನೆ ಎಂಬ ಅಂಶವು ವ್ಯಕ್ತಿಯ ಸ್ವತಂತ್ರ ಅಸ್ತಿತ್ವವನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿಯು ಜಗತ್ತಿನ ಎಲ್ಲ ಜನರ ಸ್ವಭಾವವನ್ನು ಹೊಂದಿರುತ್ತಾರೆ ಎನ್ನುವುದು ಮಾನವನ ಸಮಾನತೆಯನ್ನು ಸೂಚಿಸುತ್ತದೆ.

     ಸ್ವಭಾವದ ಈ ಸ್ವರೂಪಕ್ಕೆ ಕಾರಣವೇನು? ಸ್ವಭಾವಗಳು ಮೂರು ರೀತಿಯಿಂದ ಪ್ರಭಾವಿತಗೊಳ್ಳುತ್ತವೆ..ಮೊದಲನೆಯದು ಜೈವಿಕ ಅಂಶಗಳು,ಆಹಾರ,ನಿದ್ರೆಯಂತೆ ಸಂಗತಿಗಳು. ಇವು ಜೈವಿಕಾಂಶಗಳಾಗಿದ್ದು, ಎಲ್ಲ ಮಾನವರಿಗೆ ಮಾತ್ರವಲ್ಲ ಎಲ್ಲ ಜೀವಿಗಳಿಗೂ ಸಮಾನವಾದ ಅನುಭವದ ಸಂಗತಿಗಳಾಗಿವೆ. ಎರಡನೆಯ ಮಾನವರಿಗೆ ಮಾತ್ರ ಸಮಾನವಾಗಿರುವ ಅಂಶಗಳು. ಉದಾಹರಣೆಗೆ ಸ್ವಾಭಾವಿಕ ನ್ಯಾಯ ಎಂಬ ಅಂಶವು ಎಲ್ಲ ರಾಷ್ಟ್ರಗಳಲ್ಲಿಯೂ ;ಎಲ್ಲ ಕಾಲದಲ್ಲಿಯೂ ಅಸ್ತಿತ್ವದಲ್ಲಿ ಸಂಗತಿಯಾಗಿ ಎಲ್ಲ ಮನುಷ್ಯರಿಗೂ ಸಮಾನವಾದ ಸಂಗತಿಯಾಗಿದೆ.ಮೂರನೆಯದು ವ್ಯಕ್ತಿಗೆ ಆಗುವ ವೈಯಕ್ತಿಕ ಅನುಭವಗಳು.ಇದು ಜೈವಿಕ ಮತ್ತು ಸಮಾನ ಅಂಶಗಳೆರಡನ್ನು ಒಳಗೊಂಡಂತೆ ಒಬ್ಬ ವ್ಯಕ್ತಿಗೆ ಮಾತ್ರ ಪ್ರತ್ಯೇಕವಾದ ಅನುಭವವನ್ನು ಉಂಟು ಮಾಡುವ ಸಂಗತಿಯೂ ಆಗಿದೆ.ನಮ್ಮ ವ್ಯಕ್ತಿತ್ವವು ಸಮೃದ್ಧವಾಗಿ ಬೆಳೆಯುವುದು ಈ ಮೂರನೆಯ ಅಂಶದಲ್ಲಿ. ವ್ಯಕ್ತಿತ್ವ ವಿಕಾಸಕ್ಕೆ ಅನುಕೂಲಕರವಾದ ಅನುಭವಗಳೂ ಆಗಬಹುದು ಪ್ರತಿಕೂಲವಾದ ಅನುಭವಗಳೂ ಆಗಬಹುದು. ಪ್ರತಿಕೂಲಕರ ಅನುಭವವೇ ಆದಾಗ ಯಾವ ಸಮಸ್ಯೆಯೂ ಇಲ್ಲ. ಪ್ರತಿಕೂಲ ಅನುಭವಗಳಾದಾಗ ನಮ್ಮ ಯೋಚನೆಯ ಸಾಮರ್ಥ್ಯವು ಅದನ್ನು ಯಾವ ರೀತಿ ಅನುಕೂಲಕರವಾಗಿ ಬಳಸಿಕೊಳ್ಳಲು ಶಕ್ತವಾಗಿದೆ ಎಂಬುದರ ಆಧಾರದಲ್ಲಿ ವ್ಯಕ್ತಿತ್ವದ ವಿಕಾಸ ನಿರ್ಧಾರವಾಗುತ್ತದೆ.