ಮೈಸೂರು : ಪ್ರೀತಿಸುವಂತೆ ಅಪ್ರಾಪ್ತೆಗೆ ಪಾಗಲ್ ಪ್ರೇಮಿಯೊಬ್ಬ ಕಿರುಕುಳ ಕೊಟ್ಟ ಕಾರಣ ಮನನೊಂದು ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ನೀಲಕಂಠ ನಗರದಲ್ಲಿ ನಡೆದಿದೆ.
ದಿವ್ಯ (17) ನೇಣಿಗೆ ಶರಣಾದ ಅಪ್ರಾಪ್ತೆ. ದೇಬೂರು ಗ್ರಾಮದ ಆದಿತ್ಯ ಎಂಬಾತ ದಿವ್ಯಳಿಗೆ ಪ್ರೀತಿಸುವಂತೆ ಕಿರುಕುಳ ನೀಡಿದ್ದ, ಎಂಬ ಆರೋಪವಿದೆ. ನಂಜನಗೂಡಿನ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ, ದಿವ್ಯಳನ್ನು ಪ್ರೀತಿಸುವಂತೆ ಆದಿತ್ಯ ದುಂಬಾಲು ಬಿದ್ದಿದ್ದ. ಈ ಹಿನ್ನೆಲೆ ದಿವ್ಯ ಆದಿತ್ಯ ನೀಡುತ್ತಿದ್ದ, ಕಿರುಕುಳದ ಬಗ್ಗೆ ಪೋಷಕರಿಗೆ ತಿಳಿಸಿದ್ದಳು.
ಈ ಬಗ್ಗೆ ದಿವ್ಯಾಳ ತಂದೆ ಆದಿತ್ಯಗೆ ಕಿವಿಮಾತು ಹೇಳಿದ್ದರು. ಹೀಗಿದ್ದರೂ ಆದಿತ್ಯ ವರ್ತನೆ ಬದಲಿಸಿಕೊಂಡಿರಲಿಲ್ಲ. ಹೀಗಾಗಿ ಮನನೊಂದು ದಿವ್ಯ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಪ್ರಕರಣ ಸಂಬಂಧ ಆದಿತ್ಯನ ವಿರುದ್ಧ ದಿವ್ಯ ತಂದೆ ಗುರುಮೂರ್ತಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.















