ಮನೆ ಅಪರಾಧ ಅತ್ತೆಯ ಅನೈತಿಕ ಸಂಬಂಧ ಬಯಲು ಮಾಡಿದ ಸೊಸೆ ಮೇಲೆ ಮಾರಣಾಂತಿಕ ಹಲ್ಲೆ

ಅತ್ತೆಯ ಅನೈತಿಕ ಸಂಬಂಧ ಬಯಲು ಮಾಡಿದ ಸೊಸೆ ಮೇಲೆ ಮಾರಣಾಂತಿಕ ಹಲ್ಲೆ

0

ಕೊಚ್ಚಿ: ಅತ್ತೆಯ ಅನೈತಿಕ ಸಂಬಂಧವನ್ನು ಬಯಲು ಮಾಡಿದ ಸೊಸೆ ಮೇಲೆ ಅತ್ತೆಯ ಪ್ರಿಯಕರ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಕೇರಳದ ತ್ರಿಸ್ಸೂರ ಜಿಲ್ಲೆಯ ಕೊರಟ್ಟಿಯಲ್ಲಿ ನಡೆದಿದೆ.
ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ಸೊಸೆ ಪೆರಂಬೂರ್​ ಮೂಲದ ಎಂ.ಎಸ್​.ವೈಷ್ಣವಿ. ಅಂತಿಮ ವರ್ಷ ಸಿವಿಲ್​ ಇಂಜಿನಿಯರ್​ ಆಗಿರುವ ಈಕೆ 6 ತಿಂಗಳಗಳ ಹಿಂದೆಯಷ್ಟೇ ಪಲಪಲ್ಲಿ ಮೊಝಿಕುಲಂ ನಿವಾಸಿ ಮುಕೇಶ್​ ಎಂಬುವರನ್ನು ಮದುವೆಯಾಗಿದ್ದರು. ಮದುವೆಯಾಗಿ ಮನೆಗೆ ಬಂದ ಕೆಲವೇ ದಿನಗಳಲ್ಲಿ ಅತ್ತೆಯ ಅಕ್ರಮ ಸಂಬಂಧದ ಬಗ್ಗೆ ಸೊಸೆ ವೈಷ್ಣವಿಗೆ ಗೊತ್ತಾಗಿಬಿಟ್ಟಿದೆ. ಇದನ್ನು ಗಂಡನ ಎದುರು, ಸಂಬಂಧಿಕರು, ಅಕ್ಕಪಕ್ಕದ ಮನೆಯವರ ಎದುರು ಸೊಸೆ ವೈಷ್ಣವಿ ಹೇಳಿಬಿಟ್ಟಿದ್ದಾಳೆ. ಇದರಿಂದ ರೊಚ್ಚಿಗೆದ್ದ ಅತ್ತೆಯ ಪ್ರಿಯಕರ ವೈಷ್ಣವಿ ಮೇಲೆ ದಾಳಿ ಮಾಡಿದ್ದಾನೆ. ಭಯಾನಕವಾಗಿ ಗಾಯಗೊಂಡಿರುವ ವೈಷ್ಣವಿಯಲ್ಲಿ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.
ತನ್ನೊಂದಿಗಾದ ಅನ್ಯಾಯದ ಬಗ್ಗೆ ವೈಷ್ಣವಿ ಇನ್​​ ಸ್ಟಾಗ್ರಾಂನಲ್ಲಿ ವಿವರವಾಗಿ ಬರೆದುಕೊಂಡಿದ್ದಾಳೆ. ಮಹಿಳಾ ದಿನಾಚರಣೆ ಆಚರಿಸುತ್ತಿದ್ದೇವೆ. ಆದರೆ ಇಂದಿಗೂ ಇಲ್ಲಿ ಮಹಿಳೆಯರಿಗೆ ಕಾನೂನಿನ ರಕ್ಷಣೆ ಇಲ್ಲ ಎಂಬುದಕ್ಕೆ ನಾನೇ ಸಾಕ್ಷಿ. ನನ್ನ ಗಂಡನ ತಾಯಿಯ ಅನೈತಿಕತೆಯನ್ನು ಬಯಲು ಮಾಡಿದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದೆ. ಮುಖದ 3-4 ಮೂಳೆಗಳು ಮುರಿದುಹೋಗಿವೆ.. ಉಸಿರಾಡಲು, ತಿನ್ನಲು ಸಹ ಸಾಧ್ಯವಾಗುತ್ತಿಲ್ಲ.  ಇಷ್ಟೆಲ್ಲಾ ಮಾಡಿದ ವ್ಯಕ್ತಿ ಆರಾಮಾಗಿ ಓಡಾಕೊಂಡಿದ್ದಾನೆ. ಏಕೆಂದರೆ ಅವರು ಬಿಜೆಪಿಯ ಪಕ್ಷದೊಂದಿಗೆ ಗುರಿತಿಸಿಕೊಂಡು, ಪ್ರಕರಣದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ವೈಷ್ಣವಿ ಆರೋಪಿಸಿದ್ದಾರೆ.
ಮದುವೆಯಾದ 6 ತಿಂಗಳ ನಂತರ 2ನೇ ಬಾರಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಒಂದು ದಿನವೂ ಮನೆಯಲ್ಲಿ ನೆಮ್ಮದಿಯಿಂದ ಬಾಳಲು ಸಾಧ್ಯವಾಗಿಲ್ಲ. ಊಟ ಕೊಡದೆ ಕೋಲಿನಿಂದ ನನ್ನನ್ನು ಥಳಿಸಿದ್ದಾರೆ. ನನ್ನ ಗಂಡನೂ ನನಗೆ ಹಿಂಸೆ ನೀಡಿದ್ದಾನೆ. ದಯವಿಟ್ಟು ಮಾಧ್ಯಮದವಾರದರೂ ನನ್ನ ಸಹಾಯಕ್ಕೆ ಧಾವಿಸಿ ನ್ಯಾಯ ಕೊಡಿಸಬೇಕು ಎಂದು ವೈಷ್ಣವಿ ಇನ್​​ಸ್ಟಾ ಪೋಸ್ಟ್​ನಲ್ಲಿ ಬೇಡಿಕೊಂಡಿದ್ದಾರೆ