ಬೆಂಗಳೂರು: ಬೆಂಗಳೂರಿನ ಶಿವಾಜಿನಗರದ ಆಜಾಂ ಮಸೀದಿಗೆ ಬಾಂಬ್ ಇಟ್ಟಿದ್ದಾರೆಂದು ರಾತ್ರಿ 11ಕ್ಕೆ ಅಪರಿಚಿತನೊಬ್ಬ ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ತಿಳಿಸಿದ್ದು, ಅದು ಹುಸಿ ಬಾಂಬ್ ಕರೆಯೆಂದು ಗೊತ್ತಾಗಿದೆ.
ಉಗ್ರರು ಬಾಂಬ್ ಇಟ್ಟಿದ್ದಾರೆಂದು ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು ಮಾಹಿತಿ ತಿಳಿದು ಸ್ಥಳಕ್ಕೆ ಶಿವಾಜಿನಗರದ ಪೊಲೀಸರು ದೌಡಾಯಿಸಿದ್ದಾರೆ. ಹಿರಿಯ ಅಧಿಕಾರಿಗಳ ಸಹಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಸೀದಿ ಪರಿಶೀಲನೆ ಬಳಿಕ ಹುಸಿ ಬಾಂಬ್ ಕರೆ ಎಂದು ಎಂದು ತಿಳಿದು ನಿಟ್ಟಿಸಿರು ಬಿಟ್ಟಿದ್ದಾರೆ.
ಕರೆ ಮಾಡಿದ ವ್ಯಕ್ತಿಗಾಗಿ ಶಿವಾಜಿನಗರದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.