ಮನೆ ಅಂತಾರಾಷ್ಟ್ರೀಯ ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್‌ ಬಂಧನ

ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್‌ ಬಂಧನ

0

ಲಾಹೋರ್:‌ ಮನೆಯಲ್ಲಿ ಅಕ್ರಮವಾಗಿ ಸಿಂಹದ ಮರಿಯನ್ನು ಸಾಕಿದ್ದ ಆರೋಪದಡಿ ಪಾಕಿಸ್ತಾನದ ಯೂಟ್ಯೂಬರ್‌ ರಜಾಬ್‌ ಬಟ್‌ ಎಂಬಾತನನ್ನು ಇತ್ತೀಚೆಗೆ ಲಾಹೋರ್‌ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.

Join Our Whatsapp Group

 ವಿವಾಹದ ಉಡುಗೊರೆಯಾಗಿ ರಜಾಬ್‌ ಈ ಸಿಂಹದ ಮರಿಯನ್ನು ಸ್ವೀಕರಿಸಿರುವುದಾಗಿ ವರದಿ ವಿವರಿಸಿದೆ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್‌ ನಲ್ಲಿ ರಜಾಬ್‌ ಹಲವಾರು ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಬಹಿರಂಗವಾಗಿತ್ತು.

ಮಾಧ್ಯಮದ ವರದಿ ಪ್ರಕಾರ, ಬಂಧಿತ ರಜಾಬ್‌ ನನ್ನು ವೈಯಕ್ತಿಕ ಬಾಂಡ್‌ ಮೇಲೆ ಬಿಡುಗಡೆಗೊಳಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರಜಾಬ್‌ ಪೋಸ್ಟ್‌ ವೈರಲ್‌ ಆದ ಬೆನ್ನಲ್ಲೇ ಪಂಜಾಬ್‌ ವನ್ಯಜೀವಿ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ನಿವಾಸದ ಮೇಲೆ ದಾಳಿ ನಡೆಸಿ ಬಂಧಿಸಿದ್ದರು.

ರಜಾಬ್‌ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ, .223 ಕ್ಯಾಲಿಬರ್‌ ರೈಫಲ್‌ ಹಾಗೂ ಸ್ಫೋಟಕಗಳು ಪತ್ತೆಯಾಗಿದ್ದವು. ಸಿಂಹದ ಮರಿ ಕೂಡಾ ಇದ್ದಿದ್ದು, ಇದು ಅಕ್ರಮವಾಗಿದೆ ಎಂದು ವರದಿ ತಿಳಿಸಿದೆ.

ಲಾಹೋರ್‌ ನಲ್ಲಿ ನಡೆದ ಅದ್ದೂರಿ ವಿವಾಹ ಕಾರ್ಯಕ್ರಮದಲ್ಲಿ ಆತ್ಮೀಯ ಗೆಳೆಯರು, ಕುಟುಂಬ ಸದಸ್ಯರು ಹಾಜರಾಗಿದ್ದು, ಈ ಸಂದರ್ಭದಲ್ಲಿ ಅತಿಥಿಗಳು ದೊಡ್ಡ ಪ್ರಮಾಣದಲ್ಲಿ ಹಣವನ್ನು ದಂಪತಿ ಮೇಲೆ ಎಸೆದು ಸಂಭ್ರಮಿಸುತ್ತಿದ್ದ ವಿಡಿಯೋಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.