ಹುಣಸೂರು(Hunsur): ಒತ್ತುವರಿ ಆಗಿದ್ದ ಸರ್ಕಾರಿ ಜಮೀನು ತೆರುವಿಗೆ ಹೋದ ತಹಶೀಲ್ದಾರ್ ವಿರುದ್ದ ರೈತ ತಿರುಗಿಬಿದ್ದಿದ್ದು, ಜೆಸಿಬಿ ಯಂತ್ರದ ಮುಂದೆ ಕುಳಿತು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.
ರೈತನ ಪಟ್ಟಿಗೆ ಮಣಿದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ಬಂದಿದ್ದಾರೆ.
ತಾಲ್ಲೂಕಿನ ರತ್ನಪುರಿ ಗ್ರಾಮದ ಸರ್ವೆ ನಂ 1369ರ 1.33 ಗುಂಟೆ ಜಮೀನು ಸರ್ಕಾರಿ ಜಮೀನಾಗಿದೆ. ಸದರಿ ಜಮೀನನ್ನ ದೇಶಕ್ಕೆ ಸೇವೆ ಸಲ್ಲಿಸಿದ ಯೋಧರಿಗೆ ನೀಡುವ ಉದ್ದೇಶದಿಂದ ಮೀಸಲಿಡಲು ಮುಂದಾದ ಅಧಿಕಾರಿಗಳಿಗೆ ಒತ್ತುವರಿ ಬೆಳಕಿಗೆ ಬಂದಿದೆ.
ಒತ್ತುವರಿಯನ್ನು ತೆರವು ಮಾಡಿಸಲು ಮಾಡಿಸಲು ತಹಸೀಲ್ದಾರ್ ಅಶೋಕ್ , ಸರ್ವೆಯರ್ ನಾಗೇಶ್, ರವೀಶ್, ವಿ.ಎ.ಗುರುಪ್ರಸಾದ್ ಆರ್.ಐ.ನಂದೀಶ್ ಅವರು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ ಸಮೇತ ತೆರಳಿದಾಗ ರಾಮದಾಸಯ್ಯ ಎಂಬ ವ್ಯಕ್ತಿ ಅಡ್ಡಿಪಡಿಸಿದ್ದಾನೆ.
ಜೆಸಿಬಿ ಯಂತ್ರದ ಸಮೇತ ಹಾಜರಾದ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾನೆ. ನೋಟೀಸ್ ನೀಡದೆ ತೆರವು ಮಾಡಿಸುತ್ತಿರುವುದಾಗಿ ವಾಗ್ವಾದ ನಡೆಸಿದ್ದಾನೆ. ಸದರಿ ಜಾಗವನ್ನ ಒತ್ತುವರಿ ಮಾಡಿಕೊಂಡಿರುವುದಾಗಿ ತಹಸೀಲ್ದಾರ್ ನೋಟೀಸ್ ಜಾರಿ ಮಾಡಿದ್ದಾರೆ. ಒಟ್ಟಾರೆ ರೈತನ ಮೊಂಡುತನಕ್ಕೆ ಬೆದರಿದ ಅಧಿಕಾರಿಗಳು ಬರಿಗೈಲಿ ಹಿಂದಿರುಗಿದ್ದಾರೆ.