ಬೆಂಗಳೂರು ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರ್ಯಾಪಿಡೋ ಬೈಕ್ ಸಮಾರನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಸ್.ಆರ್ ನಗರದ ನಿವಾಸಿ ಮತ್ತು ಹಾವೇರಿ ಜಿಲ್ಲೆಯ ಸವಣೂರು ವೆಂಕಟಪ್ಪ(23) ಬಂದಿತ. ಈತ ಗಾರೆ ಕೆಲಸ ಮಾಡಿಕೊಂಡಿದ್ದು, ತನ್ನ ಸ್ನೇಹಿತನ ರ್ಯಾಪಿಡೋ ಬೈಕ್ ತಂದು ಆರೋಪಿಯುತಿಗೆ ಕಿರುಕುಳ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿಗೆ ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಖಂಡಿಸಿ ನಗರದ ಟೌನ್ ಹಾಲ್ ಮುಂದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಯುವತಿ, ನಂತರ ಮನೆಗೆ ವಾಪಸ್ ಹೋಗಲು ರ್ಯಾಪಿಡೋ ಬೈಕ್ ಬುಕ್ ಮಾಡಿದ್ದರು. ಈ ಮಧ್ಯೆ ರ್ಯಾಪಿಡೋ ಬೈಕ್ ಸವಾರ ತಾನು ಹೋಗದೆ ತನ್ನ ಸ್ನೇಹಿತನಿಗೆ ಹೋಗಲು ಹೇಳಿದ್ದನು. ಆತ ರ್ಯಾಪಿಡೋ ಬೈಕ್ ಬದಲು ಬೇರೆ ಬೈಕ್ ತಂದಿದ್ದನು ಆದರೂ ಬೈಕ್ ಹತ್ತಿದ ಯುವತಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರ್ಗ ಮಧ್ಯ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.
ಲವ್ ಯು ಅಂತ ಮೆಸೇಜ್ ಕಳಿಸಿದ್ದ: ಡ್ರಾಪ್ ಮಾಡಿದ ನಂತರ ಬೈಕ್ ಸವಾರ ಯುವತಿಯ ಮೊಬೈಲ್ಗೆ ಕರೆ ಮಾಡಿದ್ದಾನೆ. ಕರೆ ಸ್ವೀಕರಿಸದಿದ್ದಾಗ ನಂತರ ವಾಟ್ಸಾಪ್ನಲ್ಲಿ ಮೆಸೇಜ್ ಕಳುಹಿಸಿದ್ದಾನೆ. ಯಾಕೆ ಕಾಲ್ ಮಾಡುತ್ತೀಯಾ? ಹಣ ಪಾವತಿಸಿದ್ದೇನೆ. ವಾಟ್ಸಾಪ್ ಪರಿಶೀಲಿಸುವಂತೆ ಯುವತಿ ಸೂಚಿಸಿದ್ದಾಳೆ. ಈ ವೇಳೆ ಲವ್ ಯು ಎಂದು ಸಂದೇಶ ಕಳುಹಿಸಿದ್ದಾನೆ. ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಅದನ್ನು ಗಮನಿಸಿದ ಪೊಲೀಸರು ಟ್ವಿಟ್ ಮಾಡಿದ ಯುವತಿಯನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿ ಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.