ಹುಣಸೂರು: ಆಸ್ಪತ್ರೆಗೆ ತೆರಳುತ್ತಿದ್ದ ತಂದೆ ಮಗಳಿಗೆ ಬೈಕ್ ಡಿಕ್ಕಿ 7 ವರ್ಷದ ಬಾಲಕಿ ಮೃತಪಟ್ಟು, ಬಾಲಕಿಯ ತಂದೆ ಹಾಗೂ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ನಗರದ ಬೈಪಾಸ್ ರಸ್ತೆಯಲ್ಲಿ ಭಾನುವಾರ (ಅ.13) ನಡೆದಿದೆ.
ಹುಣಸೂರು ತಾಲ್ಲೂಕಿನ ಎರಡನೇ ಪಕ್ಷಿರಾಜಪುರ ಗ್ರಾಮದ ಬಾಲಕಿ ಅರೋವಿ (7 ವರ್ಷ) ಮೃತ ಬಾಲಕಿ.
ಅರೋವಿ ಜ್ವರದೊಂಡ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರ ತಂದೆ ಪಿಲಿಪ್ ಜೊತೆಯಲ್ಲಿ ಕಾವೇರಿ ಆಸ್ಪತ್ರೆಗೆ ನಡೆದು ಹೋಗುವ ವೇಲೆ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ಮೈಸೂರು ಕಡೆಯಿಂದ ಬಂದ ಬೈಕ್ ತಂದೆ, ಮಗಳಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರೆ. ತಂದೆ ಹಾಗೂ ಬೈಕ್ ಸವಾರನಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳಕ್ಕೆ ಹುಣಸೂರು ಪಟ್ಟಣ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಪಾಸ್ ರಸ್ತೆಯಲ್ಲಿ ಇರುವ ಕಾವೇರಿ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಂಬಾಗ ಹೆಚ್ಚಿನ ಜನರು ಓಡಾಡುತ್ತಿದ್ದು. ರಸ್ತೆಯ ಸುರಕ್ಷತೆಗಾಗಿ ಅಪಘಾತ ತಡೆಯಲು ಕಾವೇರಿ ಆಸ್ಪತ್ರೆಯ ಎದುರಿನಲ್ಲಿ ನೂರಾರು ವಾಹನಗಳು ವೇಗವಾಗಿ ಓಡಾಡುತ್ತಿರುತ್ತವೆ. ಆಸ್ಪತ್ರೆಯವರು ಸಾರ್ವಜನಿಕರ ಸುರಕ್ಷತೆಗಾಗಿ ಸೆಕ್ಯುರಿಟಿ ನೇಮಿಸಿ ಅಪಘಾತವನ್ನು ತಡೆಯಲು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದು. ತಾಲೂಕು ಆಡಳಿತ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.