ಮನೆ ರಾಜ್ಯ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಆತ್ಮೀಯ ಬೀಳ್ಕೊಡುಗೆ

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಆತ್ಮೀಯ ಬೀಳ್ಕೊಡುಗೆ

0

ಹೊಸದಿಲ್ಲಿ(New Delhi): ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆ.೧೦ಕ್ಕೆ ಪೂರ್ಣಗೊಳ್ಳುತ್ತಿದ್ದು, ರಾಜ್ಯಸಭೆಯಲ್ಲಿ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.

ಸದನದ ಒಳಗೆ ಹಾಗೂ ಹೊರಗೆ ಚಮತ್ಕಾರಭರಿತವಾಗಿ, ಸ್ವಾರಸ್ಯಕರ ಒನ್ ಲೈನರ್‌ಗಳನ್ನು ಭಾಷಣದಲ್ಲಿ ಮೂಡಿಸುತ್ತಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಭಿನಂದಿಸಿದರು.

ಪ್ರಧಾನಿ ನರೇಂದ್ರ ಮೋದಿ ವೆಂಕಯ್ಯ ನಾಯ್ಡು ಅವರ ಚಮತ್ಕಾರಭರಿತ, ಸ್ವಾರಸ್ಯಕರ ಒನ್ ಲೈನರ್‌ಗಳನ್ನು ನೆನೆದು, ಅವರ ಅವಧಿಯಲ್ಲಿ ಸದನದ ಉತ್ಪಾದಕತೆ ಶೇ.೭೦ಕ್ಕೆ ಏರಿಕೆಯಾಗಿರುವುದನ್ನು ಸ್ಮರಿಸಿದರು.

ರಾಜ್ಯಸಭೆಯಲ್ಲಿ ವಂದನಾರ್ಪಣೆ ಮಾಡಿದ ಪ್ರಧಾನಿ ಮೋದಿ, ನಿರ್ಗಮಿಸುತ್ತಿರುವ ಉಪರಾಷ್ಟ್ರಪತಿಗಳು ಸಂವಾದವನ್ನು ಉತ್ತೇಜಿಸಿದರು, ಅವರು ತಮ್ಮ ಉತ್ತರಾಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತಹ ಗುಣಮಟ್ಟ ಮತ್ತು ಪರಂಪರೆಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೆಳಿದರು.

ವೆಂಕಯ್ಯ ನಾಯ್ಡು ಅವರೊಂದಿಗೆ ದೀರ್ಘ ಅವಧಿಯಿಂದಲೂ ಕೆಲಸ ಮಾಡಿದ್ದೇನೆ. ಅವರು ವಿವಿಧ ಹುದ್ದೆಗಳನ್ನು ಸಮರ್ಪಣೆಯಿಂದ ನಿರ್ವಹಿಸಿದ್ದನ್ನು ಕಂಡಿದ್ದೇನೆ ಎಂದು ಪ್ರಧಾನಿ ಮೋದಿ ತಮ್ಮ ಹಾಗೂ ವೆಂಕಯ್ಯ ನಾಯ್ಡು ಅವರ ನಡುವಿನ ಒಡನಾಟವನ್ನು ಸ್ಮರಿಸಿದರು.

ಹಿಂದಿನ ಲೇಖನವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುವಂತೆ ಆರ್.ಧ್ರುವನಾರಾಯಣ್ ಒತ್ತಾಯ
ಮುಂದಿನ ಲೇಖನದೇಶ ಆರ್ಥಿಕ, ಸಾಮಾಜಿಕವಾಗಿ ಬೆಳೆದಿರುವುದಕ್ಕೆ ಸಂವಿಧಾನ ಮತ್ತು ಕಾಂಗ್ರೆಸ್ ಕಾರಣ: ಸಿದ್ದರಾಮಯ್ಯ