ಮನೆ ಜ್ಯೋತಿಷ್ಯ ಪ್ರೇತದಾಹದ ಮುಹೂರ್ತ

ಪ್ರೇತದಾಹದ ಮುಹೂರ್ತ

0

 ಕ್ಷಿಪ್ರಾಹಿಮೂಲೇಂದು ಹರೀಶವಾಯುಭೇ ಪ್ರೇತಕ್ರಿಯಾ ಸ್ಯಾಝ್ಜಷ ಕುಂಭಗೇ ವಿಧೌ |

 ಪ್ರೇತಸ್ಯ ದಾಹಂ ಯಮದಿಗ್ಗಮ ತ್ಯಜೇತ್ ಶಯ್ಯಾವಿತಾನಂ ಗೃಹಗೋಪನಾದಿ ಚ||

Join Our Whatsapp Group

   ಕ್ಷಿಪ್ರಸಂಜ್ಞಕ, ಆಶ್ಲೇಷ, ಮೂಲ, ಮೃಗಶಿರಾ, ಶ್ರವಣ, ಆರ್ದ್ರಾ,ಸ್ವಾತಿ, ಈ ನಕ್ಷತ್ರಗಳಲ್ಲಿ ಪ್ರೇತದ ಕ್ರಿಯೆ, ಶ್ರಾದ್ಧಾದಿಗಳನ್ನು ಮಾಡುವುದು. ಕುಂಭ ಹಾಗೂ ಮೀನದ  ಚಂದ್ರದಲ್ಲಿ ಪ್ರೇತದಾಹ,ದಕ್ಷಿಣ ದಿಕ್ಕಿನ ಯಾತ್ರೆ,ಶಯ್ಯಾ ಶಾಮಿಯಾನಾ,  ಮನೆಯ ಛತ್ತು ಹೊಂದಿಸುವುದು ಬಿಟ್ಟುಬಿಡಬೇಕು; ಏಕೆಂದರೆ, ಧನಿಷ್ಠಾದ ಎರಡು ಚರಣದಿಂದ ಹಿಡಿದು ರೇವತಿಯ ಅಂತಿಮ ಚರಣದವರೆಗೆ ಧನಿಷ್ಠಾದಿಗಳು ‘ಪಂಕಜ’ ಎನಿಸಿಕೊಳ್ಳುತ್ತವೆ.ಇವುಗಳಲ್ಲಿ ಮನೆಗಾಗಿ ಮರ ಮಟ್ಟನ್ನು ಕೂಡ ಸಂಗ್ರಹ ಮಾಡಬಾರದು.

 ಕಾಷ್ಟ ಸಂಗ್ರಹ ಮುಹೂರ್ತ:

 ಸೂರ್ಯರ್ಕ್ಷಾತ್ ರಸಭೈರಧಃಸ್ಥಲಗತೈಃ ಪಾಕೋ ರಸೈಃ ಸಂಯುತಃ

 ಶೀರ್ಷೇಯುಗ್ಮಮಿತೈಃ ಶವಸ್ಯ ದಹನಂ ಮಧ್ಯೇಯುಗೈಃ ಸರ್ಪಭಿಃ|

 ಪ್ರಾಗಾಶಾಧಿಷು ದೇವಭೈಃ ಸ್ವಸುಹೃದಾಂ ಮಧ್ಯೇಯುಗೈಃ ಸರ್ಪಭಿಃ

 ಕ್ಟಾಥಾದೇಃ ಕರಣಂ ಸುಖಂ ಚ ಗದಿತಂ ಕಾಷ್ಟದಿಸಂಸ್ಥಾಪನೇ ||

     ಸೂರ್ಯನ ನಕ್ಷತ್ರದಿಂದ ಕೆಳಗಿನ ಆರು ನಕ್ಷತ್ರಗಳಲ್ಲಿ ಕಟ್ಟಿಗೆಯನ್ನು ಸಂಗ್ರಹಿಸಿ ಇಡುವುದರಿಂದ ಪಾಕ ರಸಯುಸಕ್ತವಾಗುತ್ತದೆ ಇದರ ಮುಂದಿನ ಎರಡು ನಕ್ಷತ್ರಗಳಲ್ಲಿ ಕಟ್ಟಿಗೆ ಸಂಗ್ರಹಿಸಿಡುವುದರಿಂದ ಮರಣಿಸಿದವನನ್ನು ಸುಡುವ ಕಾರ್ಯಕ್ಕೆ ಬರುತ್ತದೆ; ಮಧ್ಯದ ನಾಲ್ಕು ನಕ್ಷತ್ರಗಳಲ್ಲಿ  ಸರ್ಪದ ಭಯವಾಗುತ್ತದೆ ಮತ್ತು ಪೂರ್ವದಿಕ್ಕಿನಲ್ಲಿ ನಾಲ್ಕು ನಕ್ಷತ್ರಗಳಲ್ಲಿ ಕ್ರಮವಾಗಿ ಮಿತ್ರನ, ರೋಗಭಯ, ಕಷಾಯ ನಿರ್ಮಾಣ ಮತ್ತು ಸುಖ ಪ್ರಾಪ್ತಿಯಾಗುತ್ತದೆ.