ಮನೆ ರಾಜ್ಯ ಮೈಸೂರು ವಿಶ್ವವಿದ್ಯಾನಿಲಯದ ‘ಚಿನ್ನ’ದ ವಿದ್ಯಾರ್ಥಿ ಈಗ ಅದೇ ವಿವಿಯ ಕುಲಸಚಿವೆ

ಮೈಸೂರು ವಿಶ್ವವಿದ್ಯಾನಿಲಯದ ‘ಚಿನ್ನ’ದ ವಿದ್ಯಾರ್ಥಿ ಈಗ ಅದೇ ವಿವಿಯ ಕುಲಸಚಿವೆ

0

ಮೈಸೂರು(Mysuru):  ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಲವು ಚಿನ್ನದ ಪದಕಗಳನ್ನು ಗಳಿಸಿದ್ದ ವಿದ್ಯಾರ್ಥಿನಿ ಈಗ ಅದೇ ವಿಶ್ವವಿದ್ಯಾಲಯದ ಕುಲಸಚಿವೆ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ.

1998ರಲ್ಲಿ ಬಿ.ಎ ಪದವಿ, 1999ರಲ್ಲಿ ಬಿಎಡ್, 2001ರಲ್ಲಿ ಸ್ನಾತಕೋತ್ತರ ಪದವಿಯ ಮೈಸೂರು ವಿವಿ ವಿದ್ಯಾರ್ಥಿಯಾಗಿ ನಾನಾ ವಿಭಾಗಗಳಲ್ಲಿ ಚಿನ್ನದ ಪದಕ ಹಾಗೂ ನಗದು ಬಹುಮಾನಕ್ಕೆ ಭಾಜನರಾಗಿದ್ದ ವಿ.ಆರ್.ಶೈಲಜಾ ಅವರು ಈಗ ತಾವು ಓದಿದ ಅದೇ ವಿಶ್ವವಿದ್ಯಾಲಯದ ಕುಲಸಚಿವೆಯಾಗಿ ನೇಮಕಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.

ಪದವಿ ವ್ಯಾಸಂಗದ ವೇಳೆ 9 ಚಿನ್ನದ ಪದಕ ಹಾಗೂ 7 ನಗದು ಪುರಸ್ಕಾರಕ್ಕೆ ಶೈಲಜಾ ಭಾಜನರಾಗಿದ್ದರು.

ಬಿ.ಎಡ್.ನಲ್ಲಿ ವಿವಿಗೆ ಪ್ರಥಮ ರ್ಯಾಂಕ್ ಪಡೆದಿದ್ದರು. ಸ್ನಾತಕೋತ್ತರ ಪದವಿಯಲ್ಲೂ ಪ್ರಥಮ ರ್ಯಾಂಕ್ ಪಡೆದಿದ್ದ ಶೈಲಜಾ ಅವರು 3 ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನ ಪಡೆದಿದ್ದರು.

2006ರಲ್ಲಿ‌ ಪ್ರೊಬೇಷನರಿ ಕೆಎಎಸ್ ಅಧಿಕಾರಿಯಾಗಿ ವೃತ್ತಿ‌ ಆರಂಭಿಸಿದ ಶೈಲಜಾ ಅವರು ಮೈಸೂರು ಮಹಾನಗರ ಪಾಲಿಕೆಯ ವಲಯ ಆಯುಕ್ತರಾಗಿಯೂ‌ ಕೆಲಸ ಮಾಡಿದ್ದಾರೆ. ರಾಮನಗರದಲ್ಲಿ ಡಿಯುಡಿಸಿ ವಿಭಾಗದ ಯೋಜನಾ ನಿರ್ದೇಶಕಿಯಾಗಿ, ಕಾವೇರಿ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಾಂಡವಪುರ ಉಪವಿಭಾಗದ ಹೆಚ್ಚುವರಿ ಆಯುಕ್ತರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ನಂತರ ಮಂಡ್ಯ ಜಿಲ್ಲೆಯ ಎಡಿಸಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಹಿಂದಿನ ಲೇಖನಅರಿಶಿನದಿಂದ ತೂಕ ಕಡಿಮೆ ಮಾಡಿಕೊಳ್ಳುವ ಸರಳ ವಿಧಾನಗಳು
ಮುಂದಿನ ಲೇಖನ‘ಕಾಲಾಯ ನಮಃ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಮತ್ತೆ ಆಗಮಿಸುತ್ತಿರುವ ಕೋಮಲ್