ಮನೆ ಸ್ಥಳೀಯ ಹಳೇ ಸಂತೇಪೇಟೆಯ ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಸ್ಥಾನದಲ್ಲಿ ಅದ್ದೂರಿ ರಥೋತ್ಸವ

ಹಳೇ ಸಂತೇಪೇಟೆಯ ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಸ್ಥಾನದಲ್ಲಿ ಅದ್ದೂರಿ ರಥೋತ್ಸವ

0

ಮೈಸೂರು : ೧೯೮೦ರಿಂದ ಪ್ರತಿವರ್ಷವೂ ನಡೆದುಕೊಂಡು ಬಂದಿರುವಂತೆ ಈ ವರ್ಷವೂ ಸಹ ಮೈಸೂರಿನ ಹಳೇ ಸಂತೇಪೇಟೆಯ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ ದೊಡ್ಡ ರಥೋತ್ಸವ ಅದ್ದೂರಿಯಾಗಿ ನೆರವೇರಿತು.

ರಥೋತ್ಸವದಲ್ಲಿ ನಂದಿಕಂಬ-ಶ್ರೀ ಗುರುಮಲ್ಲೇಶ್ವರ ನಂದಿಧ್ವಜ ಸಂಘ, ಚೌಕಿಮತ, ಕಂಸಾಳೆ ಮಹಾದೇವಯ್ಯ ಕಲಾಸಂಘ, ಕನಕಗಿರಿ, ಶ್ರೀ ಸಿದ್ದರಾಮೇಶ್ವರ ಪೂಜಾ ಕುಣಿತ ಚಾನನದ ಕಲಾಸಂಘ, ಕನಕಗಿರಿ, ಶ್ರೀ ಬಣ್ಣಾರಿ ತಮಟೆ ತಂಡ, ಕನಕಗಿರಿ, ಶ್ರೀ ನಂಜುಂಡೇಶ್ವರ ದೇವಸ್ಥಾನದ ವಾಚ್ಯತಂಡ, ವೀರಗಾಸೆ ತಂಡ, ಗೌರಿಶಂಕರನಗರ ಕಲಾತಂಡಗಳು ಭಾಗವಹಿಸಿದ್ದವು.

ರಥೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ದೇವಸ್ಥಾನದ ಆವರಣದಲ್ಲಿ ಮಹಾಮಂಗಳಾರತಿ ನಂತರ ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಹರೀಶ್‌ಗೌಡ, ಡಿ. ಧೃವಕುಮಾರ್, ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್, ಪ್ರಶಾಂತ್ ಗೌಡ,
ಹಣ್ಣು ಮತ್ತು ತರಕಾರಿ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು, ಎಲ್ಲಾ ವರ್ಗದ ಕಾರ್ಮಿಕರು, ಮಾಲೀಕರುಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.