ಮನೆ ಸ್ಥಳೀಯ ಮೈಸೂರು ಜಿಲ್ಲೆಯಲ್ಲಿ 55 ಸಾವಿರ ಜನರಿಂದ ಬೃಹತ್ ಮಾನವ ಸರಪಳಿ

ಮೈಸೂರು ಜಿಲ್ಲೆಯಲ್ಲಿ 55 ಸಾವಿರ ಜನರಿಂದ ಬೃಹತ್ ಮಾನವ ಸರಪಳಿ

0

ಮೈಸೂರು: ಸೆಪ್ಟೆಂಬರ್ 15 ರಂದು ಮಾನ್ಯ ಘನ ರಾಜ್ಯ ಸರ್ಕಾರವು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಅಂಗವಾಗಿ ಬೃಹತ್ ಮಾನವ ಸರಪಳಿಯನ್ನು ಏರ್ಪಡಿಸುತ್ತಿದೆ.

Join Our Whatsapp Group

ಪ್ರಜಾಪ್ರಭುತ್ವಕ್ಕಾಗಿ ಕರ್ನಾಟಕದಲ್ಲಿ ಮಾನವ ಸರಪಳಿ ಸಮಾನತೆ ಭ್ರಾತೃತ್ವ ಮತ್ತು ಸ್ವಾತಂತ್ರ್ಯ ಎಂಬ ಜಯವಾಗಲಿದೆ ಸುಮಾರು 25 ಲಕ್ಷ ಜನರನ್ನು ಉಪಯೋಗಿಸಿ ಕೊಂಡು ಸುಮಾರು 2500 ಕಿಲೋಮೀಟರ್ ಉದ್ದದ ಮಾನವ ಸರಪಳಿಯನ್ನು ರಚಿಸಲಾಗುತ್ತಿದೆ.

ಮೈಸೂರು ಜಿಲ್ಲೆಯಲ್ಲಿಯೂ ಈ ಮಾನವ ಸರಪಳಿ ರಚನೆಗೊಳ್ಳುತ್ತಿದ್ದು ಮೈಸೂರು ಜಿಲ್ಲೆಯ ಗಡಿ ಭಾಗದ ಮೈಸೂರು ತಾಲೂಕಿನ ಸಿದ್ದಲಿಂಗಪುರ ಗ್ರಾಮದಿಂದ ಪ್ರಾರಂಭವಾಗಿ ಟಿ.ನರಸಿಪುರ ತಾಲೂಕಿನ ಮೂಗೂರು ಗ್ರಾಮದ ಚಾಮರಾಜನಗರ ಜಿಲ್ಲೆಯ ಗಡಿಯನ್ನು ಕೊನೆಗೊಳ್ಳುತ್ತದೆ.

ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಈ ಬೃಹತ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಸುಮಾರು 55,000 ಜನರು ಭಾಗವಹಿಸುತ್ತಿದ್ದು ಮಾನವ ಸರಪಳಿ ರಚನೆಯಲ್ಲಿ ಜಿಲ್ಲೆಯ ಎಲ್ಲಾ ಎಲ್ಲ ಸಂಘಟನೆ ಪದಾಧಿಕಾರಿಗಳು ಜನಪ್ರತಿನಿಧಿಗಳು ಸಮುದಾಯದ ಮುಖಂಡರುಗಳು ಶಾಲೆ- ಕಾಲೇಜು ವಿದ್ಯಾರ್ಥಿಗಳು ಮಾನವ ಸರಪಳಿಯಲ್ಲಿ ಭಾಗವಹಿಸುತ್ತಿದ್ದು ಮಾನವ ಸರಪಳಿ  ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಪ್ರಜಾಪ್ರಭುತ್ವದ ಮೌಲ್ಯವನ್ನು ಕೋರಿದೆ.