ಮನೆ ಜ್ಯೋತಿಷ್ಯ ಏಡ್ಸ್ :( A. I. D. S  )

ಏಡ್ಸ್ :( A. I. D. S  )

0

ಏಡ್ಸ್. ಇದು ಪ್ರಾಣಾಂಕಿತವಾದ ವ್ಯಾಧಿಯಾಗಿ, ಇದಕ್ಕೆ ಯಾವುದೇ ವಿಧವಾದ ಲಸಿಕೆ ಅಥವಾ ನಿರ್ದಿಷ್ಟವಾದ ಚಿಕಿತ್ಸೆಯನ್ನು ಇದುವರೆಗೂ ಯಾರೂ ಕಂಡು ಹಿಡಿದಿಲ್ಲ. ಪ್ರಪಂಚದಾದ್ಯಂತ ಇದಕ್ಕಾಗಿ ಸಂಶೋಧಕರು ಅವಿರತವಾಗಿ ಕಾರ್ಯನಿರತರಾಗಿದ್ದಾರೆ. ಹೆಚ್.ಐ.ವಿಗೆ ಸರಿಯಾಗಿ ಚಿಕಿತ್ಸೆ  ಪಡೆಯದಿದ್ದರೆ ಏಡ್ಸ್‌ ಹಂತ ತಲಪುತ್ತದೆ.

Join Our Whatsapp Group

 ಹೇಗೆ ಬರುತ್ತದೆ?

          ಇದು ಹೆಚ್ ಐ.ವಿ ಎಂಬ ವೈರಸ್ ನಿಂದ ಹರಡುತ್ತದೆ. ಈ ವ್ಯಾಧಿಯು ಹರಡದಂತೆ ನಾವು ರಕ್ಷಣ ಪಡೆಯಬೇಕು. ಈ ವ್ಯಾಧಿಯು ನಮ್ಮಲ್ಲಿರುವ ವ್ಯಾಧಿ ರೋಗ ನಿರೋಧಕ ಶಕ್ತಿಯನ್ನೇ ನಾಶ ಮಾಡುತ್ತದೆ ಆಗ ನಮ್ಮ ದೇಹದೊಳಗೆ ಪ್ರವೇಶಿಸುವ ಯಾವುದೇ ಸೋಂಕು ಹರಡುವ ವೈರಾಣುಗಳ ಜೊತೆ ಹೋರಾಡಲು ಸಾಮರ್ಥ್ಯವಿರುವುದಿಲ್ಲ. ಆದ್ದರಿಂದ ಹೆಚ್ ಐ.ವಿ. ವೈರಸ್ ಗಳು ನೇರವಾಗಿ ನಮ್ಮನ್ನು ಕೊಳ್ಳುವುದಿಲ್ಲ. ಆದರೆ ಇದು ಇತರರ ರೋಗಗಳು ಯಾವುದೇ ಆತಂಕವಿಲ್ಲದೆ ನಮ್ಮ ದೇಹದೊಳಗೆ ದಾಳಿ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟು ಕೊಲ್ಲುತ್ತದೆ. ಏಕೆಂದರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಇದು ನಾಶ ಮಾಡಿರುತ್ತದೆ. ಈ ಸೋಂಕು ತಗಲಿದ ಅನೇಕ ವರ್ಷಗಳ ಕಾಲವೂ ಸಹ ಅವನು ಬದುಕಿರುವ ಸಾಧ್ಯತೆ ಇರುತ್ತದೆ. ನಮ್ಮ ದೇಹದಲ್ಲಿ ಸಿ.ಡಿ-4 ಎಂಬ ಜೀವಕೋಶಗಳಲ್ಲಿ ಇರುತ್ತವೆ. ಇವು ರೋಗ ನಿರೋಧಕ ಶಕ್ತಿ ನೀಡಿ, ವಿವಿಧ ಸೋಂಕುಗಳಿಂದ ನಮ್ಮನ್ನು ಸಂರಕ್ಷಿಸುತ್ತದೆ. ಈ ಹೆಚ್.ಐ.ವಿ. ವೈರಾಣುಗಳು ನಮ್ಮ ದೇಹ ಪ್ರವೇಶಿಸಿದರೆ ಅದು ಸಿ. ಡಿ-4 ಜೀವಕೋಶಗಳನ್ನು ನಾಶ ಮಾಡಿ, ಅಪಾಯದ ಅಂಚಿಗೆ ಕಳಿಸುತ್ತದೆ. ಈ ಸಿ.ಡಿ-4 ಕೌಂಟ್ ಮಾಡಿಸಲು ಏ.ಆರ್.ಟಿ. ಕೇಂದ್ರಗಳಿಗೆ ಕಳಿಸುತ್ತಾರೆ.

     ನಮ್ಮ ದೇಹವು ಹೆಚ್ಚು ದ್ರವರೂಪದಿಂದ ಆವೃತ್ತವಾಗಿದೆ. ಈ ಹೆಚ್.ಐ.ವಿ. ವೈರಾಣುಗಳು ಹೆಚ್ಚಾಗಿ ನಮ್ಮ ರಕ್ತ ವೀರ್ಯ ಯೋನಿ ದ್ರವ  ಋತುಸ್ರಾವ ಮತ್ತು ಸ್ತನದ ಹಾಲಿನಲ್ಲಲ್ಲದೆ ಬಾಯಿಯ ಜೊಲ್ಲು ರಸದಲ್ಲಿ  ಶೇಖರವಾಗಿರುತ್ತದೆ ಯಾವಾಗ ದೇಹದ ಈ ದ್ರವ್ಯವು ಒಬ್ಬ ಮನುಷ್ಯನಿಂದ ಇನ್ನೊಬ್ಬ ಮನುಷ್ಯನ ಅಂಗಕ್ಕೆ ಪ್ರವೇಶಿಸುತ್ತದೋ ಆಗ ಈ ವ್ಯಾಧಿಯೂ ಸಹ ಮತ್ತೊಬ್ಬನಿಗೆ ಹರಡುತ್ತದೆ.

 ಇದು ಮುಖ್ಯವಾಗಿ ಮೂರು ವಿಧದಲ್ಲಿ ಹರಡುತ್ತದೆ.

ಲೈಂಗಿಕವಾಗಿ – ಎಚ್.ಐ.ವಿ. ಸೋಂಕು ಇರುವವರ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದಾಗ ಆರೋಗ್ಯವಂತನಿಗೂ ಹರಡುತ್ತದೆ. ಆದ್ದರಿಂದ ಲೈಂಗಿಕ ಸಂಪರ್ಕ ಮಾಡುವಾಗ ನಿರೋದ್ ಬಳಸುವುದು ಉತ್ತಮ. ವೀರ್ಯ ಬ್ಯಾಂಕ್ ಗಳಿಂದ ಅಪೇಕ್ಷೆಯುಳ್ಳವರು ಪಡೆದಾಗ ಈ ವ್ಯಾಧಿ ಹರಡುತ್ತದೆ.

 ರಕ್ತದಲ್ಲಿ – ವೈದ್ಯಕೀಯ ಚಿಕಿತ್ಸೆಗಳಾದ ಚುಚ್ಚುಮದ್ದು ಅಥವಾ ಶಸ್ತ್ರಚಿಕಿತ್ಸೆಗಳಲ್ಲಿ ಹರಡುವ ಸಂಭವವೂ ಉಂಟು. ಅಲ್ಲದೆ ಅಕ್ಯೂಪಂಚರ್, ರಕ್ತ ಪರೀಕ್ಷೆಗಳ ಸಮಯ, ಕಿವಿಯನ್ನು ಶುಚಿಮಾಡು ವಾಗ, ರಕ್ತವನ್ನು ದಾನಿಗಳಿಂದ ಸ್ವೀಕರಿಸುವಾಗ, ದೇಹದ ಅಂಗಗಳನ್ನು ಇತರ ಹೆಚ್.ಐ.ವಿ. ವ್ಯಾಧಿಗ್ರಸ್ತ, ರಿಂದ ಸ್ವೀಕರಿಸುವಾಗ, ಗಾಯವನ್ನು ಶುಚಿ ಮಾಡುವಾಗ. ಈ ವೈರಸ್ ಗಳು ಇತರರ ದೇಹದೊಳಗೆ ರಕ್ತದ ಮುಖಾಂತರ ಸೇರುವ ಸಾಧ್ಯತೆ ಇರುತ್ತದೆ.

 ಗರ್ಭಿಣಿ ಸ್ತ್ರೀಯಿಂದ – ವ್ಯಾಧಿಗ್ರಸ್ತ ಗರ್ಭಿಣಿ ಸ್ತ್ರೀಯು ತನ್ನ ಗರ್ಭದಲ್ಲಿರುವ ಶಿಶುವಿಗೆ ಗರ್ಭಧಾರಣೆಯ ಕಾಲದಲ್ಲಿ ಪ್ರಸವ ಕಾಲ ಅಥವಾ ತನ್ನ ಹಾಲನ್ನು ಕುಡಿಸುವಾಗ ಹರಡುತ್ತಾರೆ.

 *ಹೇಗೆ ಏಡ್ಸ್ ರೋಗಿಗಳನ್ನು ಕಂಡು ಹಿಡಿಯಬಹುದು?

ಅವರನ್ನು ಕೆಲವು ಲಕ್ಷಣಗಳಿಂದ ತಿಳಿಯಬಹುದು.

ಅವರ ದೇಹದ ತೂಕ ಕಳೆದು ಕೊಂಡಾಗ…

ಆಗಾಗ ಬಿಟ್ಟು ಬಿಟ್ಟು ಜ್ವರ ಬರುತ್ತಿದ್ದರೆ…

ಗ್ರಂಥಿಗಳು ಊದಿಕೊಂಡರೆ…

ರಾತ್ರಿ ಬೆವರು ಮತ್ತು ಮೈನೋವು ಕಾಣಿಸಿ ಕೊಂಡರೆ…

ಬಿಳಿಮಚ್ಚೆಗಳು ಅಥವಾ ಬಾಯಿಯಲ್ಲಿ ಅಲ್ಸರ್ ಕಾಣಿಸಿಕೊಂಡರೆ..

ಕೆಂಪು ಮಚ್ಚೆ ಮತ್ತು ಚರ್ಮದ ಮೇಲೆ ಗುಳ್ಳೆ ಅಥವಾ ಬೊಕ್ಕೆಗಳು ಕಾಣಿಸಿಕೊಂಡರೆ..

1981ರಲ್ಲಿ ಅಮೆರಿಕಾದಲ್ಲಿ ಏಡ್ಸ್ ಮೊದಲಿಗೆ ಪತ್ತೆ ಹಚ್ಚಲಾಯಿತು. ಸಲ್ಲಿಂಗರತಿಯಲ್ಲಿ ಆಸಕ್ತರಾಗಿದ್ದ ಯುವಕರಲ್ಲಿ ಎರಡು ವಿಧದಲ್ಲಿ ಕಾಣಿಸಿಕೊಂಡಿತು. ಈ ಏಡ್ಸ್ ವೈರಸ್ ಹೆಸರಿನ ರೋಗಾಣು ವಿನಿಂದ ಹರಡುತ್ತದೆ. ಸಾಮಾನ್ಯವಾಗಿ ಈ ರೋಗ ಹರಡಲು 3 ಹಂತಗಳು.

 *ವ್ಯಾಧಿ ಹರಡುವ ಬಗ್ಗೆ ಕೆಲವು ತಪ್ಪು ಗ್ರಹಿಕೆಗಳು

 *ಈ ವ್ಯಾಧಿಯು ಕೇವಲ ನೋಡುವುದರಿಂದ ಹರಡುವುದಿಲ್ಲ.

      ಕೇವಲ ಒಂದು ಸಲ ಲೈಂಗಿಕ ಸಂಪರ್ಕ ಬೆಳಸುವುದರಿಂದ ಬರುವ ಸಂಭವವಿದೆ.

ವ್ಯಾಧಿಗ್ರಸ್ತರನ್ನು ಮುಟ್ಟಿದಾಗ ಈ ವ್ಯಾಧಿ ಹರಡದು. ಅವರ ಜೊತೆ ಮಾತನಾಡಬಹುದು, ಕೆಲಸ ಮಾಡಬಹುದು ಮತ್ತು ಊಟ ಮಾಡಬಹುದು.

ಏಡ್ಸ್ ವೈರಸ್ ಗಳು ದೇಹದಿಂದ ಹೊರಗೆ ಬಂದು 10 ನಿಮಿಷದ ಮೇಲ್ಪಟ್ಟ ಬದುಕಲಾರದು. ಆದ್ದರಿಂದ ಇತರ ವ್ಯಾಧಿಗಳಂತೆ ಅವರ ಪರಿಸರದಿಂದ ಬೇಗ ಹರಡುವುದಿಲ್ಲ.

ಸೊಳ್ಳೆ, ಇತರ ಕ್ರಿಮಿಗಳ ಕಡಿತದಿಂದ ವ್ಯಾಧಿ ಹರಡಲಾರದು.