ಮನೆ ರಾಜ್ಯ ಖಾಸಗಿ ವಸತಿ ಗೃಹದಲ್ಲಿ ಆತ್ಮಹತ್ಯೆಗೆ ಶರಣಾದ ಕಿರಿಯ ಇಂಜಿನಿಯರ್

ಖಾಸಗಿ ವಸತಿ ಗೃಹದಲ್ಲಿ ಆತ್ಮಹತ್ಯೆಗೆ ಶರಣಾದ ಕಿರಿಯ ಇಂಜಿನಿಯರ್

0

ಪಾವಗಡ: ಪಟ್ಟಣದ ಖಾಸಗಿ ವಸತಿ ನಿಲಯದ ಕೊಠಡಿಯಲ್ಲಿ ಬುಧವಾರ ಕಿರಿಯ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Join Our Whatsapp Group

ವೈ ಎನ್ ಹೊಸಕೋಟೆಯ ಎಸ್ ಮಂಜುನಾಥ(22) ಮೃತರು.

ಮಂಜುನಾಥ್ ಬೆಳ್ಳಂದೂರಿನ ಬೆಸ್ಕಾಂ ಪೂರ್ವ ವಿಭಾಗದಲ್ಲಿ ಸಹಾಯಕ ಕಿರಿಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಬುಧವಾರ ರಾತ್ರಿ ಪಟ್ಟಣದ ಖಾಸಗಿ ವಸತಿಗೃಹದಲ್ಲಿ ಕೊಠಡಿಯನ್ನು ಪಡೆದಿದ್ದರು. ಗುರುವಾರ ಬೆಳಿಗ್ಗೆ 8 ಗಂಟೆಯಾದರೂ ಕೊಠಡಿಯಿಂದ ಹೊರಬಾರದಿರುವುದರಿಂದ ಅನುಮಾನಗೊಂಡ ವಸತಿ ಗೃಹದ ಸಿಬ್ಬಂದಿ ಕಿಟಕಿಯಿಂದ ನೋಡಿದಾಗ ಫ್ಯಾನ್ ಗೆ ನೇಣು ಹಾಕಿಕೊಂಡಿರುವುದು ಕಂಡಿದೆ.

ಕೂಡಲೆ ಪಟ್ಟಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾವಗಡ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.