ಕೊಳ್ಳೇಗಾಲ : ಕೆಂಪನಪಾಳ್ಯ ಗ್ರಾಮದ ಮದು ಮಲೈ ಗುಡ್ಡದ ಹತ್ತಿರ ಕುರಿಯ ಮೇಲೆ ದಾಳಿ ಮಾಡಿ ರೈತರ ನಿದ್ದೆಗೆಡಿಸಿದ್ದ ಚಿರತೆಯೂ ಅರಣ್ಯ ಇಲಾಖೆ ಸಿಬ್ಬಂದಿಗಳು ಇರಿಸಿದ್ದ ಬೋನಿಗೆ ಬಿದ್ದು ಸೆರೆಯಾಗಿದೆ.
ತಾಲೂಕಿನ ಕೆಂಪನಪಾಳ್ಯ ಕುರುಬನಕಟ್ಟೆ ರಕ್ಕಸನ ಪಾಳ್ಯ ಗ್ರಾಮಗಳ ಜನರು ಚಿರತೆಯ ಉಪಟಳದಿಂದ ಭಯಬೀತರಾಗಿದ್ದರು ಶುಕ್ರವಾರದಂದು ಮಲೈ ಮಹದೇಶ್ವರ ವನ್ಯ ಜೀವಿ ಅರಣ್ಯ ವ್ಯಾಪ್ತಿಯ ಕೊಳ್ಳೇಗಾಲ ಬಫರ್ ವಲಯಕ್ಕೆ ಒಳಪಡುವ ಮದು ಮಲೈ ಗುಡ್ಡದ ಹತ್ತಿರ ಕಾಲುವೆ ನೀರು ಹಾದು ಹೋಗುವ ಪೈಪ್ ನಲ್ಲಿ ಚಿರತೆಯೂ ಸಿಲುಕಿಕೊಂಡು ನಂತರ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೆರೆ ಸಿಕ್ಕಿಬಿದ್ದಿದೆ. ಚಿರತೆಯು ಬೃಹತ್ ಆಕಾರದಲ್ಲಿದ್ದು ಕೊರಳಿನಲ್ಲಿ ಬೆಲ್ಟ್ ಕಟ್ಟಿದ್ದು ಚಿರತೆಯನ್ನು ಮೃಗಲಾಯಕ್ಕೆ ಬಿಡುವಂತೆ ರೈತರು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಲಯ ಅರಣ್ಯಧಿಕಾರಿಗಳಾದ ಭರತ್, ಸಿಬ್ಬಂದಿಗಳಾದ ದೀಪಕ್, ನಿಂಗಪ್ಪ, ರವಿಕಿರಣ್,ಇನ್ನಿತರರಿದ್ದರು.