ಮನೆ ಅಪರಾಧ ಕುರಿ ಹಿಂಡಿನ ಮೇಲೆ ಹರಿದ ಲಾರಿ: 40 ಕ್ಕೂ ಅಧಿಕ ಕುರಿಗಳ ಸಾವು

ಕುರಿ ಹಿಂಡಿನ ಮೇಲೆ ಹರಿದ ಲಾರಿ: 40 ಕ್ಕೂ ಅಧಿಕ ಕುರಿಗಳ ಸಾವು

0

ಹೊಸಪೇಟೆ: ಕುರಿ ಹಿಂಡಿನ ಮೇಲೆ ಲಾರಿ ಹರಿದು, 40 ಕ್ಕೂ ಆಧಿಕ ಕುರಿಗಳು ಸಾವಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ‌ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ರಾ.ಹೆ.50 ರಲ್ಲಿ ‌ಸೋಮವಾರ ನಡೆದಿದೆ.

Join Our Whatsapp Group

ಕುರಿಗಾಹಿ ಶಿವಪುರದ ಬಾಲಪ್ಪ ಎಂಬ ರೈತನಿಗೆ‌‌ ಸೇರಿದ ಕುರಿಗಳು ಲಾರಿ ಹರಿದು ಸಾವನಪ್ಪಿವೆ.

ಹೊಸಪೇಟೆ ಕಡೆಯಿಂದ ಬೆಂಗಳೂರು ಕಡೆಗೆ ಅತಿವೇಗವಾಗಿ ಹೊರಟಿದ್ದ ಲಾರಿ ಕುರಿಗಳ ಮೇಲೆ ಹರಿಸಿದ ಪರಿಣಾಮ ಈ ಧಾರುಣ‌ ಘಟನೆ‌ ನಡೆದಿದೆ. ಲಾರಿ ಹರಿದ ರಭಸಕ್ಕೆ ರಸ್ತೆಯ ತುಂಬೆಲ್ಲಾ ಕುರಿಗಳ ದೇಹ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ‌ ನಡೆಸಿದ್ದಾರೆ.

ಹಿಂದಿನ ಲೇಖನYST ಆರೋಪದ ನಂತರ ಕಾಂಗ್ರೆಸ್ ಸರಕಾರದ ವಿರುದ್ಧ ಇನ್ನೊಂದು ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನಒತ್ತುವರಿ: 3 .17 ಎಕರೆ ಅರಣ್ಯ ಭೂಮಿ ಮರುವಶ