ಪಿರಿಯಾಪಟ್ಟಣ: ಕ್ಯಾನ್ ನಲ್ಲಿ ಡೀಸೆಲ್ ತುಂಬಿಕೊಂಡು ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಎದುರಿಗೆ ಬಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ತೀವ್ರಾವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿರುವ ಘಟನೆ ಹುಣಸವಾಡಿ ಸರ್ಕಲ್ಲಿನಲ್ಲಿ ನಡೆದಿದೆ.
ಜಾರ್ಖಂಡ್ ಮೂಲದ ಸಂದೀಪ್ ಕುಮಾರ್ (23 ವರ್ಷ) ಎಂಬಾತ ಮೃತ ವ್ಯಕ್ತಿಯಾಗಿದ್ದಾನೆ. ಈತ ತಾಲ್ಲೂಕಿನ ಬಿ.ಎಂ.ರಸ್ತೆಯ ಹುಣಸವಾಡಿ ಸರ್ಕಲ್ ಬಳಿ ಬುಧವಾರ ರಾತ್ರಿ ಕ್ಯಾನ್ ನಲ್ಲಿ ಡಿಸೇಲ್ ತುಂಬಿಕೊಂಡು ಬರುತ್ತಿದ್ದಾಗ ಎದುರಿಗೆ ಬಂದ ಲಾರಿ ಢಿಕ್ಕಿ ಹೊಡೆದಿದೆ. ಈತ ನವಿಲೂರು ಗ್ರಾಮದಲ್ಲಿ ಕೆಲವು ವರ್ಷಗಳಿಂದ ನವಿಲೂರಿನಲ್ಲಿ ತೇಜ ರಾಜ್ ಎಂಬುವವರೊಂದಿಗೆ ಜಮೀನು ಮಾಡಿಕೊಂಡು ಶುಂಠಿ ಬೆಳೆಯುತ್ತಿದ್ದ. ಬುಧವಾರ ರಾತ್ರಿ ಬೈಕಿನಲ್ಲಿ ಡೀಸೆಲ್ ಹಾಕಿಸಿಕೊಂಡು ಹುಣಸೇವಾಡಿ ಸರ್ಕಲ್ ಕಡೆ ಹೋಗುತ್ತಿದ್ದ ವೇಳೆ ಪಿರಿಯಾಪಟ್ಟಣದ ಕಡೆಯಿಂದ ಎದುರಿನಿಂದ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾದರೂ ಆತ ಮಾರ್ಗ ಮಧ್ಯೆ ಮೃತ ಪಟ್ಟಿದ್ದಾನೆ.
ಈ ಬಗ್ಗೆ ನವಿಲೂರು ಗ್ರಾಮದ ತೇಜರಾಜ್ ಕೊಟ್ಟ ದೂರಿನ ಮೇರೆಗೆ ಲಾರಿ ಚಾಲಕ ಮಹದೇವ್ ಎಂಬಾತನನ್ನು ಲಾರಿ ಸಮೇತ ವಶಕ್ಕೆ ಪಡೆದು ಬೈಲುಕುಪ್ಪೆ ಪೊಲೀಸ್ ಠಾಣೆ ಪಿಎಸ್ಐ ರವಿಕುಮಾರ್. ಪ್ರಕರಣ ದಾಖಲಿಸಿ ಕೊಂಡು ಮೃತ ದೇಹವನ್ನು ಮೈಸೂರು ಕೆ.ಆರ್.ಆಸ್ಪತ್ರೆಯ ಶವಗಾರರಲ್ಲಿ ಇರಿಸಿ ಅವರ ಕುಟುಂಬದ ರವರು ಬರುವುದಾಗಿ ತಿಳಿಸಿದ್ದು ಮರುಳೋತ್ತರ ಪರೀಕ್ಷೆಗೆ ಕಾಯುತ್ತಿದ್ದಾರೆ ಎನ್ನಲಾಗಿದೆ.














