ಮನೆ ಅಪರಾಧ ದೆಹಲಿಯ ಪೊಲೀಸ್‌ ಠಾಣೆಯಲ್ಲಿಯೇ ಪೊಲೀಸರಿಗೆ ಚೂರಿಯಿಂದ ಇರಿದ ವ್ಯಕ್ತಿ

ದೆಹಲಿಯ ಪೊಲೀಸ್‌ ಠಾಣೆಯಲ್ಲಿಯೇ ಪೊಲೀಸರಿಗೆ ಚೂರಿಯಿಂದ ಇರಿದ ವ್ಯಕ್ತಿ

0

ನವದೆಹಲಿ(NewDelhi): ಶಹಾದರದ ಪೂರ್ವ ದೆಹಲಿಯ ಪೊಲೀಸ್‌ ಠಾಣೆಗೆ ನುಗ್ಗಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಚೂರಿಯಿಂದ ಇರಿದಿರುವ ಘಟನೆ ಬುಧವಾರ ನಡೆದಿದೆ.

ಆರೋಪಿಯನ್ನು ಭರತ್ ಭಾಟಿ (28) ಎಂದು ಗುರುತಿಸಲಾಗಿದೆ.

ಪೊಲೀಸ್ ಠಾಣೆಗೆ ನುಗ್ಗಿದ್ದ ಆರೋಪಿ, ಮೊಬೈಲ್ ಫೋನ್‌ನಲ್ಲಿ ಠಾಣೆಯ ವಿಡಿಯೊ ಶೂಟಿಂಗ್ ಮಾಡುತ್ತಿದ್ದ.ಅದನ್ನು ಪ್ರಶ್ನಿಸಿದಾಗ, ಏಕಾಏಕಿ ಆತ ಚೂರಿ ತೆಗೆದು ಪಕ್ಕದಲ್ಲಿದ್ದ ಪೊಲೀಸರಿಗೆ ಇರಿದಿದ್ದಾನೆ.

ಚೂರಿ ಇರಿತಕ್ಕೆ ಒಳಗಾದ ಪೊಲೀಸ್ ಹೆಡ್ ಕಾನ್ಸ್‌ಟೆಬಲ್ ದೀಪಕ್, ಕಾನ್ಸ್‌ಟೆಬಲ್ ಅಮಿತ್, ಮನೀಷ್, ನರೇಶ್, ಸುನಿಲ್ ಮತ್ತು ಹೋಮ್‌ಗಾರ್ಡ್ ರವಿ ಅವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಡೆದ ಸಂದರ್ಭ ಪೊಲೀಸ್ ಠಾಣೆಯಲ್ಲಿ ಎಂಟು ಮಹಿಳೆಯರ ಸಹಿತ 20 ಮಂದಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.