ನವದೆಹಲಿ(Newdelhi): ಏರ್’ಇಂಡಿಯಾ ವಿಮಾನದಲ್ಲಿ ನ.26ರಂದು ಸಹ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಮಿಶ್ರಾ ಅವರನ್ನು ಬಂಧಿಸಿ ದೆಹಲಿಗೆ ಕರೆತರಲಾಗಿದೆ. ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನದ ಬಿಜಿನೆಸ್ ಕ್ಲಾಸ್’ನಲ್ಲಿ ನ.26ರಂದು ಮಹಿಳೆ ಮೇಲೆ ಮಿಶ್ರಾ ಅವರು ಮೂತ್ರ ವಿಸರ್ಜಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಆರೋಪಿ ಪತ್ತೆಗಾಗಿ ಪೊಲೀಸರ ಎರಡು ತಂಡ ಹುಡುಕಾಟ ನಡೆಸಿತ್ತು. ಒಂದು ಬೆಂಗಳೂರಿನಲ್ಲಿರುವ ಮಿಶ್ರಾ ಸಹೋದರಿ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರೆ, ಇನ್ನೊಂದು ತಂಡ, ಮುಂಬೈನಲ್ಲಿರುವ ಮಿಶ್ರಾ ತಂದೆ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿತ್ತು. ಅಲ್ಲದೇ ಮಿಶ್ರಾ ವಿದೇಶ ಪ್ರಯಾಣ ಮಾಡದಂತೆ ಪೊಲೀಸರು ಲುಕ್ ಔಟ್ ಆದೇಶ ಹೊರಡಿಸಿದ್ದರು.
ಕೆಲಸದಿಂದ ವಜಾ: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಎದುರಿಸುತ್ತಿರುವ ಮುಂಬೈ ಮೂಲದ ಶಂಕರ್ ಮಿಶ್ರಾ ಅವರನ್ನು ಅಮೆರಿಕದ ವೆಲ್ಸ್ ಫ್ರಾಗೋ ಸಂಸ್ಥೆ ಕೆಲಸದಿಂದ ವಜಾ ಮಾಡಿದೆ.
ಎಚ್ಚರಿಕೆ: ಅಶಿಸ್ತು ಅಥವಾ ಅನುಚಿತವಾಗಿ ವರ್ತಿ ಸುವ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದರೆ ವಿಮಾನಯಾನ ಸಿಬ್ಬಂದಿ ಕ್ರಮ ಎದುರಿಸಬೇಕಾಗುತ್ತದೆ ಎಂದು ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯ ತಿಳಿಸಿದೆ.