ಚಾಮರಾಜನಗರ : ಡಿಜೆ ಸೌಂಡ್ಗೆ ಯುವಕರೊಂದಿಗೆ ಕುಣಿದು ಕುಪ್ಪಳಿಸುತ್ತಿದ್ದ ವ್ಯಕ್ತಿಗೆ ದಿಢೀರನೆ ಹಾರ್ಟ್ ಅಟ್ಯಾಕ್ ಆಗಿದ್ದು ಡ್ಯಾನ್ಸ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ ನಡೆದಿದೆ.
ಬಾಬು (42) ಹಾರ್ಟ್ ಅಟ್ಯಾಕ್ ನಿಂದ ಮೃತಪಟ್ಟ ವ್ಯಕ್ತಿ.
ಗ್ರಾಮದಲ್ಲಿ ಗೌರಿ ವಿಸರ್ಜನೆ ಅಂಗವಾಗಿ ಕಲ್ಯಾಣ ಬಸವೇಶ್ವರ ಉತ್ಸವ ಹಮ್ಮಿಕೊಳ್ಳಲಾಗಿತ್ತು. ದೇವರ ಉತ್ಸವದ ವೇಳೆ ಡಿಜೆಗೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿ ನೋಡ ನೋಡುತ್ತಲೇ ಹಾರ್ಟ್ ಅಟ್ಯಾಕ್ ಆಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.














