ಮನೆ ರಾಜ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ವಿವಾಹಿತ ಆತ್ಮಹತ್ಯೆ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ವಿವಾಹಿತ ಆತ್ಮಹತ್ಯೆ

0

ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಬಿಟ್ಟು ವಿವಾಹಿತನೋರ್ವ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ನಗರದ 17ನೇ ವಾರ್ಡ್‍ ನಲ್ಲಿ ನಡೆದಿದೆ.

ಕೆ.ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

‘ಪತ್ನಿ ಶಿಲ್ಪಾ, ಅತ್ತೆ ಅಶ್ವತ್ಥಮ್ಮ ಹಾಗೂ ಬಾಮೈದ ವೆಂಕಟೇಶ್ ಅವರು, ‘ನೀನು ಸಾಯೋವರೆಗೂ ನಮಗೆ ನೆಮ್ಮದಿ ಇಲ್ಲವೆಂದು ಹೀಯಾಳಿಸುತ್ತಿದ್ದರಂತೆ. ಜೊತೆಗೆ ಗಂಡ ವೆಂಕಟೇಶನನ್ನು ತೊರೆದು ಪತ್ನಿ ಶಿಲ್ಪಾ ತವರುಮನೆ ಸೇರಿದ್ದಳಂತೆ. ಈ ಹಿನ್ನಲೆ ಇವರ ಕಿರುಕುಳದಿಂದ ಸಾಯುತ್ತಿದ್ದೇನೆ ಎಂದು ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ಕುರಿತು ಮೃತನ ತಾಯಿ ಮಂಜುಳ ಎಂಬುವವರು ಚಿಕ್ಕಬಳ್ಳಾಪುರ ನಗರಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ತನಿಖೆ ಶುರು ಮಾಡಿದ್ದಾರೆ.