ಮನೆ ಅಪರಾಧ ತಾಯಿಯ ಸ್ನೇಹಿತನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ತಾಯಿಯ ಸ್ನೇಹಿತನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

0

ಉತ್ತರ ಪ್ರದೇಶ: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಆಕೆಯ ತಾಯಿಯ ಸ್ನೇಹಿತನೇ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ​ನಲ್ಲಿ ನಡೆದಿದೆ.

Join Our Whatsapp Group

ಆದರೆ ಈ ವಿಚಾರ ಹೊರಗೆ ಬರಬಾರದೆಂದು ತಾಯಿ ತನ್ನ 10 ವರ್ಷದ ಮಗಳಿಗೆ ಚಿತ್ರಹಿಂಸೆ ನೀಡಿ, ಮತ್ತೆ ಆತನ ಬಳಿಯೇ ಕಳುಹಿಸಿಕೊಡಲು ಯತ್ನಿಸಿದ್ದಾಳೆ ಮತ್ತು ಆಕೆಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಲು ಪ್ರಯತ್ನಿಸಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ವಿಚಾರವು ಎಲ್ಲಿಯೂ ಹೊರಬರಬಾರದೆಂದು ತಾಯಿ ಆಕೆ ಹಾಗೂ ಆಕೆಯ ಸಹೋದರ ಇಬ್ಬರಿಗೂ ಥಳಿಸಿ ಚಿತ್ರಹಿಂಸೆ ನೀಡುತ್ತಿದ್ದರು. ಹಿಂಸೆಯನ್ನು ಸಹಿಸಲಾಗದೆ, ಮಗಳು ಜನವರಿ 20 ರಂದು ತನ್ನ ಗಾಜಿಯಾಬಾದ್ ನಿವಾಸದಿಂದ ಓಡಿಹೋಗಿದ್ದಾಳೆ ಮತ್ತು ನಂತರ ದೆಹಲಿಯ ಬೀದಿಗಳಲ್ಲಿ ಅಲೆದಾಡುತ್ತಿದ್ದಳು.

ಅದೃಷ್ಟವಶಾತ್ ಆಕೆಯನ್ನು ದೆಹಲಿ ಪೊಲೀಸರು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಇರಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದು ಸತ್ಯ ಎನ್ನುವುದು ಬಹಿರಂಗಗೊಂಡಿದೆ. ನಾಲ್ಕು ವರ್ಷಗಳ ಹಿಂದೆ ತನ್ನ ತಂದೆಯ ನಿಧನದ ನಂತರ, ತಾನು ಮತ್ತು ಸಹೋದರ ತಮ್ಮ ತಾಯಿಯ ಅಜ್ಜಿಯೊಂದಿಗೆ ವಾಸಿಸುತ್ತಿದ್ದುದಾಗಿ ಹೇಳಿದ್ದಾಳೆ.

ಕಳೆದ ವರ್ಷ, ತಾಯಿ ಅವರನ್ನು ಕರೆದುಕೊಂಡು ಬಂದಿದ್ದಳು, ಬಳಿಕ ದೌರ್ಜನ್ಯಕ್ಕೆ ಬಲಿಯಾಗಬೇಕಾಯಿತು, ಸಹೋದರನೂ ಕೂಡ ಓಡಿಹೋಗಿರುವುದಾಗಿ ತಿಳಿಸಿದ್ದಾಳೆ. ತಂದೆಯ ಮರಣದ ನಂತರ ತಾಯಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಗೊತ್ತಾದ ನಂತರ ಮನೆ ತೊರೆಯದಿದ್ದರೆ ದೊಡ್ಡವನಾದ ಮೇಲೆ ತನ್ನನ್ನೂ ಈ ದಂಧೆಗೆ ತಳ್ಳುತ್ತಿದ್ದಳು ಎಂದು ಹೇಳಿದ್ದಾಳೆ.

ತನ್ನ ತಾಯಿ ಮತ್ತು ರಾಜು ಅಪರಾಧವನ್ನು ಮುಚ್ಚಿಡಲು ತನಗೆ ಚಿತ್ರಹಿಂಸೆ ನೀಡುತ್ತಿದ್ದರು ಮತ್ತು ಈ ಬಗ್ಗೆ ಯಾರಿಗೂ ಹೇಳದಂತೆ ನೋಡಿಕೊಳ್ಳಲು ಬೆದರಿಕೆ ಹಾಕುತ್ತಿದ್ದರು ಎಂದು ಬಾಲಕಿ ತಿಳಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ.