ಮನೆ ರಾಜ್ಯ ಇಬ್ಬರು ಹೆಣ್ಣುಮಕ್ಕಳ ಜತೆ ಬಾವಿಗೆ ಹಾರಿದ ತಾಯಿ: ಓರ್ವ ಬಾಲಕಿ ಪಾರು

ಇಬ್ಬರು ಹೆಣ್ಣುಮಕ್ಕಳ ಜತೆ ಬಾವಿಗೆ ಹಾರಿದ ತಾಯಿ: ಓರ್ವ ಬಾಲಕಿ ಪಾರು

0

ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ತನ್ನಿಬ್ಬರು ಹೆಣ್ಣು ಮಕ್ಕಳ ಜತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸೇಟ್ ದಿನ್ನೆ ಬಳಿ ನಡೆದಿದೆ.

Join Our Whatsapp Group

ತಾಯಿ ನಾಗಮ್ಮ (38) ಹಾಗೂ ಮಗಳು ಶ್ರೀನಿಧಿ (5) ದುರಂತ ಸಾವಿಗೀಡಾಗಿದ್ದರೆ, 7 ವರ್ಷದ ಗಂಗೋತ್ರಿ ಬಾವಿಯಿಂದ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾಳೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹಗಳಿಗಾಗಿ ಆಗ್ನಿಶಾಮಕದಳ ಶೋಧ ಕಾರ್ಯ ನಡೆಸುತ್ತಿದೆ, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.