ಮನೆ ಅಪರಾಧ ರಾಶಿ ಭವಿಷ್ಯ ಸರಿಯಿಲ್ಲ ಎಂದು ಮಗುವನ್ನೇ ಕೊಂದ ತಾಯಿ

ರಾಶಿ ಭವಿಷ್ಯ ಸರಿಯಿಲ್ಲ ಎಂದು ಮಗುವನ್ನೇ ಕೊಂದ ತಾಯಿ

0

ತಮಿಳುನಾಡು: ನಾಲ್ಕು ತಿಂಗಳ ಗಂಡು ಮಗುವನ್ನು ರಾಶಿ ಭವಿಷ್ಯ ಸರಿಯಿಲ್ಲ  ಎಂಬ ಕಾರಣಕ್ಕಾಗಿ ತಾಯಿಯೇ ನದಿಗೆ ಎಸೆದು ಕೊಂದಿರುವ ಘಟನೆ ತಮಿಳುನಾಡಿದ ದಿಂಡಿಗಲ್ ನಲ್ಲಿ ನಡೆದಿದೆ.

‘ರಾಶಿಭವಿಷ್ಯದ ಪ್ರಕಾರ ಮಗುವಿನ ಸಮಯ ಸರಿಯಿರಲಿಲ್ಲ. ಹಾಗಾಗಿ ಕೊಂದಿದ್ದೇನೆ’ ಎಂದು ಪೊಲೀಸರಿಗೆ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಳೆ.

ದಿಂಡಿಗಲ್ ಜಿಲ್ಲೆಯ ಪಳನಿ ಸಮೀಪದ ರಾಜಪುರಂ ಪಂಚಾಯತ್​​ನ ಗ್ರಾಮದಲ್ಲಿ ಮಹೇಶ್ವರನ್​ ಮತ್ತು ಲತಾ ದಂಪತಿ ವಾಸ ಮಾಡುತ್ತಿದ್ದು, ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಮೊದಲನೇ ಗಂಡು ಮಗುವಿಗೆ ಈಗ ಮೂರು ವರ್ಷ. ಎರಡನೇ ಮಗುವಿಗೆ ಕೇವಲ ನಾಲ್ಕು ತಿಂಗಳಾಗಿದ್ದು, ಅದರ ಹೆಸರು ಗೋಕುಲ್​.

ಮಾರ್ಚ್​​ 23ರಂದು ಮಹೇಶ್ವರನ್​ ಕೆಲಸಕ್ಕೆ ತೆರಳಿದಾಗ ಲತಾ ಗೋಕುಲ್​ನನ್ನು ತೆಗೆದುಕೊಂಡು ಪಾಲಾರು-ಪೊರುಂದಲಾರು ನದಿಯ ಜಲಾಶಯಕ್ಕೆ ಎಸೆದು, ಏನೂ ನಡೆದೇ ಇಲ್ಲವೆಂಬಂತೆ ವಾಪಸಾಗಿದ್ದಾಳೆ.ಮಗುವನ್ನು ಸ್ಥಳೀಯರೇ ರಕ್ಷಿಸಿ, ಪಳನಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಪರೀಕ್ಷಿಸಿದ ವೈದ್ಯರು, ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ನಂತರ ಈ ವಿಚಾರ ಪಳನಿ ಪೊಲೀಸರಿಗೆ ತಲುಪಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಗುವಿನ ಪೋಷಕರನ್ನು ಗುರುತಿಸಿ, ವಿಚಾರಣೆ ನಡೆಸಿದಾಗ ಮೊದಲಿಗೆ ಲತಾ ಅನುಮಾನಾಸ್ಪದವಾಗಿ ಉತ್ತರ ನೀಡಿದ್ದಾಳೆ. ನಂತರ ಗಂಭೀರ ವಿಚಾರಣೆ ನಡೆಸಿದಾಗ, ಮಗನ ರಾಶಿ ಭವಿಷ್ಯ ಸರಿಯಿರಲಿಲ್ಲ ಎಂಬ ಕಾರಣಕ್ಕೆ ಕೊಂದಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ.