ಕ್ರಿಕೆಟ್ ಕುರಿತಾದ ಸಿನಿಮಾ ಒಂದು ಕನ್ನಡದಲ್ಲಿ ಬರುತ್ತಿದೆ. ಸಿನಿಮಾಕ್ಕೆ ಕಿರಿಕಿ ಇಟ್ 11 ಎಂದು ಹೆಸರಿಡಲಾಗಿದ್ದು, ಈ ಸಿನಿಮಾ ಕೆಎಲ್ ರಾಹುಲ್ ಜೀವನ ಆಧರಿಸಿದೆ ಎನ್ನಲಾಗುತ್ತಿದೆ.
ಬಾಲಿವುಡ್ಗೆ ಹೋಲಿಸಿದರೆ ಕ್ರೀಡೆ ಹಾಗೂ ಕ್ರೀಡಾಪಟುಗಳ ಕುರಿತಾದ ಸಿನಿಮಾಗಳು ದಕ್ಷಿಣದಲ್ಲಿ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ತೆರೆಗೆ ಬರುವುದು ಕಡಿಮೆ. ಆಗೊಮ್ಮೆ ಈಗೊಮ್ಮೆ ಸಿನಿಮಾದ ಆಟಗಳನ್ನು ಕ್ಲೈಮ್ಯಾಕ್ಸ್ನಲ್ಲಿ ಬಳಸಲಾಗಿದೆಯಾದರೂ ಪೂರ್ಣ ಸಿನಿಮಾ ಒಂದೇ ಆಟದ ಕುರಿತಾಗಿ ಬಂದಿರುವ ಉದಾಹರಣೆ ವಿರಳದಲ್ಲಿ ವಿರಳ. ಆದರೆ ಇದೀಗ ಕನ್ನಡದಲ್ಲಿ ಕ್ರಿಕೆಟ್ ಬಗ್ಗೆ ಸಿನಿಮಾ ಒಂದು ತೆರೆಗೆ ಬರಲು ಸಜ್ಜಾಗಿದೆ. ಆದರೆ ಕ್ರಿಕೆಟ್ ಜೊತೆಗೆ ಈ ಸಿನಿಮಾ ಕಿರಿಕ್ ಮೇಲೂ ಗಮನ ವಹಿಸಿದೆ.
ಕೆಜಿಎಫ್, ಕಾಂತಾರ ರೀತಿಯ ದೊಡ್ಡ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲಮ್ಸ್ನ ಸಹೋದರ ಸಂಸ್ಥೆಯಾದ ಕೆಆರ್ಜಿ ಸ್ಟುಡಿಯೋಸ್ ಕ್ರಿಕೆಟ್ ಬಗೆಗಿನ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಆರ್ಸಿಬಿ ಕ್ರಿಕೆಟ್ ತಂಡದೊಂದಿಗೆ ಸಹಭಾಗಿತ್ವ ಹೊಂದಿರುವ ಹೊಂಬಾಳೆ ಫಿಲಮ್ಸ್ ಇದೀಗ ಕ್ರಿಕೆಟ್ ಆಧರಿಸಿದ ಸಿನಿಮಾ ಮಾಡಲು ಆಸಕ್ತಿ ತೋರಿದೆ. ಸಿನಿಮಾಕ್ಕೆ ‘ಕಿರಿಕ್ ಇಟ್ 11’ ಎಂದು ಹೆಸರಿಡಲಾಗಿದ್ದು ಈ ಸಿನಿಮಾ ಭಾರತ ತಂಡದ ಕ್ರಿಕೆಟಿಗ ಕೆಎಲ್ ರಾಹುಲ್ ಜೀವನ ಆಧರಿಸಿದೆ ಎನ್ನಲಾಗುತ್ತಿದೆ.
ಕರ್ನಾಟಕದ ಹೆಮ್ಮೆಯ ಆಟಗಾರರಾಗಿರುವ ಕೆಎಲ್ ರಾಹುಲ್ ಜೀವನವನ್ನು ಕಿರಿಕ್ ಇಟ್ ಸಿನಿಮಾ ಮೂಲಕ ತೆರೆಗೆ ತರಲಾಗುತ್ತಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ ಕೆಎಲ್ ರಾಹುಲ್ ಆಗಲಿ ಅಥವಾ ಚಿತ್ರತಂಡವಾಗಲಿ ಇದು ಕೆಎಲ್ ರಾಹುಲ್ ಅವರದ್ದೇ ಜೀವನ ಆಧರಿಸಿದ ಸಿನಿಮಾ ಎಂದು ಅಧಿಕೃತವಾಗಿ ಹೇಳಿಲ್ಲ. ಕಿರಿಕ್ ಇಟ್ ಸಿನಿಮಾ ದಾನಿಶ್ ಸೇಠ್ ಹಾಗೂ ನವೀನ್ ಶಂಕರ್ ಅವರುಗಳು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.
ಬೆಂಗಳೂರಿನವರೇ ಆದ ಮನೋಜ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಸುಮನ್ ಕುಮಾರ್ . ಸ್ಟ್ಯಾಂಡಪ್ ಕಮಿಡಿಯನ್ ಆಗಿರುವ ಸುಮನ್ ಕುಮಾರ್, ಸೂಪರ್ ಹಿಟ್ ವೆಬ್ ಸರಣಿಗಳಾದ ಫರ್ಜಿ, ಫ್ಯಾಮಿಲಿ ಮ್ಯಾನ್ ಗಳಲ್ಲಿ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಫ್ಯಾಮಿಲಿಮ್ಯಾನ್ನ ಮತ್ತೋರ್ವ ಬರಹಗಾರ ಮನೋಜ್ಕುಮಾರ್ ಕಲೈವಣ್ಣನ್ ಈ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದಾರೆ.
ದಾನಿಶ್ ಸೇಠ್ ಈಗಾಗಲೇ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆರ್ಸಿಬಿ ತಂಡದ ಜೊತೆಗೆ ಹಲವು ವರ್ಷಗಳಿಂದ ಟ್ರಾವೆಲ್ ಮಾಡಿರುವ ದಾನಿಶ್, ಕ್ರಿಕೆಟ್ ಬಗ್ಗೆ, ಕ್ರಿಕೆಟಿಗರ ಬಗ್ಗೆ ಹಲವು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಕಿರಿಕ್ ಇಟ್ ಸಿನಿಮಾ ಸಹ ಹಾಸ್ಯದ ಜೊತೆಗೆ ಕ್ರಿಕೆಟ್ ಕತೆಯನ್ನು ಹೇಳಲಿದೆ ಎನ್ನಲಾಗುತ್ತಿದೆ. ಕೆಎಲ್ ರಾಹುಲ್ರ ಜೀವನದ ಕೆಲವು ಅಂಶಗಳು ಈ ಸಿನಿಮಾದಲ್ಲಿ ಇರಲಿವೆಯಂತೆ.