ಮನೆ ಅಪರಾಧ ಮಂಡ್ಯ: ಕಾಲುವೆಯಲ್ಲಿ ಈಜಲು ಹೋಗಿದ್ದ ರಾಷ್ಟ್ರಮಟ್ಟದ ಸೈಕಲ್ ಪೋಲೋ ಆಟಗಾರ ಸಾವು

ಮಂಡ್ಯ: ಕಾಲುವೆಯಲ್ಲಿ ಈಜಲು ಹೋಗಿದ್ದ ರಾಷ್ಟ್ರಮಟ್ಟದ ಸೈಕಲ್ ಪೋಲೋ ಆಟಗಾರ ಸಾವು

0

ಮಂಡ್ಯ(Mandya): ಜಿಲ್ಲೆಯ ಅಕ್ಕಿಹೆಬ್ಬಾಳು ಗ್ರಾಮದ ಬಳಿ ಕಾಲುವೆಯಲ್ಲಿ ಈಜಲು ಹೋಗಿದ್ದ ಪುದುಚೇರಿಯ ರಾಷ್ಟ್ರ ಮಟ್ಟದ ಸೈಕಲ್ ಪೋಲೋ ಆಟಗಾರನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಮೃತ ಬಾಲಕನನ್ನು ಅಲ್ಹರ್ಷ್ (17) ಎಂದು ಗುರುತಿಸಲಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೈಸೂರು ವಿಶ್ವವಿದ್ಯಾಲಯ ಹಾಸ್ಟೆಲ್​ ಮೈದಾನದಲ್ಲಿ ನವೆಂಬರ್ 17 ರಿಂದ 20 ವರೆಗೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸೈಕಲ್ ಪೋಲೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಇಲ್ಲಿಗೆ ಬಂದ ತಂಡದಲ್ಲಿ ಈತನು ಒಬ್ಬನಾಗಿದ್ದ.

ಅಲ್ಹರ್ಷ್ ಹತ್ತಿರದ ಕಾಲುವೆಗೆ ಈಜಲು ಹೋಗಿದ್ದು, ದುರಾದೃಷ್ಟವಶಾತ್​ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರವಾದ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಬಾಲಕನ ಮೃತದೇಹವನ್ನು ಕಾಲುವೆಯಿಂದ ಹೊರತೆಗೆದಿದ್ದಾರೆ.

ಹಿಂದಿನ ಲೇಖನಸೆಂಡ್ ಆಫ್ ಪಾರ್ಟಿಯಲ್ಲಿ ನಾಗಿನ್ ಡ್ಯಾನ್ಸ್‌: ಜಡ್ಜ್, ಕೋರ್ಟ್ ಸಿಬ್ಬಂದಿ ಅಮಾನತು
ಮುಂದಿನ ಲೇಖನಮೊಬೈಲ್ ಸುಲಿಗೆ ಮಾಡಿ, ಬೆನ್ನಟ್ಟಿದ ವ್ಯಕ್ತಿಗೆ ಚಾಕು ಇರಿದಿದ್ದ ವ್ಯಕ್ತಿಯ ಬಂಧನ