ಅಯೋಧ್ಯಾ: ಅಯೋಧ್ಯಾ ರಾಮಮಂದಿರದಲ್ಲಿ ಪೂಜೆ ಮಾಡುವ ಅರ್ಚಕರಿಗೆ ನೂತನ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಈ ಮೊದಲು ಅರ್ಚಕರು ಕೇಸರಿ, ಹಳದಿ ಉಡುಪು ಧರಿಸುತ್ತಿದ್ದರು.
ಇನ್ನು ಮುಂದೆ ಅರ್ಚಕರು ಪೇಟ, ಪೂರ್ಣ ತೋಳಿನ ಕುರ್ತಾ, ಧೋತಿ ಧರಿಸಲಿದ್ದಾರೆ. ಈ ಎಲ್ಲ ಉಡುಪು ಸಂಪೂರ್ಣ ಹಳದಿ ಬಣ್ಣದ್ದಾಗಿದ್ದು, ಪ್ರಧಾನ ಅರ್ಚಕರು, 4 ಸಹಾಯಕ ಅರ್ಚಕರು ಹಾಗೂ ತರಬೇತಿ ಪಡೆಯುತ್ತಿರುವ 20 ಅರ್ಚಕರು ಎಲ್ಲರೂ ಇದೇ ಸಮವಸ್ತ್ರ ಧರಿಸಲಿದ್ದಾರೆ. ಜತೆಗೆ ಅರ್ಚ ಕರಿಗೆ 5 ಗಂಟೆಗಳ ಪಾಳಿ ಅವಧಿ ನಿಗದಿಪಡಿಸಲಾಗಿದ್ದು, ಗರ್ಭಗುಡಿಯಲ್ಲಿ ಮೊಬೈಲ್ ಬಳಸಲು ನಿಷೇಧಿಸಲಾಗಿದೆ ಎಂದು ಸಹಾಯಕ ಅರ್ಚಕ ಸಂತೋಷಕುಮಾರ್ ತಿವಾರಿ ತಿಳಿಸಿದ್ದಾರೆ.