ಮನೆ ಅಪರಾಧ ಬಾಕಿ ವಿದ್ಯುತ್ ಬಿಲ್​​ ಕಟ್ಟುವಂತೆ ಮೊಬೈಲ್‌ ಗೆ ಬಂದಿದ್ದ ಲಿಂಕ್‌ ಕ್ಲಿಕ್ಕಿಸಿ 5.48 ಲಕ್ಷ ರೂ...

ಬಾಕಿ ವಿದ್ಯುತ್ ಬಿಲ್​​ ಕಟ್ಟುವಂತೆ ಮೊಬೈಲ್‌ ಗೆ ಬಂದಿದ್ದ ಲಿಂಕ್‌ ಕ್ಲಿಕ್ಕಿಸಿ 5.48 ಲಕ್ಷ ರೂ ಕಳೆದುಕೊಂಡ ವ್ಯಕ್ತಿ

0

ಮೈಸೂರು: ದೂರವಾಣಿ ಕರೆ ಮಾಡಿ ಬಾಕಿ ವಿದ್ಯುತ್ ಬಿಲ್ ಕಟ್ಟುವಂತೆ ಹೇಳಿ​ ಬರೋಬ್ಬರಿ 5.48 ಲಕ್ಷ ರೂ. ದೋಚಿರುವ ಪ್ರಕರಣ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಯಾದವಗಿರಿ ಬಡಾವಣೆ ನಿವಾಸಿ ಕಣ್ಣನ್ ಎಂಬುವರಿಗೆ ವಂಚಕರು ದೂರವಾಣಿ ಕರೆ ಮಾಡಿ ವಿದ್ಯುತ್ ಬಿಲ್ ಬಾಕಿ ಇದ್ದು, ಒಂದು ಲಿಂಕ್​ ಮೂಲಕ ಪಾವತಿಸುವಂತೆ ಸೂಚಿಸಿದ್ದಾರೆ.

ಕರೆ ಕಡಿತಗೊಳಿಸಿದ ನಂತರ ಖದೀಮರು, ಕಣ್ಣನ್ ಅವರ ಫೋನ್​ ಗೆ ಲಿಂಕ್ ಕಳುಹಿಸಿ ಹಣ ಪಾವತಿಸುವಂತೆ ಹೇಳಿದ್ದಾರೆ. ಅದಂತೆ ಕಣ್ಣನ್ ಅವರು ಸಹ ವಂಚಕರು ಕಳುಹಿಸಿದ್ದ ಲಿಂಕ್​ ಮೇಲೆ ಕ್ಲಿಕ್​ ಮಾಡಿದ್ದಾರೆ. ಬಳಿಕ ವಂಚಕರು ಲಿಂಕ್ ಮೂಲಕ ಸಂಪೂರ್ಣ ಮಾಹಿತಿ ಪಡೆದು ಖಾತೆಯಿಂದ 5,48,149 ರೂ. ಡ್ರಾ ಮಾಡಿಕೊಂಡಿದ್ದಾರೆ. ಹಣ ಡ್ರಾ ಆಗಿರುವ ಮೆಸೇಜ್ ನೋಡಿ ಶಾಕ್ ಆದ ಕಣ್ಣನ್​ ಅವರು ಕೂಡಲೇ ಮೈಸೂರು ಸೈಬರ್ ಪೊಲೀಸ್ ಠಾಣೆಗೆ ತೆರೆಳಿ ದೂರು ದಾಖಲಿಸಿದ್ದಾರೆ.