ಮನೆ ಅಪರಾಧ ಚಪ್ಪಲಿ ಹುಡುಕಿ ಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಡ ರೈತ

ಚಪ್ಪಲಿ ಹುಡುಕಿ ಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಡ ರೈತ

0

ಮಧ್ಯ ಪ್ರದೇಶ(Madyapradesh): ತನ್ನ ಚಪ್ಪಲಿ ಕಳೆದುಹೋಗಿದೆ ಹುಡುಕಿಕೊಡಿ ಎಂದು ಬಡ ರೈತನೊಬ್ಬ ಪೊಲೀಸ್ ಠಾಣೆ ಮೆಟ್ಟಲೇರಿರುವ ವಿಚಿತ್ರ ಘಟನೆ ಉಜ್ಜಯಿನಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಖಚ್ರೋಡ್‌ ಪೊಲೀಸ್ ಠಾಣೆಗೆ ಸ್ನೇಹಿತನ ಜೊತೆ ರೈತ ಜೀತೆಂದ್ರ ಆಗಮಿಸಿದ್ದಾನೆ. ಹರಿದು ಹೋದ ಅಂಗಿ, ಬಟ್ಟೆ ತೊಟ್ಟು ಕಾಲಿಗೆ ಚಪ್ಪಲಿ ಇಲ್ಲದೇ ರೈತ ಬಂದಿದ್ದ. ಆತನನ್ನು ನೋಡಿದ ಪೊಲೀಸರು, ಏನು ನಿನ್ನ ಸಮಸ್ಯೆ ಎಂದು ವಿಚಾರಿಸಿದ್ದಾರೆ.

ರೈತ ತನ್ನ ಚಪ್ಪಲಿ ಕಳೆದು ಹೋಗಿದೆ, ಅದನ್ನು ಹುಡುಕಿಕೊಡಿ ಸ್ವಾಮಿ ಅಂತ ಪೊಲೀಸರ ಮುಂದೆ ಬೇಡಿಕೊಂಡಿದ್ದಾನೆ. 180 ರೂಪಾಯಿ ಕೊಟ್ಟು ನಾನು ಚಪ್ಪಲಿ ಖರೀದಿ ಮಾಡಿದ್ದೆ. ಕಪ್ಪು ಬಣ್ಣದ ಚಪ್ಪಲಿ ಖರೀದಿ ಮಾಡಿದ್ದೆ. ಆದರೆ ಅದನ್ನು ಕಳ್ಳರು ಕದ್ದೊಯ್ದಿದ್ದಾರೆ. ದಯವಿಟ್ಟು ಅದನ್ನು ಹುಡುಕಿಕೊಟ್ಟು, ನನಗೆ ತಲುಪಿಸಿ ಅಂತ ಮನವಿ ಮಾಡಿದ್ದಾನೆ.

ರೈತನ ಮಾತು ಕೇಳುತ್ತಿದ್ದಂತೆ ಪೊಲೀಸರಿಗೆ ಆಶ್ಚರ್ಯ, ನಗು ಏಕಕಾಲಕ್ಕೆ ಉಂಟಾಗಿದೆ. ತನ್ನ ಚಪ್ಪಲಿ ಕಳ್ಳತನದ ಹಿಂದೆ ಪಿತೂರಿ ಇದೆ ಅಂತ ರೈತ ಆರೋಪಿಸಿದ್ದಾನೆ. ಇನ್ನು ರೈತ ಜೀತೆಂದ್ರ ಅವರು ತಮ್ಮ ಕೆಲವು ಸಾಕ್ಷ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಿದರು ಅಂತಿಮವಾಗಿ ಅವರ ಕಂಪ್ಲೈಂಟ್ ಸ್ವೀಕರಿಸಿ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.