ಮನೆ ರಾಜ್ಯ ರಾಜ್ಯದ ಹೆಮ್ಮೆಯ ಕ್ಷಣ: ವಿಧಾನಸೌಧದ ಮುಂಭಾಗ ಆರ್‌ಸಿಬಿ ಆಟಗಾರರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ....

ರಾಜ್ಯದ ಹೆಮ್ಮೆಯ ಕ್ಷಣ: ವಿಧಾನಸೌಧದ ಮುಂಭಾಗ ಆರ್‌ಸಿಬಿ ಆಟಗಾರರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸನ್ಮಾನ

0

ಬೆಂಗಳೂರು: ಐಪಿಎಲ್ 2025ರ 18ನೇ ಆವೃತ್ತಿಯಲ್ಲಿ ಚೊಚ್ಚಲ ಬಾರಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ರಾಜ್ಯ ಸರ್ಕಾರದಿಂದ ಅಧಿಕೃತ ಸನ್ಮಾನ ದೊರೆತಿದೆ. ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳಲ್ಲಿ ಐತಿಹಾಸಿಕ ಸನ್ಮಾನ ಕಾರ್ಯಕ್ರಮ ನಡೆಯಿತು.

ಆರ್‌ಸಿಬಿ ತಂಡ ಬೆಂಗಳೂರಿಗೆ ಆಗಮಿಸಿದ್ದೂ ಕೂಡ ಅಭಿಮಾನಿಗಳ ತೀವ್ರ ಉತ್ಸಾಹಕ್ಕೆ ಕಾರಣವಾಯಿತು. ತಂಡ ಬಸ್‌ ಮೂಲಕ ನಗರ ಪ್ರವೇಶ ಮಾಡುತ್ತಿದ್ದಂತೆಯೇ ಸಾವಿರಾರು ಅಭಿಮಾನಿಗಳು ‘ಆರ್‌ಸಿಬಿ! ಆರ್‌ಸಿಬಿ!’, ‘ಈ ಸಲ ಕಪ್ ನಮ್ದು!’ ಘೋಷಣೆಗಳೊಂದಿಗೆ ಅವರನ್ನು ಸ್ವಾಗತಿಸಿದರು. ಆರ್‌ಸಿಬಿ ಆಟಗಾರರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿನಂದಿಸಿದರು.

ವಿಧಾನಸೌಧದ ಎದುರು ನಡೆದ ಈ ಅದ್ಧೂರಿ ಕಾರ್ಯಕ್ರಮದ ಆರಂಭ ನಾಡಗೀತೆಯೊಂದಿಗೆ ನಡೆಯಿತು. ಆರ್‌ಸಿಬಿ ಆಟಗಾರರು ಎಲ್ಲರೂ ನಾಡಗೀತೆಗೆ ಗೌರವದಿಂದ ನಿಂತಿದ್ದು, ಈ ದೃಶ್ಯ ರಾಜ್ಯದ ಹೆಮ್ಮೆಯ ಕ್ಷಣವಾಗಿ ಎಲ್ಲರ ಕಣ್ಗಳಲ್ಲಿ ಅಪ್ಪಳಿಸಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಂಡದ ಆಟಗಾರರನ್ನು ಗೌರವಿಸಿ ಸನ್ಮಾನಿಸಿದರು. ಆರ್‌ಸಿಬಿ ತಂಡವು ಐಪಿಎಲ್ ಇತಿಹಾಸದಲ್ಲಿ 18 ವರ್ಷಗಳ ಬಳಿಕ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಜಯದ ಹಬ್ಬದ ಹರ್ಷೋಲ್ಲಾಸವಿದೆ.